Tuesday, May 29, 2012

Nanna Barahagalu



                                                        ನನ್ನ ಬರಹಗಳು  

    
           ಮನ
 ಕಂಡೆ ನನ್ನಲ್ಲಿ ಏನೋ ಹೊಸತನ ...
 ಅದಕೆ ನೀ ತಾನೇ ಕಾರಣ ?...
 ನಿನ್ನ ನೋಡಿ ಹಂಬಲಿಸುತ್ತಿದ್ದ ಮನ....
 ಕೊನೆಗೂ ಮೌನವಾಯಿತು ನೀನಿಲ್ಲದ ಕ್ಷಣ...!!!

           ಹಾಯಾಗಿ
ಹೋದೆ ನೀ ಎಲ್ಲಿ ಮರೆಯಾಗಿ...
ದಿನ ನೆನೆದು ಕಾದಿರುವೆ ನಿನಗಾಗಿ...
ನೀನಿದ್ದರೆ ಸಾಕು ಜೊತೆಯಾಗಿ...
ನಾನಿರುವೆ ಕಡೆತನಕ ಹಾಯಾಗಿ...!!!

           ಸಂಗಾತಿ
ಕುಡುಕನಾದೆ ಹಳೆ ಹುಡುಗಿಯ ನೆನಪಿಗಾಗಿ ...
ಬದುಕು ಬೇಸರವೆನಿಸಿದೆ ಒಂಟಿತನ ಸಾಕಾಗಿ...
ಹುಡುಕ ಹೊರಟಿದೆ ಕಣ್ಣುಗಳು ಬಾಳ ಸಂಗಾತಿಗಾಗಿ ...
ಮನವು ಕಾಯುತಿದೆ ಅವಳ ಹೊಸ ಪ್ರೀತಿಗಾಗಿ...!!!    

           ಕಣ್ಮುಚ್ಚುವ ಮುನ್ನ
ಬಿಟ್ಟಿರಲಾರೆನು ಒಂದು ಕ್ಷಣವೂ  ನಿನ್ನ...
ರೆಪ್ಪೆ ಮುಚ್ಚದೆ ಕಾಯುತಿರುವೆ ನೀ ಬರೊ ಹಾದಿಯನ್ನ ...
ಬಿಗಿದಪ್ಪಿಕ್ಕೋ ಒಮ್ಮೆ ನನ್ನ ...
ನಾ ಕಣ್ಮುಚ್ಚುವ ಮುನ್ನ ...!!!

           ಏನೂ ಹೇಳದೆ
ಏನೂ ಹೇಳದೆ ಹಾಗೆ ಹೋದೆಯಲ್ಲೇ ...
ಕನಸಿನಲೇ ಬಂದು ಕಾಡುತಿಹೆಯಲ್ಲೇ ...
ಬದುಕುವೆನು ನಿನ್ನ ಹಂಗಿನಲ್ಲೇ ...
ಪ್ರಾಣ ಬಿಡುವೆನು ನಿನ್ನ ನೆರಳಿನಲ್ಲೇ ...!!!

           ಹುಚ್ಚ
ಏನೋ ಹೇಳಲೆಂದು ನಿನ್ನ ಸನಿಹಕೆ ಬಂದೆ...
ಹೇಳಲಾಗದೆ ಅಂದು ನಾ ನೊಂದೆ ...
ಅರಿವಾಗದೆ ನಿನಗೆ ಅಂದೇ ...
ಹುಚ್ಚಾನಾಗಿದ್ದೆ ನಾ ನಿನ್ನ ಹಿಂದೆ ...!!!

           ಅದಿತಿ
ಎಲೆ ಅದಿತಿ ಏನ್ ಚಂದ ಕಾಣಿಸ್ತಿ ...
ನೀ ತುಂಬಾ ಕಾಡಿಸ್ತಿ ...
ನನಗೂ ನಿನ್ನ ಮ್ಯಾಲೆ ಮನಸೈತಿ ...
ಆಗದಿರಲಿ ನನ್ನ ಬದುಕು ಟಿಶ್ಯೂ ಪೇಪರ್ ನ ಗತಿ ...!!!

           ಮಲೆಯಾಳಿ ಕುಟ್ಟಿ
ಎಲೆ ಮಲೆಯಾಳಿ ಕುಟ್ಟಿ, ...
ಕೈ ಕೊಟ್ರೆ ನೀ ಕೆಟ್ಟಿ ...
ಕೊನೆಗೂ ಬಂದೆಯಲ್ಲಾ ನೀ ಮನಸಿಟ್ಟಿ ...
ಒಂದಾಗೋಣ ಸ್ವರ್ಗದ ಬಾಗಿಲ ತಟ್ಟಿ ...!!!

           ಸುಚಿತ್ರ
ಹೆಸರೇ ಹೇಳುವುದು ನೀನು ಒಂದು ಸುಂದರ ಚಿತ್ರ ...
ರುಚಿ ಇರದ ಚಹಾ ...ಬಿಡಿಸಲಾಗದ ನಿನ್ನ ಕಲ್ಪನೆಯ ಚಿತ್ರ ...
ಬರಿ ಚಹಾ ಕುಡಿದರೆ ಏನೈತಿ ಅದರಾಗೆ ರುಚಿ ...
ಸುಚಿ ನಿನ್ನ ಜೊತೆ ಕುಡಿದರೆ ಮಾತ್ರ ಸಿಗುತೈತಿ ಅದರ ಸವಿರುಚಿ ...!!!

           ಹಂಬಲ
ನಿನ್ನ ನೋಡದೆ ದಿನ ಒಂದೂ ಕಳೆಯಲಿಲ್ಲ ...
ಒಮ್ಮೆಯೂ ನೀ ತಿರುಗಿ ನೋಡಲಿಲ್ಲ ...
ನೀ ಇರದ ಕನಸ ಕಾಣಲಿಲ್ಲ ...
ಹೇಗೆ ಹೇಳಲಿ ನನ್ನ ಮನದ ಹಂಬಲ ...!!!

           ಛಾಯೆ
ಕೂದಲಿನ ಅಂಚಿನಲಿ ಕಾಣುತಿತ್ತು ಚೆಲುವಿನ ಛಾಯೆ ...
ಕಣ್ಣುಗಳು ಹುಡುಕಲು ನಿನ್ನೇ...ಅದೇನೋ ನೀ ಮಾಡಿದೆ ಮಾಯೆ ...
ಸ್ನೇಹ ಪರಿತಪಿಸುತಿತ್ತು ಕಾದ ಒಂದು ವರುಷ ನಿನಗಾಗಿಯೇ ...
ಕಂಡಕ್ಷಣ ನಿನ್ನ ನಗುವೊಂದೇ ಬಯಸುವೆ ... ಓ ನನ್ನ ಸಖಿಯೆ ...!!!

           ಕಂದ
ಕೇಳಿದೆ ಗೆಳೆಯನೊಬ್ಬನ ಯಾರವಳೆಂದು ...
she is engaged ಅಂದ ...
ಆಗಬಾರದಿತ್ತೆ ನೀ ನನ್ನವಳ ನಂದ ...
ಕೊಡುತ್ತಿದ್ದೆ ಕೈಗೊಂದ ಕಂದ ...!!!

           ದುಷ್ಟ
ನಿನ್ನ ಕಂಡರೆ ನನಗೆ ತುಂಬಾ ಇಷ್ಟ ...
ಹೇಳಲು ಮೂರು ಪದ ಬಲು ಕಷ್ಟ ...
ನಿನ್ನ ನಗು ಮುಖದಿಂದ ಸ್ಫೂರ್ತಿ ಬಂದಿದ್ದಂತೂ ಸ್ಪಷ್ಟ ...
ಇಷ್ಟ ಕಷ್ಟ ಗಳ ನಡುವೆ ಸ್ಪಷ್ಟವಾಯಿತು ನಾನೊಬ್ಬ ದುಷ್ಟ ...!!! 

           kora kaagaz
ತುಂತುರು ಮಳೆಯಲ್ಲಿ ನೆನೆಯುವ ಆಸೆ ...
ಪ್ರತಿ ಹನಿಯಲ್ಲೂ ನಿನ್ನದೇ ಸ್ಪರ್ಶ ...
ಮಳೆಯೇ ಬಾರದಿದ್ದರೆ ...
ಮೇರ ಜೀವನ kora kagaz...!!!

          ಅಂತರಾಳದ ಪ್ರೀತಿ
ಏನೋ ಹೇಳಲೆಂದು ನಿನ್ನ ಸನಿಹಕೆ ಬಂದೆ ...
ಮಾತುಗಳೇ ಮರೆಯಾದವು, ಭಾವನೆಗಳೇ ನಾಚಿದವು ...
ಹೇಗೆ ಹೇಳಲಿ ನನ್ನ ಅಂತರಾಳದ ಪ್ರೀತಿ ...
ನನ್ನ ಕಣ್ಣೋಳಗಿರುವ ನಿನ್ನ ಪ್ರತಿಬಿಂಬವೇ ಇದಕ್ಕೆ ಉತ್ತರ ...!!!

          ಆ-ನಂದ
ನಾವು ಮೊದಲ ಸಲ ಪ್ರೀತಿಸಿದ ಹುಡುಗಿ ಸಿಕ್ಕರೆ ...
ನಮಗೆಷ್ಟು ಆನಂದ ...
ಕಂಡಕ್ಷಣ ಮನಸು ಕಣ್ಣೀರ ಬೆಂಕಿಯಲ್ಲಿ ಬೆಂದಂತಾಯಿತು ...
ಏಕೆಂದರೆ ಅವಳ ಜೊತೆ ಇದ್ದಿದ್ದು ಆ "ನಂದ"...!!!

          ಪ್ರೇಮದ ಪರಿ
ಪ್ರತಿದಿನವೂ ಬರುತ್ತಿದ್ದ ಕರೆ ಅಂದು ನಿಂತಿತು ...
ಏಕೋ ನಾ ಅರಿಯೇ...
ಬೇಡವಾದೇನೆ  ನಾ...
ಓ ನನ್ನ ಪ್ರೇಮದ ಪರಿಯೇ...!!!

          ಪಾರು
ಹೇ ಪಾರು ... ಮಾಡದಿರು ನೀ ತಕರಾರು ...
ಸಿಗಲಾರರು ನಿನಗೆ ಬೇರಾರು ...
ಪರಿಕ್ಷಿಸಬೇಡ ನನ್ನ ಕಣ್ಣಿರು ...
ನನ್ನ ನೆತ್ತರಿನಲ್ಲಿ ಹರಿಯುತಿಹುದು ನಿನ್ನ ಕೊನೆಯ ಉಸಿರು ...!!!

          ಖುಷ್
ಹುಡುಗಿ ಲುಕ್ ಕೊಟ್ಟರೆ ಹುಡುಗ ಖುಷ್ ...
ಹುಡುಗಿ ಸ್ಮೈಲ್ ಕೊಟ್ಟರೆ ಹುಡುಗ ದಿಲ್ ಖುಷ್ ...
ಹುಡುಗಿ ನಕ್ಕರೆ  ಹುಡುಗ ಫುಲ್ ಖುಷ್  ...
ಹುಡುಗಿ ಬೇರೆಯವನ ಜೊತೆ ಇದ್ದರೆ ಹುಡುಗ ಬೇಹೋಷ್ ...!!!

          ದೀಪ
ಪ್ರತಿ ದೀಪಾವಳಿ  ಹಬ್ಬದಂದು ಹಚ್ಚುತ್ತಿದ್ದಳು ಅವರ ಮನೆ ಮುಂದೆ ದೀಪ ...
ಕಣ್ಸೆಳೆತಕ್ಕೆ ಉರಿ ಬೀಳುತ್ತಿದ್ದ ಅವಳಪ್ಪ ಭೂಪ ...
ತಾಂಬೂಲ ಕೊಟ್ಟು ಕೇಳಿಯೇ ಬಿಟ್ಟೆ ತಾಳಲಾರದೆ ನನ್ನ ಮನಸ್ತಾಪ ...
ಅವಳೀಗ ನಮ್ಮ ಮನೆಯ ನಂದಾದೀಪ ...!!!
         
          ಕನಸಲ್ಲ
ಕರೆದಾಗ ಬರಲಿಲ್ಲ, ನಕ್ಕಾಗ ನಗಲಿಲ್ಲ ...
ಕೇಳಿದಾಗ ಮುತ್ತೊಂದ ನೀಡಲಿಲ್ಲ ...
ನಿನ್ನ ನೋಡದೆ ಇರುಳೊಂದ ಕಳೆಯಲಿಲ್ಲ ...
ಇದು ನನ್ನ ಜೀವನ, ನಾ ಕಾಣುವ ಕನಸಲ್ಲ  ...!!!

          ನೀನಿಲ್ಲದೆ
ದಿನವು ಆಫೀಸಿಗೆ ನಿನಗಾಗಿ ನಾ ಬರುತ್ತಿದೆ ...
ಕಣ್ಣುಗಳು ನಿನ್ನನ್ನೇ ನೋಡುತ್ತಿತು ನಿನಗೆ ಗೊತ್ತಿಲ್ಲದೆ...
ಕೆಲಸವೇ ಆಗದು ನೀ ಕಣ್ಮುಂದೆ ಸಾಗದೆ ...
ಇಂದೆತಕೋ ಬೇಜಾರು ನೀನಿಲ್ಲದೆ ...!!!
         
          ದುರಹಂಕಾರ
ಹೆಣ್ಣಿನ ಅಂದಕ್ಕೆ ಹೂವೆ ಸಿಂಗಾರ ...
ಮಕರಂದ ಹೀರಲು ದುಂಬಿಯ ಝೇಂಕಾರ...
ಹಾರೋ ಹಕ್ಕಿಗೆ ಅಲಂಕಾರ ...
ಪ್ರೀತ್ಸೋ ಹುಡುಗಿಗೆ ಏಕೆ ದುರಹಂಕಾರ...!!!  

          ಎಸಳು 
ನಾ ದಿನಾ ಬರೊ ಹಾದಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದಳು ...
ಅವಳ ನೋಡದೆ ಕಳೆಯಲಾಗದು ಒಂದಿರುಳು ...
ಹೂವ ಕೊಟ್ಟು ಹೇಳಿದೆ ತಿಳಿಯದೆ ನಾನಾದೆ ನಿನ್ನ ಮರುಳು  ...
ಸಿಂಡರಿಸಿ ಹೊಸಕಿದಳು ಎಸಳು ...!!!

          ಕ್ಯಾರೆಟ್ ಹಲ್ವ 
ಮೊದಲ ಬೇಟಿಯಲ್ಲೇ ನನ್ನವಳು ತಿನಿಸಿದಳು ಕ್ಯಾರೆಟ್ ಹಲ್ವ ...
ಅಷ್ಟೇ ಸಿಹಿ ಇತ್ತು ಅವಳು ಕೊಟ್ಟಂತಹ ಚುಂಬನ ...
ನನ್ನೆ ನಾ ಮರೆತೆ ಆ ಒಂದು ಕ್ಷಣ ...
ತಿಳಿಯದೆ ಹೋಯಿತು ಅದು ನನ್ನ ಕನಸಿನ ತಾಣ ...!!!
        
          ನೆನಪು
ಕರೆದಾಗ ಬರಲಿಲ್ಲ, ಕೇಳಿದಾಗ ಮುತ್ತಿಡಲಿಲ್ಲ...
ಇಂಪಾದ ಧ್ವನಿ ಕೇಳುವಂತಿಲ್ಲ ...
ಕೊನೆ ಗಳಿಗೆಯಲ್ಲಿ ಒಳ್ಳೆ ಸ್ನೇಹಿತನಾಗಲಿಲ್ಲ ...
ಮನಸಿನ ಪುಟದಲಿ ನೆನಪುಗಳೆ ಎಲ್ಲಾ...!!!

          ಚುಟುಕು
ಕೇಳಿರಿ ಎಲ್ಲಾ ನಾ ಓದೋ ಚುಟುಕು ...
ಸವಿಯುತ ಕಾಫಿಯ ಒಂದು ಗುಟುಕು ...
ಮತ್ತೆ ಕೇಳಬೇಕಿನುಸುವ ಈ ಸಾಲುಗಳ ತುಣುಕು ...
ಚನ್ನಾಗಿದ್ದಲ್ಲಿ ನಿಮ್ಮ ಚಪ್ಪಾಳೆಯೊಂದೆ ಸಾಕು ...!!!

          ಮೂಡ
ಬಾನೆತ್ತರಕ್ಕೆ ಚಿಲಿಪಿಲಿ ಹಕ್ಕಿಗಳು ಹಾರುತಾವ ನೋಡ ...
ಮಳೆರಾಯ ಬರಲು ಸೂಚಿಸೈತಿ ಕಾರ್ಮೋಡ ...
ಹುಡುಗಿ ಹಾಗು ಆಟೋ ಹಿಂದೆ ನೀ ಹೋಗಬೇಡ ...
ಯಾವ ಸಮಯದಲ್ಲಿ ಯಾವ ಕಡೆ ತಿರುಗುತ್ತರೋ ಗೊತ್ತಾಗದೋ ಮೂಡ ...!!!

          ಕನ್ಯೆ
ಸಿಗಲಿಲ್ಲ ಇದುವರೆಗೂ ಯಾವ ಒಂದು ಕನ್ಯೆ ...
ಏಕೆಂದರೆ ಪ್ರೀತಿ ಪರೀಕ್ಷೆಯಲಿ ನನ್ನದು ಬರಿ ಸೊನ್ನೆ ...
ಜೀವನ ಬೇಸರವೆನಿಸಿತು ಯಾಕೋ ಮೊನ್ನೆ ...
ಬೇಸರವ ಮರೆಸಿತು ಒಂದು ಬಾಟಲಿ ಎಣ್ಣೆ ...!!!

          ಕೆಲಸ
PM ಗಳು ಕೊಡುತ್ತಾರೆ ಕೆಲಸ ಒಂದರ ಮೇಲೊಂದರಂತೆ  ...
care ಮಾಡದೆ developers ಗಳ ಚಿಂತೆ ...
ಕೊಡೋದಿಲ್ಲ rating ನಾವ್ ಕೇಳಿದಂತೆ ...
ಪುಕ್ಸಟೆ ಸಲಹೆಗಳ ನೀಡುತ್ತಾರೆ ಮನಬಂದಂತೆ ...!!!

          ಯೋಚನೆ 
ಆಫೀಸಿನಲ್ಲಿ ಕೆಲಸ ಮಾಡಲು ಕೂತರೆ ಏನೋ ಒಂದು ಯೋಚನೆ ...
ಇನ್ನೂ hike letter ಬರಲಿಲ್ಲವೆಂಬ ಯಾತನೆ ...
ಒಂದಂಕಿ hike ಕೊಟ್ಟರು ಎಷ್ಟು ಬರುತ್ತದೆಂಬ ಚಿಂತನೆ ...
ನೋವ ಮರೆಯಲು ಬೇಕು ಎಣ್ಣೆ ಬಾಟಲಿಗಳ ಖಜಾನೆ ...!!!
         
           ಲಕ್ಕು
ಒಂಟಿತನದಲ್ಲಿ ಹುಡುಗಿ ಸಿಕ್ಕಿದ್ದೇ ನನ್ನ ಲಕ್ಕು ... 
ಕೈ ಕಟ್ಟಿ ಕುಳಿತೆ ಇನ್ಯಾರು ನನಗೆ ದಿಕ್ಕು ...
ಬಾಟಲಿಗಳು ಕಾಲಿಯಾದರು ಏರುತ್ತಿಲ್ಲ ಕಿಕ್ಕು ...
ಏಕೆಂದರೆ ಅವಳು ನನ್ನ ಬಾಳಲ್ಲಿ ಬಂದುಹೋದ ಬೆಕ್ಕು ...!!!

           ಹುಡುಗಿಯ ನಗೆ 
ಹುಡುಗಿಯ ಮನಸು, ನೀರ ಮೇಲಿನ ಗುಳ್ಳೆಯ ಹಾಗೆ ...
ಹುಡುಗಿಯ ನಡೆ, ಬಳುಕುವ ಬಳ್ಳಿಯ ಹಾಗೆ ...
ಹುಡುಗಿಯ ಕಣ್ಣೋಟ, ಮೀನಿಗೆ ಗಾಳ ಹಾಕುವ ಹಾಗೆ ...
ಹುಡುಗಿಯ ನಗೆ, ಹುಡುಗನಿಗೆ ಫುಲ್ ಹೊಗೆ ...!!!

           ಸಣ್ಣ ನಗೆ
ಬಸ್ ನಲ್ಲಿ  ಬೀರಿದಳು ಒಂದು ಸಣ್ಣ ನಗೆ ...
ಅವಳ ನಗುವ ಕಾರಣ ಹುಡುಕಲಿ ನಾ ಹೇಗೆ ...
ಕರೆದ ತಕ್ಷಣ ಬಂದಳು coffee dayಗೆ  ...
ಕುರಿಯಾದೆ, ಅವಳಿಗೆ ನಾ ಕಾಮನ ಬಿಲ್ಲಿನ ಏಳನೇ ಬಣ್ಣದ ಹಾಗೆ ...!!!
          
           ಇಲ್ಲಿಯತನಕ 
ಎಲ್ಲಿದ್ದೆ ನೀ ಇಲ್ಲಿಯತನಕ ...
ಬರಲೇನೆ ನಿನ್ನ ಮನೆಯತನಕ ...
ಬಿಡುವುದಿಲ್ಲ ನಿನ್ನ ಸಿಗುವತನಕ ...
ಕಾಯುವೆ ನಾ ಕೊನೆಯತನಕ ...!!!

           ಸುಂದರಿ 
ಸುಂದರಿ ನಿನ್ನ ನೋಡದೆ ಹೋದರೆ ಕಣ್ಣುರಿ ...
ತಳುಕು ಬಳುಕಿನ  ವೈಯಾರಿ ...
ಸೀರೆ ಉಟ್ಟರೆ ನೀ ಪಕ್ಕಾ ಭಾರತೀಯ ನಾರಿ ...
ಜೀನ್ಸ್ ತೊಟ್ಟರೆ, ನೋಡಲಾಗದು ಸಾರಿ...!!! 

            ಸೀರೆ
ನೀರ ಮೆಚ್ಚುವ ನೀ ಜಲಧಾರೆ ...
ಸೊಂಟದಲ್ಲಿ ಅವಿತು ಕುಳಿತಿರುವ ನೆರಿಗೆಯ ಧಾರೆ ...
ಹೆಣ್ಣಿನ ಅಂದವನ್ನು ಹೆಚ್ಚಿಸುವ ಅಮೃತಧಾರೆ ...
ಸೀರೆ ಉಟ್ಟ ಚೆಲುವೆ ನೀನ್ಯಾರೆ ...?
           
            ಪ್ರೀತಿ ಇಲ್ಲದ ಮೇಲೆ
ಪದವಿರದ ಕವನ ಖಾಲಿ ಹಾಳೆಯಾಗಿತ್ತು ...
ಖುಷಿ ಕೊಡುವ ಹಾಡು ದುಃಖದ ಕಣ್ಣೀರಾಗಿತ್ತು ...
ಪ್ರೀತ್ಸೋ ಹುಡುಗಿಗೆ ಮೊಗ್ಗು ಕೊಟ್ಟಾಗ ಅರಳಿ ಹೂವಾಗಿತ್ತು ...
ಪ್ರೀತಿ ಇಲ್ಲದ ಮೇಲೆ ಮುದುಡಿ ಮುಳ್ಳಾಗಿತ್ತು ...!!!
            
            ಪ್ರೀತಿಸಿದ ಹುಡುಗಿ  
ಪ್ರೀತಿಸಿದ ಹುಡುಗಿ ಮುತ್ತಿಟ್ಟಾಗ ಸವಿ ಜೇನಿನಂತಿತ್ತು ...
ಮುಖ ಮುನಿಸಿಕೊಂಡಾಗ ಜೇನು ಕಡಿದಂತಿತ್ತು ...
ಅವಳು ವಿಷ ಕೊಟ್ಟರೂ ಅಮೃತದಂತಿತ್ತು ...
ಪ್ರೀತಿ ಇಲ್ಲದ ಮೇಲೆ ಕುಡಿದ ಎಣ್ಣೆಯೂ ವಿಷವಾಗಿತ್ತು ...!!!

            ಪ್ರೀತಿ 
ಪ್ರೀತಿ ಎಂಬ ಹುಡುಗಿಯ ಪರಿಚಯವಾಯಿತು ...
ಮೊಗ್ಗು ಕೊಟ್ಟಾಗ ಹೂವಾಗಿ ಅರಳುವಾಗ ಪ್ರೀತಿ ಹುಟ್ಟಿತು ...
ಅವಳು ಒಲ್ಲದ ಮನಸಿಗೆ ಹೂವು ಬಾಡಿಹೋಯಿತು ... 
ಪ್ರೀತಿ ಸಿಗದ ಹುಡುಗಿಯ ಹಿಂದೆ ತಿರುಗಿ ಜೇಬು ಕಾಲಿಯಾಯಿತು ...!!!
           
            ವ್ಯತ್ಯಾಸ
ಹೆಣ್ಣಿಗೂ ಎಣ್ಣೆಗೂ ಏನೂ ವ್ಯತ್ಯಾಸ ...
ಹೆಣ್ಣು ಕೈ ಕೊಟ್ಟರೆ ಗಂಡು ದೇವದಾಸ ...
ಹೆಣ್ಣಿನ ಗಾಯ ಮರೆಸಲು ಎಣ್ಣೆಯೇ ರಾಮರಸ ...
ಇಬ್ಬರು ಜೀವನದಲ್ಲಿ ಹಾನಿಯಾಗುವ ಪಾದರಸ ...!!!
           
            ಆನಂದ 
ಜನರಿಗೆ ಅರಿವು ಮೂಡಿಸಿದ ಅವರಲ್ಲಿ ಹುದುಗಿರುವ ಆತ್ಮಾನಂದ ...
ಕುಣಿದು ಕುಪ್ಪಳಿಸಿದ ಜನರಿಗೆ ಎಲ್ಲಿಲ್ಲದ ಆನಂದ ...
ಬಿಡದಿ ಆಶ್ರಮದಲ್ಲಿ ನಿತ್ಯವೂ ಆನಂದ ...
ಮೂರು ಬಿಟ್ಟವ ಜೈಲು ಸೇರಿದ ಕಾಮಿ ನಿತ್ಯಾನಂದ ...!!!

            ಎನ್ನಡ-ಎಕ್ಕಡ  
ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಎನ್ನಡ, ಎಕ್ಕಡ ...
ನೆಲೆಸಿಹರು ಅಲ್ಲಲ್ಲಿ ಮಲ್ಲುಗಳ ಪಂಗಡ ...
ಕಲಿಯಲಿಲ್ಲ ಒಂದು ಅಕ್ಷರಹೂ ಸಹ ಕನ್ನಡ ...
ಬರೆಯುತ್ತಾರೆ ಕನ್ನಡ, ಜಿಲೇಬಿ ಸುತ್ತುಗಳ ಎಬಡ ...!!!
           
            ಕನ್ನಡ 
ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಎನ್ನಡ, ಎಕ್ಕಡ ...
ಹುಡುಕಬೇಕು ಎಲ್ಲಿಹುದು ಕನ್ನಡ ...
ಮರೆಯದಿರಿ ಎಂದಿಗೂ ನೀವು ಸಿರಿಗನ್ನಡ ...
ಚಿಮ್ಮುತಿರಲಿ ಎಲ್ಲರ ಎದೆಯಲಿ ಎಂದಿಗೂ ಕನ್ನಡ ಕನ್ನಡ ...!!! 

            ಮಣ್ಣು
ಸತ್ತ ಮೇಲೆ ಏನೈತೆ ಬರಿ ಮಣ್ಣು ...
ಬದುಕಿದ್ದಾಗ ಬೇಕು ಎರಡು ಕಣ್ಣು ...
ಆರೋಗ್ಯಕ್ಕೆ ಬೇಕು ಬಾಳೆ ಹಣ್ಣು ...
ಮನೆ ಬೆಳಗಲು ಬೇಕು ನಗು ನಗುತ ಬಾಳೋ ಹೆಣ್ಣು ...!!!

             ಖಾವಿ ತೊಟ್ಟವ  
ಖಾಕಿ ತೊಟ್ಟವ ಪೋಲಿಸ್ ಆದ ...
ಖಾದಿ  ತೊಟ್ಟವ ಗಾಂಧೀ ಆದ ...
ಮಡಿ ತೊಟ್ಟವ ಪೂಜಾರಿ ಆದ ...
ಖಾವಿ ತೊಟ್ಟವ ಕಾಮಿ ಆದ ...!!!

              ಹೆಣ್ಣೇ 
ಎಲೆ ಊಸರವಳ್ಳಿಯ ಹೆಣ್ಣೇ ...
ಕಿತ್ತು ಬಿಡಲೇನೇ ನಿನ್ನ ಕಣ್ಣೇ ...
ಹುಟ್ಟಿದಾಗಿನಿಂದ ಹಾಕಿರಲಿಲ್ಲ ತಲೆಗೆ ಎಣ್ಣೆ ...
ಹಾಕುವಂತೆ ಮಾಡಿದೆಯಲ್ಲ ಇಂದು ತಲೆಗೆ ಏರುವ ತನಕ ಎಣ್ಣೆ ...!!!
             
              ಕಾಳಜಿ
Internet ಬಳಕೆಗೆ ಬಂದಿತು 2G , 3G ...
Mobile connections ಗೆ ಬಂತು CUG ...
ಸದನದಲ್ಲಿ ಸುಮ್ಮನೆ ತಲೆಯಾಡಿಸುತ್ತಿರುವ Manmohan Ji ...
ತೋರಿಸಿರಿ ಬಡ ಜನರಲ್ಲಿ ಸ್ವಲ್ಪ ಕಾಳಜಿ ...!!!
             
              Simple 
ಹುಡುಗಿ ನೋಡೋದಕ್ಕೆ ತುಂಬಾ simple ...
ಇರಲಿಲ್ಲ ಅವಳಿಗೆ ಮುಖದ ಮೇಲೆ pimple ...
ನಕ್ಕಾಗ ಬೀಳುತ್ತಿತ್ತು ಕೆನ್ನೆ ಮೇಲೆ dimple ...
ಅತ್ತಾಗ ಜಿನುಗುತ್ತಿತ್ತು ಅವಳ ಕಣ್ಣೀರ sample ...!!!
             
              ಜೊತೆಗೆ ಬಂದ್ರೆ
ನೀ ನನ್ನ ಪ್ರೀತ್ಸೋದಾದ್ರೆ , ನಿನ್ನ ಹೃದಯದಲ್ಲಿ ಸದಾ ಇರ್ತೀನಿ ...
ನೀ ನನ್ನ ದ್ವೇಷಿಸೋದಾದ್ರೆ , ನಿನ್ನ ತಲೆತುಂಬ ತುಂಬ್ಕೊಂಡ್ ಇರ್ತೀನಿ ...
ನೀ ನನ್ನ ಮರೆತರೆ, ಕನಸಿನಲ್ಲಿ ಬಂದು ಕಾಡ್ತೀನಿ ...
ನೀ ನನ್ನ ಇಷ್ಟಪಟ್ರೆ , ನಿನ್ನ ಕಣ್ಣಲ್ಲಿ ನನ್ನ ನಗು ಕಾಣ್ತೀನಿ ...
ಕೈ ಹಿಡಿದು ಜೊತೆಗೆ ಬಂದ್ರೆ , ಸಾಯೋವರ್ಗೂ ಜೊತೇಲೆ ಇರ್ತೀನಿ ...!!!
             
              ಫಲವಿಲ್ಲ
ಇಷ್ಟ ಪಟ್ಟ ಹುಡುಗಿ ಸಿಗಲಿಲ್ಲ ...
ಕಷ್ಟ ಪಟ್ಟು ಹುಡುಗೀನ ಪಟಾಯಿಸಲಿಲ್ಲ  ...
ಆಫೀಸ್, ಮನೆ ಹೀಗೆ ಕಾಲ ಕಳೆದೆನಲ್ಲ ...
ಕಳೆದು ಹೋದ ದಿನಗಳ ಚಿಂತಿಸಿ ಫಲವಿಲ್ಲ ...!!!
             
              ಹಣ್ಣು - ಹೆಣ್ಣು
ರುಚಿ ಇರದ ಹಣ್ಣಿಲ್ಲ ...
ಅಂದ ಚಂದ ಇರದ ಹೆಣ್ಣಿಲ್ಲ ...
ಕಚ್ಚಿ ತಿನ್ನದ ಹಣ್ಣಿಲ್ಲ ...
ಮುತ್ತು ಒಲ್ಲೆ ಎನ್ನದ ಹೆಣ್ಣಿಲ್ಲ ...!!!

              ಹೆಣ್ಣು - ಎಣ್ಣೆ 
ಲುಕ್ಕು ಕೊಡದ ಹೆಣ್ಣಿಲ್ಲ ...
ಕಿಕ್ಕು ಹೊಡೆಯದ ಎಣ್ಣೆ ಇಲ್ಲ ...
Lip to lip ಕೊಡದ ಹೆಣ್ಣಿಲ್ಲ ...
Sip by sip ಏರಿಸದ ಎಣ್ಣೆ ಇಲ್ಲ ...!!!

              ದೊಡ್ಡಪ್ಪ  
ಪಕ್ಷ ಪಕ್ಷ ಎಂದು ಪಟ್ಟುಬಿಡದೆ ಓಡಾಡುತ್ತಿರುವ ಈಶ್ವರಪ್ಪ  ...
ಸಹೋದರಿಯಂತಿದ್ದರು ಬಿಡಲಿಲ್ಲ ಹಾಲಪ್ಪ ...
ನರ್ಸಮ್ಮನ ಮುತ್ತಿಗೆ ಮಾರೋದ ರೇಣುಕಪ್ಪ ...
ಇವರಿಗೆಲ್ಲ ಯಾರು ದೊಡ್ಡಪ್ಪ ...
ಒಂದೇ ಕಣ್ಣಲ್ಲಿ ಕುರ್ಚಿಗಾಗಿ ಅಳುತ್ತಿರುವ ಯಡಿಯೂರಪ್ಪ ...!!!

              ಹೊರತು 
ಕಣ್ಣೆತ್ತಿಯೂ ನೋಡಿರಲಿಲ್ಲ ಬೇರೆ ಯಾರನ್ನೂ ನಿನ್ನ ಹೊರತು ...
ತಿರುಗಿ ನೋಡದೆ ಹಾಗೆ ಹೋದೆಯಲ್ಲ ಪ್ರೀತಿ ಮರೆತು ...
ನೆಲೆ ಸಿಗದ ಹೂ ಮುಡಿ ಜಾರಿತು ...
ಎದೆಯಲ್ಲಿ ಹಾಗೆ ಉಳಿಯಿತು ನಿನ್ನ ಹೆಜ್ಜೆ ಗುರುತು ...!!!

              ಅಮ್ಮ 
ಮಕ್ಕಳು ಮನೆ ತುಂಬಾ ಕೂಗುವ ಅಮ್ಮ ಎನ್ನುವ ಆಲಾಪನ ...
ಹಸಿದಾಗ ಕೈತುತ್ತು ಉಣಿಸಿ ನೀಗಿಸುವಳು ದಾಹ ನ ...
ನೋವಾದಾಗ ಧೈರ್ಯ ತುಂಬಿ ಹೇಳುವಳು ಸಮಧಾನ ...
ತರಿಸದಿರಿ ಎಂದಿಗೂ ಅವಳಿಗೆ ಕಣ್ಣೀರ ಕಂಪನ ...
ಹೊತ್ತು, ಹೆತ್ತು, ಸಾಕಿ ಸಲುಹಿದ ಅಮ್ಮ, ನಿನಗೆ ಕೋಟಿ ಕೋಟಿ ನಮನ ...!!!

              ಮುತ್ತು ಕೊಟ್ಟೋಳ
ಕತ್ತು ಕೊಯ್ಯೋರ ಜೊತೆ ಸೇರಬೇಡ ...
ಕಿತ್ತು ತಿನ್ನೋರ ಹತ್ತಿರ ಸೇರಿಸಬೇಡ ...
ತುತ್ತು ಕೊಟ್ಟೋಳ ಕೊಲಬೇಡ ...
ಮುತ್ತು ಕೊಟ್ಟೋಳ ತುತ್ತಾಗಬೇಡ ...!!!
             
              ಎಕ್ಕುಟ್ಹೋಯ್ತು
ಡಿಗ್ರಿ ಮುಗಿತು, ಕೈ ಖಾಲಿ ಆಯಿತು ...
ಕೆಲಸ ಸಿಕ್ತು, ಜೊತೆಗೆ promotion ಆಯಿತು ...
ಕುಡಿಯೋದ ಬಿಟ್ಟೆ, ಮಾಡುವೆ ಆಯಿತು ...
ಎಲ್ಲಾ ಮುಗಿತು, ಲೈಫ್ ಎಕ್ಕುಟ್ಹೋಯ್ತು ...!!!

              ರೈತ 
ಕೈಕಟ್ಟಿ ಕುಳಿತ ರೈತ ಮಳೆ ಬರದೆ ಕಂಗಾಲಾಗಿ ...
17 ಕೋಟಿ ವೆಚ್ಹ ಮಾಡಿತು ಸರ್ಕಾರ ಮಳೆಗಾಗಿ ...
ಮಳೆ ಬಂದಲ್ಲಿ ಸಿಗುವುದು ರೈತನಿಗೆ ಅಕ್ಕಿ, ರಾಗಿ ...
ಇಲ್ಲವಾದಲ್ಲಿ ಆಗುವನು ಆಸ್ಪತ್ರೆಯ ರೋಗಿ ...!!!

              ಹೋಗೋ ದಾರಿಯಲ್ಲಿ
ಹೋಗೋ ದಾರಿಯಲ್ಲಿ ಬೆಕ್ಕು ಅಡ್ಡ ಬರಬಾರದು ...
ಹೊಸ ಜೀವನದಲ್ಲಿ ಹಳೇ ಹುಡುಗಿ ನೆನಪಾಗಬಾರದು ...
ಹಸಿದ ಹೊಟ್ಟೆಗೆ, ಉಡೊ ಬಟ್ಟೆಗೆ ಮೋಸ ಮಾಡಬಾರದು ... 
ಆಫೀಸ್ ನಲ್ಲಿ ಪಿಟೀಲ್ ಕುಯ್ಯೋ meeting ಗಳಂತೂ ಇರಲೇಬಾರದು ...!!!
             
              ಮುನಿಸಿಕೊಂಡಾಗ
ಪದವಿರದ ಕವನ ಖಾಲಿ ಹಾಳೆಯಾಗಿತ್ತು ...
ಖುಷಿ ಕೊಡುವ ಹಾಡು ದುಃಖದ ಕಣ್ಣೀರಾಗಿತ್ತು ...
ಪ್ರೀತ್ಸೋ ಹುಡುಗಿ ಮುತ್ತಿಟ್ಟಾಗ ಸವಿ ಜೇನಿನಂತಿತ್ತು ...
ಮುಖ ಮುನಿಸಿಕೊಂಡಾಗ ಜೇನು ಕಡಿದಂತಿತ್ತು ...!!!

              ಖಾಲಿ ಹಾಳೆ
ಖಾಲಿ ಹಾಳೆ ಮೇಲೆ ಗೀಚೋರೆಲ್ಲ ಕವಿಗಳಲ್ಲ ...
ಹಾಡು ಬರೆಯುವವರೆಲ್ಲ ಹಾಡುಗಾರರಲ್ಲ ...
ಜೊತೆಗೆ ಓಡಾಡೋರೆಲ್ಲ ಪ್ರೇಮಿಗಳಲ್ಲ ...
ಜೀನ್ಸ್ ಹಾಕೋರೆಲ್ಲ figure ಗಳಲ್ಲ ...!!! 


              ಸಾಗರದಷ್ಟು
ತುಂಬಿದ ಕೊಡ ತುಳುಕುವುದಿಲ್ಲ ...
ಆಡೋ ಮಾತು ತಪ್ಪೋದಿಲ್ಲ ...
ಇಟ್ಟಿದ್ದ ಗುರಿ ತಪ್ಪಿರಲಿಲ್ಲ ...
ಸಾಗರದಷ್ಟು ಹಿಂಸಿಸಿದರು ಎಳ್ಳಷ್ಟೂ ಪ್ರೀತಿ ಸಿಗಲಿಲ್ಲ ...!!!


               ಸೈಟು
ಬೆಂಗಳೂರಿನಲ್ಲಿ 30x40 ಸೈಟು ...
ತಗೊಳೋಕ್ಕೆ ಬೇಕು ಒಂದು onsite-u ...
ಅದಕ್ಕಾಗಿ ದುಡಿತೀವಿ ಎಷ್ಟೋ ಸಲ ಲೇಟ್ ನೈಟ್-u ...
ಎಷ್ಟೋ ನೈಟ್ ಗಳು ಕಳೆದರು ಹತ್ತಲಿಲ್ಲ ಒಂದೂ flight -u ...!!! 
              
               ಮನ್ನಿಸು
ದಯಮಾಡಿ ಒಮ್ಮೆ ನನ್ನ ಮನ್ನಿಸು ...
ಕೃಪೆತೋರಿ ಬೆಳಕಿನ ಕಡೆಗೆ ನಡೆಸು ...
ಕೋಪಗೊಳ್ಳದೆ ಕಣ್ಣೀರ ತ್ಯಜಿಸು ...
ಹಸನ್ಮುಖಳಾಗಿ ನಗು ನಗುತ ನನ್ನ ಸ್ವೀಕರಿಸು ...!!!


                ನಡಿ
ಬೆಳಗ್ಗೆ fresh ಆಗಿ ಆಫೀಸ್ ಗೆ ನಡಿ ...
ಗಂಟೆಗೊಂದ್ಸಲ ಕಾಫಿ ಟೀ ಕುಡಿ ...
ಸಂಜೆ ತನಕ ದುಡಿ ...
ಸಂಜೆ ಮೇಲೆ ಕುಡಿ ...!!!
 
                ಆಸೆ 
ತುಂತುರು ಮಳೆಯಲಿ ನೆನೆಯುವ ಆಸೆ ...
ಚುಮು ಚುಮು ಚಳಿಯಲಿ ಬಿಗಿದಪ್ಪಿಕೊಳ್ಳುವ  ಆಸೆ ...
ಬೀಸೋ ತಂಗಾಳಿಯಲಿ ಕೈ ಹಿಡಿದು ನಡೆಯೋ ಆಸೆ ...
ಇವೆಲ್ಲ ಪ್ರೀತ್ಸೋ ಹೃದಯಗಳ ಮನದಾಸೆ ...
ಪ್ರೀತಿ ಸಿಗದ ಹೃದಯಗಳಿಗೆ ಬರಿ ಖಾಲಿ ಸೀಶೆ ...!!!

                ಕಾರಣ 
ಅಪಘಾತಕ್ಕೆ ಅವಸರವೇ ಕಾರಣ ...
ತಿಳಿದು ಪ್ರೀತಿಸಿದೆ ನಿನ್ನ ವಿನಾಕಾರಣ ...
ಯಾವುದೊ ದಾರಿ ಎಲ್ಲಿಗೋ ಪಯಣ ... 
ದೂರ ತೀರಕೆ ಸಾಗುತಿರುವೆ ನೀ ಸಿಗದ ಕಾರಣ ...!!!
               
                ಮೂರು 
ಮೂರು ನಿಮಿಶದಲಿ ಬಂದು ಹೋದಂತಿತ್ತು ಬಾಳ ಸಂಗತಿಯಾಗುವ ಮಿಂಚು ...
ಮೂರು ತಿಂಗಳ ಒಡನಾಟದಲ್ಲಿ ಮಂಚು ಕೊಟ್ಟಾಗ ನನ್ನವಳ ನಗು ಕೋಲ್ಮಿಂಚು ...
ಮೂರು ಗಂಟು ಬಿದ್ದಾಗ ಅವಳು ಎಲ್ಲರೊಂದಿಗೆ ಹೊಂದಾಣಿಕೆಯ ಹಂಚು ...
ಮೂರು ತಿಂಗಳ ನಂತರ ತಿಳಿಯಿತು ಅವಳು ಹಂಚಲ್ಲ , ಕಾದ ಹೆಂಚು ...!!!
               
                ಗಗನಕ್ಕೆ ಪಾತಾಳಕ್ಕೆ 
ನನ್ನ ತಿಂಡಿ ತಿನಿಸು ಏನಿದ್ದರು ಶಾಂತಿ ಸಾಗರ್, ಉಡುಪಿ ಉಪಹಾರ್ ...
ನನ್ನವಳು ಕೇಳೋದು KFC , Mc Donalds ದಿನಾ Pizza , Burgar ...
ನನ್ನ ಉಡುಗೆ ತೊಡುಗೆ ಏನಿದ್ದರು ರೋಡ್ ಸೈಡ್ ಲೋಕಲ್ ಮಾಲ್
ನನ್ನವಳು ಕೇಳೋದು Forum , Garuda maal , Orion maal ...
Weekends ನಲ್ಲಿ navrang , veeresh theatre fix
ನನ್ನವಳು ಕೇಳೋದು ಪಿವಿಆರ್, INOX , Multiplex
Credit card bill ಗಗನಕ್ಕೆ, Account balance ಪಾತಾಳಕ್ಕೆ ...!!!
               
                 ಬೆಲೆ
ಓಡೊ ಕುದುರೆಗೆ ಮಾತ್ರ ಬೆಲೆ ...
ನಿಂತರೆ ಅದಕ್ಕೆಲಿದೆ ನೆಲೆ ...
ಏಳೋ ಮನುಜ ಎದ್ದೇಳು ನೀ ಒಂದು ಸಾಗರದ ಅಲೆ ...
ಸುಮ್ಮನೆ ಕೈಕಟ್ಟಿ ಕುಳಿತರೆ ನಿನಗೆಲ್ಲಿದೆ ಬೆಲೆ ...!!!

                Flower - Figure 
ಗಿಡಕ್ಕೆ ನೀರು ಬಿದ್ದಾಗ ಮೊಗ್ಗು ಅರಳಿ flower ಆಗತ್ತೆ ..
diet ಮಾಡೋ ಹುಡುಗಿ ಬೆಳೆದು figure ಆಗತ್ತೆ ...
ನೆಲೆ ಸಿಗದ flower ಮುಡಿ ಜಾರಿ ಕೆಳಗೆ ಬೀಳತ್ತೆ ...
ಪ್ರೀತಿ ಸಿಗದ figure ಓಡಿ ಹೋಗತ್ತೆ ...!!!

                ಮುತ್ತು 
ಮುತ್ತು ಮತ್ತೇರಿಸುವ ಗಮ್ಮುತ್ತು ...
ತುಟಿ ಅಂಚಿನಲಿ ಏನು ಅದರ ಕರಾಮತ್ತು ...
ಒಂದು ಮುತ್ತಿಗೆ ಸಾಲದ ಹೊತ್ತು ...
ಮೈ ಮನ ನವಿರೇಳಿಸಿ ತಲ್ಲಣ ಗೊಳಿಸುವ ಮುತ್ತಿನ ತಾಕತ್ತು ...!!!
               
                ಖಾಲಿ ಜೇಬು
ಕಾಲೇಜ್ ಅಲ್ಲಿ practical lab ...
Bar ನಲ್ಲಿ ನೈಟ್ pub ...
ಆಫೀಸ್ ಗೆ company cab ...
ಮದುವೆ ಆದಮೇಲೆ ಖಾಲಿ ಜೇಬು ...!!!

                Software ಕನ್ಯೆ 
software ಕನ್ಯೆ , soft ಆದ ನಿನ್ನ ಕೆನ್ನೆ ...
ನೋಡುತ್ತಾ ಕುಳಿತೆ ನಿನ್ನೆ ...
ಕೆಲಸ ಮಾಡದೆ ಸುಮ್ನೆ ...
appraisal ನಲ್ಲಿ ಸಿಕ್ಕಿದ್ದು ಬರಿ ಸೊನ್ನೆ ...!!!
               
                ಕೆಂಪು ಚಿಹ್ನೆ
Bike ನಲ್ಲಿ ಹೋಗುತ್ತಿದ್ದೆ ಸುಮ್ನೆ ...
ಪಕ್ಕದ ಆಟೋನಲ್ಲಿ heelds slipper ನ ಕನ್ಯೆ ...
ನೋಡುತ್ತಾ ಸಾಗಿದೆ ಕೆಂಪಗಿದ್ದ ಅವಳ ಕೆನ್ನೆ ...
ಕೈ ಚೆಲ್ಲಿತು ನೂರರ ನೋಟು, ನೋಡದೆ ಸಾಗಿದ್ದಕೆ ಎದುರಿಗಿದ್ದ ಕೆಂಪು ಚಿಹ್ನೆ ...!!!

                ಹೋದಳಲ್ಲ
Call ಮಾಡಿದವಳಿಗೆ ಕಾಳ್ ಹಾಕಿದ್ರೂ ಬೀಳಲಿಲ್ಲ ...
Missed Call ಕೊಟ್ಟೋಳಿಗೆ miss ಮಾಡ್ಕೊಂಡ್ರು ಬರಲಿಲ್ಲ ...
SMS ಮಾಡಿದವಳಿಗೆ yes ಅಂದ್ರು ಸಿಗಲಿಲ್ಲ ...
Simple ಆಗಿ SIM ಬಿಸಾಕಿ ಹೋದಳಲ್ಲ ...!!!

                ಚುಟುಕು
ಪದಗಳೇ ಸಿಗುತ್ತಿಲ್ಲ ಬರೆಯಲು ಚುಟುಕು ...
ಮೆದುಳಿಗೂ ಕಂಪಿಸಿದೆ ಏಕೋ ಮೊಟಕು ...
ಹಾಕಿದೆ ರಾತ್ರಿ ನೋಡಿ ಒಂದು ಗುಟುಕು ...
ಬರೆದೆ ನೋಡಿ ಚುಟುಕಿನ ಮೇಲೆ ಚುಟುಕು ಚುಟುಕಿನ ಮೇಲೆ ಚುಟುಕು ...!!!  

                ಅರ್ಥವಾಗದು 
ಲೆಕ್ಕಸಿಗದು, ರಾಜಕಾರಣಿಗಳ ಆಸ್ತಿ ಎಷ್ಟಿದೆ ಎಂದು ...
ಎಣಿಸಲಾಗದು, ತಿರುಪತಿ ತಿಮ್ಮಪ್ಪನ ಕಾಣಿಕೆ ಎಷ್ಟಿದೆ ಎಂದು ...
ಗೊತ್ತಾಗದು, ಯಾವ ಹುತ್ತದಲ್ಲಿ ಯಾವ ಹಾವಿದೆ ಎಂದು ...
ಅರ್ಥವಾಗದು, ಹುಡುಗಿಯ ಮನಸ್ಸಲ್ಲಿ ಯಾರು ಇರುವರೆಂದು ...!!!

                Chat - u 
ಹಳೆ ಪ್ರೇಯಸಿಯ ಜೊತೆ ಗಂಡ facebook ನಲ್ಲಿ  chat - u ...
ಅಡಿಗೆಮನೆಯಲ್ಲಿ ಹೆಂಡತಿ ಮಾಡೋ ಅಡಿಗೆಯಲ್ಲಿ ಘಾಟು ...
chat ನಲ್ಲಿ ಗಂಡ ಕೇಳಿದನು, ಯಾವಾಗ ನಮ್ಮಿಬ್ಬರ meet - u ...
ಹಿಂದೆ ನಿಂತಿದ್ದ ಹೆಂಡತಿಯ ಕೈಯಲ್ಲಿ ಸೌಟು ...!!!

                ಕವನ
ಕೇಳಿದಳೊಬ್ಬಳು ನನ್ನ, ನೀವು ಕವಿ ನಾ ?
ಹೌದೆಂದೆ, ಹಾಗಿದ್ದರೆ ಬರೆಯಿರಿ ನನ್ನ ಮೇಲೆ ಒಂದು ಕವನ ...
ಮೊದಲ ಸಲದ ಮಿಲನ, ನಾಚಿ ನೀರಾದೆನ ...
ನಿಂತ ಕ್ಷಣ ತೇಲಿದ ಮನ, ಅಂದ ಚಂದಕೆ ಸೋತು ಹೋದೆನ ...
ನಗುವಿನ ಈ ದಿನ, ಪ್ರೆತಿದಿನವೂ ಹೊಸತನ ...
ಕಣ್ಣಂಚಿನ ಮಾತಲಿ, ತುಟಿಯಂಚಿನ ನಗುವಲಿ ಮೂಡಿದ ಈ ಪುಟ್ಟ ಕವನ ...!!!
                
                ಕನ್ನಡತಿ 
ಹೇಳೇ ಕನ್ನಡತಿ, ನೀ ಯಾಕೆ ಹಿಂಗಾಡ್ತಿ ...
ಕನ್ನಡ ಬಂದರೂ ಇಂಗ್ಲಿಷ್ ನಲ್ಲೆ ಮಾತಾಡ್ತಿ ...
ಕನ್ನಡಿಗರ ಬಿಟ್ಟು ಹಿಂದಿ ಹುಡುಗರ ಹಿಂದೇನೆ ಓಡಾಡ್ತಿ ...
ಕೇಳೆ ಕನ್ನಡತಿ ನೀನು ಕನ್ನಡದ ಒಡತಿ ...
ಕನ್ನಡ ಅಂದ್ರೆ ತಾತ್ಸಾರ ಯಾಕ್ ಮಾಡ್ತಿ ...!!! 

               Make - up
ಮದುವೆ ಆದಮೇಲೂ ನನ್ನ ಹೆಂಡತಿ ಮಾಡುತ್ತಾಳೆ Make - up ...
ಮಕ್ಕಳಾದಮೇಲೆ ನಮಗೆ ಬೇಗನೆ Wake - up  ...
ಇಂತ ಸಮಯದಲ್ಲೂ ಕೇಳುತಾರೆ ಜನ What 's - up ...
ಹೇಳಲಾಗದೆ ಮಾಡಿಸುತಿರುವೆ BP , Sugar regular Check - up ...!!!

               ನಂಬಬಾರದು 
ಗಂಡಿನ ಸಂಬಳ ಕೇಳಬಾರದು,  ಹೆಣ್ಣಿನ ವಯಸ್ಸು ಕೇಳಬಾರದು ...
ಧಾರವಾಡ ಮಳೆ ನಂಬಬಾರದು, ಬೆಳಗಾಂ ಹುಡುಗಿ ನಂಬಬಾರದು ...
ನಗೋ ಹೆಣ್ನನ್ನ ನಂಬಬಾರದು, ಅಳೋ ಗಂಡನ್ನ ನಂಬಬಾರದು ...
ನಗೋ ಗೌಡ್ರನ್ನ ನಂಬಬಾರದು, ಅಳೋ ಅಪ್ಪನ್ನೂ ನಂಬಬಾರದು ...!!!

               ಉಳಿಸಿ
ಕಾಡು ಬೆಳೆಸಿ , ನಾಡು ಉಳಿಸಿ ...
ಸೈಕಲ್ ಬಳಸಿ, ಪೆಟ್ರೋಲ್ ಉಳಿಸಿ ...
ಮುಂಬತ್ತಿ ಉರಿಸಿ , ವಿದ್ಯುತ್ ಉಳಿಸಿ ...
ತಲೆ ಬೋಳಿಸಿ , ಎಣ್ಣೆ ಉಳಿಸಿ ...!!!

               ಓಡಿ
ಹುಡುಗಿಯ ತುಟಿಯಂಚಿನ ನಗುವಿನ ಮೋಡಿ ...
ಕೇಳಿದನು ಆಗುವೆಯಾ ನನ್ನ ಜೋಡಿ ...
ಹುಡುಗನ ಖಾಲಿ ಕಿಸೆಯ ನೋಡಿ ...
ಅವಳೊದಳು ಓಡಿ ...!!! 

               ತಣ್ಣಗಾಯಿತು 
ಕಣ್ಣ ಬಿಂದು ಜಾರುತ ಹೇಳಿತು ...
ದೂರವಾಗುವಂತೆ ಸೂಚಿಸಿತು ...
ಕಣ್ಣೀರು ಬತ್ತಿಹೋಯಿತು ...
ಹೃದಯ ತಣ್ಣಗಾಯಿತು ...!!! 

               ಚಿತ್ರಾನ್ನ 
ಚಿತ್ರಾನ್ನ ಬಡವರ ಪಾಲಿಗೆ ಮೃಷ್ಟಾನ್ನ ...
ಕನಸ ಕಂಡೆ ಲಗ್ನವಾದ ಮೇಲೆ ಬಗೆ ಬಗೆಯ ತಿಂಡಿ ತಿನಿಸು ಸವಿಯಬಹುದೆನ್ನ ...
ಮದುವೆಯಾದೆ software ಹುಡುಗಿಯನ್ನ ...
ತಪ್ಪಲಿಲ್ಲ ದಿನವೂ ಆನ್ನ ...!!! 

               ನೆನಪು
ನೆನಪಿದೆಯೇ ನಮ್ಮ ಮೊದಲ ಮಿಲನ ...
ನೆನಪಿದೆಯೇ ನಮ್ಮ ಮೊದಲ ಪಯಣ ...
ನೆನಪಿದೆಯೇ ಕೊಟ್ಟ ಮೊದಲ ಉಡುಗೊರೆಯ ದಿನ ...
ನೆನಪಿದೆಯೇ ನೆನಪಾಗಿಯೇ ಉಳಿದ ಸವಿನೆನಪುಗಳ ಮದುರ ಕ್ಷಣ ...!!!

               90 
ಜಿಗುಪ್ಸೆಗೊಂಡ ಅಂಕಲ್ ಬಾರಿಗೆ ಹೋದ ...
90 ಹೊಡೆದು ಸ್ವಲ್ಪ ಟೈಟ್ ಆದ 
90 ಹೊಡೆದ ಅಂಕಲ್ ನೈಟಿ ಹಿಂದೆ ಹೋದ ...
90 ಗೆ ನೈಟ್ ಪೂರ್ತಿ ನೈಟ್ ಔಟ್ ಆದ ...!!!
              
               ಪ್ರೀತಿ - ಸ್ನೇಹ 
ಕಣ್ಣೀರ್ ಹಾಕದ ಪ್ರೀತಿ ಇಲ್ಲ ...
ಕಣ್ಣೀರ್ ಒರೆಸದ ಸ್ನೇಹವಿಲ್ಲ ...
ಕದ್ದು ಮುಚ್ಚಿ ಮಾಡದ ಪ್ರೀತಿ ಇಲ್ಲ ...
ಕದ್ದು ಮುಚ್ಚಿ ಪಾನಗಳ ಹೊಡೆಯದ ಸ್ನೇಹವಿಲ್ಲ ...!!! 

               ತೆರಿಗೆ 
ಮದುವೆಯ ಹೊಸತರಲ್ಲಿ ಗಂಡ ಹೆಂಡತಿಯ ಸಂಸಾರದ ತೆರಿಗೆ ...
ಅವರ ಸುಖಮಯ ಜೀವನ ಸುಖದ ಸುಪ್ಪತ್ತಿನ ತೇರಿಗೆ ...
ಆಷಾಡ ಮಾಸದಲ್ಲಿ ಹೆಂಡತಿ ತವರಿಗೆ ...
ಗಂಡ ಬಾರಿಗೆ ...!!! 

               ಜೀವನ 
ಕಾಲೇಜ್ ಲೈಫಿನ ಜೀವನ ...
ದುಡ್ಡಿದ್ರೆ ಧೂಮಪಾನ ...
ಮದ ಏರಿದರೆ ಮದ್ಯಪಾನ  ...
ಮನಸಿದ್ರೆ ಹಿಂದಿನ ಸೀಟ್ ನಲ್ಲಿ ಕಲ್ಪನ ...!!!
              
               ನೀನಿಲ್ಲದೆ
ಕಂಬನಿ ಇಲ್ಲದೆ ಕಣ್ಣಿಲ್ಲ ...
ನೋವಿಲ್ಲದೆ ಪ್ರೀತಿ ಇಲ್ಲ ...
ನೀರಿಲ್ಲದೆ ಮೀನಿಲ್ಲ ...
ನೀನಿಲ್ಲದೆ ನಾನಿಲ್ಲ ...!!!

                ಹೂವು
ಹೂವು ಮುಡಿಯಲ್ಲಿದ್ದರೆ, ಹೆಣ್ಣಿನ ಅಂದ ಚಂದಕೆ ...
ಹೂವುಮಾಲೆ ಕೊರಳಲ್ಲಿದ್ದರೆ, ಮದುವೆ ಸಂಭ್ರಮಕೆ ...
ಹೂವಿನ ಮೇಲೆ ನಾವು ಮಲಗಿದರೆ, ಮಧುರ ಚಂದ್ರಕೆ ...
ನಮ್ಮ ಮೇಲೆ ಹೂವು ಮಲಗಿದರೆ, ದೇಹ ಮಸಣಕ್ಕೆ ...!!!

                ಸತ್ಕಾರ 
ಹೊಸ ಅಳಿಯನೆಂದು ಅತ್ತೆ ಮನೆಯಲ್ಲಿ ಮಾಡಿದ್ದೆ ಮಾಡಿದ್ದು ಸತ್ಕಾರ ...
ಸಿಹಿ ತಿಂಡಿ ತಿನಿಸುಗಳ ಭಾರಿ ಉಪಚಾರ ...
ಸ್ವೀಕರಿಸಿದ ನನಗೆ ಎಂದೂ ಕಂಡಿಲ್ಲದಂತಹ ರುಚಿಕರ ...
ಅವರ ಮಗಳು ಮಾಡುತ್ತಾಳೆ ಉಪ್ಪು, ಉಳಿ ಇಲ್ಲದ ಸಾರು ತುಂಬಾ ಖಾರ ...!!!
               
                ತಂಪು 
ದಿನವು Laptop ನೋಡಿ ಹುಡುಗರ ಕಣ್ಣು ಕೆಂಪು ...
ಕಾರಣ ಸಿಗುತ್ತಿಲ್ಲ ಅವರಿಗೆ ಮನರಂಜನೆಯ ಇಂಪು ...
Ethnic day ದಿನ ಸೀರೆ ಉಟ್ಟ ಹುಡುಗಿಯರ ಗುಂಪು ...
ಹುಡುಗರ ಕಣ್ಣು ಫುಲ್ ತಂಪು ...!!!
               
                ಪ್ರೇಮಿಗಳ ದಿನ
ಪ್ರೇಮಿಗಳ ಮನ ಮಿಡಿಯುವ ದಿನ ...
ಆಚರಿಸಲಿಲ್ಲ ವರುಷಕ್ಕೊಮ್ಮೆ ಬರುವ ಸುದಿನ ...
ನನ್ನದಲ್ಲದ ದಿನ ...
ಕಾಡುತಿಹುದು ಒಂಟಿತನ ಅನುದಿನ ...!!!
               
                 ಹೊತ್ತು 
ಈ ಸಂಜೆಯ ತಂಪಿನ ಹೊತ್ತು ...
ಓದುವೆ ನಾ ಬರೆದ ಹನಿಗವನದ ಮುತ್ತು ...
ಕೇಳಿರಿ ಕಿವಿಗೊಟ್ಟು ಸ್ವಲ್ಪ ಹೊತ್ತು ...
ಚನ್ನಾಗಿದ್ದಲ್ಲಿ ನಿಮ್ಮ ಚಪ್ಪಾಳೆಯೇ ನನಗೆ ಸಂಪತ್ತು ...!!!
                
                 ಕನ್ನಡ
ಕನ್ನಡ ಭಾಷೆ ಚಿರವಾಗಿರಲಿ ...
ಕನ್ನಡಿಗರೆಂಬ ಹೆಮ್ಮಇರಲಿ ..
ಕರುನಾಡ ಆಸ್ತಿ ನಿಮ್ಮದಾಗಲಿ ...
ಕನ್ನಡ ಕರ್ನಾಟಕದ ಮನೆ ಮಾತಾಗಿರಲಿ ...!!! 
               
                 ಕನ್ನಡ
ನಮಸ್ಕರಿಸು ಕನ್ನಡ ತಾಯಿಯ ...
ಗೌರವಿಸು ಕನ್ನಡದ ಹಿರಿಮೆಯ ...
ಹಸಿರಾಗಿಸು ಕನ್ನಡ ಎಲ್ಲರೆದೆಯ ...
ಕಳುಹಿಸು ಸಂದೇಶವ ಕನ್ನಡಿಗರಿಗೊಂದು ಶುಭಾಶಯ ...!!!

                 ಕರೀನಾ 
ಪಡ್ಡೆ ಹುಡುಗರ ನಿದ್ದೆ ಕೆಡಿಸಿದವಳು ನೀನೇನಾ ...
ಶಹೀದ್ ನ ಜೊತೆಗೆ ಚುಂಬಿಸಿ ಹೇಳಿದೆಯ ನಾ ...
ಆಗಲು ಹೊರಟಿಹೆಯಲ್ಲ ಸೈಫೀನ ...
ಕರೀನಾ ನೀ ಮಾಡಿದ್ದು ಸರೀನಾ ...!!! 

                 ದುಂಡಿರಾಜ 
ಮಳೆ ಹನಿ ಬೀಳುವುದು ಸಹಜ ...
ಹನಿಗಳ ಸೇರಿಸಿ ಕವನಗಳ ಬರೆಯುವ ದಿಗ್ಗಜ ...
ಚುಟುಕು ಚಕ್ರವರ್ತಿಯ ರಾಜ ...
ಮಹಾರಾಜ, ಇವರೇ ದುಂಡಿರಾಜ ...!!!
                 
                 ಕಣ್ ಸನ್ನೆಯಿಂದ
ಅಪ್ಪ ಹೊಡೆಯುವನು ದೊಣ್ಣೆಯಿಂದ ...
ಅಮ್ಮ ಪ್ರೀತಿಸುವಳು ಮಮತೆಯಿಂದ ...
ಅಕ್ಕ ನೋಡಿಕೊಳ್ಳುವಳು ಅಕ್ಕರೆಯಿಂದ ...
ಹೆಂಡತಿ ಹೆದರಿಸುವಳು ಕಣ್ ಸನ್ನೆಯಿಂದ ...!!!
                
                 ಕಾವೇರಿ 
ಕಾವೇರಿದ ಕಾವೇರಿ ಉಕ್ಕಿ ಹರಿದಳು ಹಾರಿ ...
ಜನರ ಆಕ್ರಂದನ ಮುಗಿಲೇರಿತು ಏರಿ ...
ದಡೂತಿ ದೇಹದ ಹೆಮ್ಮಾರಿ ...
ನೀರು ಕೇಳಿದರೆ, ಕಾವೆರಿಸುವೆವು ತಮಿಳರ ಬೆನ್ನೇರಿ ...!!!

                 ಕೆಟ್ಟ 
ಕರುಣೆ ಅನುಕಂಪದಿಂದ ಆರಿಸಿದ್ದರು ಯಡ್ಡಿಗೆ ಸಿಎಂ ಪಟ್ಟ ...
CBI ಗಳ ಮುಂದೆ ದಾಖಲೆಗಳ ತೆರೆದಿಟ್ಟ ...
ವರಿಷ್ಠರ ಮಾತು ಕೇಳಿ BJP ಪಕ್ಷ ಬಿಟ್ಟ ...
ಹೊಸ ಪಕ್ಷ ಕಟ್ಟಿ ಯಡ್ಡಿ ಕೆಟ್ಟ ...!!!

                 ಕಾವೇರಿ 
ವರ್ಷಕ್ಕೊಮ್ಮೆ ತಮಿಳಿಗೆ ಹರಿವಳು ಕಾವೇರಿ ...
ಕುಡಿಯಲು ಪ್ಯಾಕೆಟ್ ನೀರು ಇದಕೂ ಮೀರಿ ... 
ಹಾಡ್ಕೋಳಿ ನಿಮ್ದು ಕೊಲವೇರಿ ...
ಬಿಟ್ಬಿಡಿ ನಮ್ದು ಕಾವೇರಿ ...!!!

                 ಮುತ್ತು 
ಪ್ರಿಯೆ ನೀನೆ ನನ್ನ ಸ್ವತ್ತು ...
ತಡಮಾಡದೆ ಕೊಡು ಒಂದು ಮುತ್ತು ...
ಮುಖ ತಿರುವಿದಳು ನಿಂತ ಜಾಗದಿಂದ ಕಾಲ್ಕಿತ್ತು ...
ಅವಳಿಗಿತ್ತು ತುಂಬಾ ಗತ್ತು ...!!! 

                 ಸಿಟ್ಟು 
ಇಷ್ಟ ಪಟ್ಟ ಹುಡುಗಿಗೆ ಹೇಳಿದೆ 
ನಿನ್ನ ಸೌಂದರ್ಯಕ್ಕೆ ಕೇಶ ರಾಶಿಯ ಬಿಡು ಹಾಕದಿರು ಜುಟ್ಟು ...
ಹೇಳಿದ್ದೆ ತಾಪ್ಪಾಯಿತೇನೋ ನೆತ್ತಿಗೇರಿತು ಅವಳ ಸಿಟ್ಟು ...
ದಿನವಿಡೀ ತಮಿಳು ಹುಡುಗನ ಜೊತೆ ಒಡನಾಟ, ಪಿಸುಗುಟ್ಟು ...
ಅವಳ ನೋಡುತ ದುರುಗುಟ್ಟು ಬಿಗಿಹಿಡಿದಿರುವೆ ಸಿಟ್ಟು ನಿಟ್ಟುಸಿರ ಬಿಟ್ಟು ...!!!

                 ಮೊಬೈಲು 
ಅವಳ ಕೈಯಲ್ಲಿ ಮೂರು ಹೊತ್ತು ಮೊಬೈಲು ...
ಪಕ್ಕದಲ್ಲಿ ನಿಂತರೂ ಸಹ ಕೇಳಿಸದು ಆಕೆ ಮಾತಾಡೋ ಸ್ಟೈಲು ...
ಮತ್ತೆ, ಏನಿಲ್ಲ ಅನ್ನೋ ಮಾತುಗಳೇ ಮಾಮೂಲು ...
ಬಿಲ್ಲು ಬಂದಾಗ ಹುಡುಗನಾಗುವನು ಐಲು ...!!!


                 ಬಿಲ್ಲು 
ಅವಳ ಕಣ್ಸೆಳೆಯುವ  ನೋಟಕ್ಕೆ ಚೋರಿಯಾಯಿತು ನನ್ನ ದಿಲ್ಲು ...
ಮನಸಿನೊಳಗೆ ಏನೋ ಒಂಥರಾ ಥ್ರಿಲ್ಲು ...
ಮೇಕಪ್ ಮಾಡಿದಾಗ ನನ್ನವಳು ಏಳು ಬಣ್ಣದ ಕಾಮನ ಬಿಲ್ಲು ...
ಹಾಗೆ ಬಾಕಿ ಉಳಿದ ನನ್ನ ಏಳು ತಿಂಗಳ ಮೊಬೈಲ್ ಬಿಲ್ಲು ...!!!
                
                 ಕನಸು
ಇರುಳಿನಲಿ ಕನಸೊಂದ ಕಂಡೆ ...
ಕನಸಿನಲಿ ನೀ ಇರುವುದ ಕಂಡು ಸಂತೋಷಗೊಂಡೆ ...
ಕನಸಿನಲಿ, ಮನಸಿನಲಿ ಜಾಗವಿಲ್ಲವೆಂದೆ ...
ಕನಸು ಕನಸಾಗಿಯೇ ಉಳಿಯಿತೆಂದು ನಾ ನೊಂದೆ ...!!!


                 ಸುಸ್ತು 
ಗಂಡ ಆಫೀಸಿನಲ್ಲಿ ಬಾರಿ ನಿಯತ್ತು, ಶಿಸ್ತು ...
ಹೆಂಡತಿಗೆ ಕರೆ ಮಾಡಲು ಸಿಗೋದಿಲ್ಲ ಆತನಿಗೆ ಪುರುಸೊತ್ತು ...
ದಿನವಿಡೀ ಕೆಲಸ ಮಾಡಿ ತುಂಬಾ ಸುಸ್ತು ...
ಹೆಂಡತಿಗೆ ಮುತ್ತು ಕೊಡುವುದರೊಳಗೆ ಅವನು ಬೇಸ್ತು ...!!! 

                
                 ಚಿನ್ನಾರಿ
ಕರೆಯುವೆ ಹೆಂಡತಿಯನ್ನ ಪ್ರೀತಿಯಿಂದ ...
ಬಂಗಾರಿ, ಸಿಂಗಾರಿ, ಚಿನ್ನಾರಿ ...
ದಿನವೂ ಕೇಳುವಳು ನನ್ನ ...
ಚಿನ್ನಾ ರೀ ...!!!

                 ಖುಷಿಯಾಗಿರಲು 
ತಂಪಾದ ಗಾಳಿ ನನ್ನ ಸೋಕಲು ...
ಕದ್ದು ಮುಚ್ಚಿ ನೀ ನನ್ನ ನೋಡಲು ...
ಕಾರಣವಿಲ್ಲದೆ ನಾ ನಗಲು ...
ಇಷ್ಟು ಸಾಕು ಕಣೆ ನಾ ಖುಷಿಯಾಗಿರಲು ...!!!
                 
                 ಮಂಗಳ ಸೂತ್ರ
ಗಂಡ ಹೆಂಡತಿಯ ಸಂಬಂಧ ಮೂರು ಗಂಟಿನ ಸೂತ್ರ ...
ಪರಸ್ಪರ ಹೊಂದಿಕೊಂಡು ಹೋದರೆ ಅವರ ಜೀವನ ಸುಸೂತ್ರ ...
ಕಟ್ಟಿದರೆ ಏನು ಪ್ರಯೋಜನ ಮಂಗಳ ಸೂತ್ರ ...
ಆಡಿಸುವಳಲ್ಲ ಮಂಗ ಎಂಬ ಗಂಡನ ಸೂತ್ರ ...!!!

                 ಮೊದಲ ಮುತ್ತು 
ಪ್ರಿಯೆ ನೆನಪಿದೆಯೇ ನಾ ಕೊಟ್ಟ ಮೊದಲ ಮುತ್ತು ...
ಮೈ ಮರೆತು ಎಲ್ಲೋ ತೆಲಿದಂತಿತ್ತು ಆ ಹೊತ್ತು ...
ಮತ್ತೆ ಬೇಕೆನಿಸುತಿದೆ ನಿನ್ನ ಹಸಿ ತುಟಿಗಳ ಮುತ್ತಿನ ಗಮ್ಮತ್ತು ...
ಆದರೆ ಮುತ್ತಿನ ಮತ್ತೇರಿಸಲು ಆಗಲಿಲ್ಲವಲ್ಲ ನನ್ನ ಸ್ವತ್ತು ...!!!
                 
                 ಚಿನ್ನ 
ಹೆಂಡತಿ ಮೆಲುಧ್ವನಿಯಲಿ ಚಿನ್ನ ಕೊಡಿಸೋ ಮಹರಾಯ ...
ನೀನೆ ನನ್ನ ಚಿನ್ನ ಎಂದ ಪತಿ ಮಹಾಶಯ ...
ಸಾಕು ನಿಲ್ಲಿಸೋ ನಿನ್ ಮನೆಕಾಯ ...
ಕೊಡಿಸು ಇನ್ನಾದರೂ ಬಂದಿದೆ ಅಕ್ಷಯ ತೃತೀಯ ...!!!

                 20 ದಿನದಲ್ಲಿ
ಕಣ್ಣಾಗಿ ಬಂದವಳು, ಕಲ್ಲಾಗಿ ನಿಂತಳು ...
ಆಸರೆಯಾಗಿ ಬಂದವಳು, ಅಸುರೆಯಾಗಿ ನಿಂತಳು ...
 ಮನೆ ಬೆಳಗಲು ಬಂದವಳು, ಹೊತ್ತಿ ಉರಿಸಿದಳು ...
20 ವರುಷದಲಿ, ತಾಯಿ ಜೆಂಟಲ್ ಮ್ಯಾನ್ ಮಾಡಿದ್ದಳು ...
20 ದಿನದಲ್ಲಿ ಹೆಂಡತಿ ಮೆಂಟಲ್ ಮ್ಯಾನ್ ಮಾಡಿದಳು ...!!!

                 ನೈಟಿ - 90
ನೈಟಿ ತೊಟ್ಟ ಆಂಟಿ ನೋಡೋಕೆ ಚಂದ ...
90 ಹೊಡೆದ ಕುಡುಕನ ಮಾತು ಕೇಳೋಕೆ ಚಂದ ...
ನೈಟಿ ಮುತ್ತೇರಿಸುವ ಗಮ್ಮತ್ತು ...
90 ಮತ್ತೇರಿಸುವ ಗಮ್ಮತ್ತು ...!!!

                 Facebook
Facebook ನಲ್ಲಿ ಹುಡುಗಿಯ face ಇಷ್ಟ ಆಯಿತು ...
Friend request ಕಳಿಸಿದಾಗ accept ಆಯಿತು ...
Gtalk ನಲ್ಲಿ ಮಾತಾಡಿದಾಗ ಧ್ವನಿ ಇಂಪಾಗಿತ್ತು ...
Meet ಮಾಡಿದಾಗ ಹೃದಯ ಚೂರಾಯಿತು ...!!!

                 ಮರುಳಾದೆ
ಹುಡುಗಿಯ photo ನೋಡಿ ಮರುಳಾದೆ ...
ನೋಡಲು ಹೋದಾಗ ಬೆರಗಾದೆ ...
Photo ಗೂ ನಿಜರೂಪಕ್ಕೂ ವ್ಯತ್ಯಾಸವ ಕಂಡು ಮರುಗಾದೆ ...
ಅಭಿಪ್ರಾಯ ತಿಳಿಸುವೆನೆಂದು ಹೇಳಿ escape ಆದೆ ...!!!


                  ನಡುಗಿ
ನಾ ನೋಡಲು ಹೋದ ಹುಡುಗಿ ...
ಬೆಳದಿಂಗಳ ಬೆಡಗಿ ...
ಅವಳು ಮಾತಿನ ಗುಡುಗಿ ...
ಸುಮ್ಮನೆ ಕುಳಿತೆ ಬಾಯಿ ಬಡಕಿಗೆ ನಡುಗಿ ...!!!

                  Award ಗಳು
ಹಗಲು ರಾತ್ರಿ ಎನ್ನದೆ ದುಡಿಯುವ employees  ಗಳು ...
ಹಬ್ಬ ಹರಿದಿನಗಳಲ್ಲಿ  ಬಿಕೋ ಎನ್ನುವ floor ಗಳು ...
client ದೇವರುಗಳು ಬಂದಾಗ floor ತುಂಬಾ ಹೂ ತೋರಣಗಳು ...
ಬಂದಾಗ ಕೊಡುವರು buiscuit ಹಂಚುವ award ಗಳು ...!!!

                  ಕೋಗಿಲೆ 
ಎಲೆ ಮರದ ಕೋಗಿಲೆ ...
ಇಂದು ಹಾಡಲಿಲ್ಲ ಯಾಕೆಲೆ  ...
ಏಕೆ ಮಾಡುತಿ ಕಣ್ಣಾಮುಚ್ಚಾಲೆ ...
ಗೊತ್ತಿಲ್ಲವೆ, ನಿನ್ನ ಹಾಡು ಕೇಳದೆ ಹೋಗುವುದೇ ...
ಈ ಮನದ ನೋವಿನ ಖಾಯಿಲೆ ...!!!

                  ದಾಡಿ
ಹೇಳಿದ್ದಳು ನನ್ನವಳು, ನೀನೊಬ್ಬ ವೇಸ್ಟ್ ಬಾಡಿ ...
ಬೇಸರಗೊಂಡು ಬಿಟ್ಟಿದ್ದೆ ಕೊಂಚ ದಾಡಿ ...
ನನ್ನ ಬೇಸರದ ಮುಖ ನೋಡಿ ...
ನಗುತ್ತ ಹೇಳಿದಳು, ಮುತ್ತಿಟ್ಟಾಗ ಚುಚ್ಹುವುದು shave ಮಾಡುಲು ನಿನಗೇನೂ ದಾಡಿ ...!!!

                  ಹೋಯ್ತು - ಬಂತು
Notebook ಹೋಯ್ತು , Laptop ಬಂತು ...
Black board ಹೋಯ್ತು , White board ಬಂತು ...
Orkut ಹೋಯ್ತು , Facebook ಬಂತು ...
ಪ್ರಾಯ ಹೋಯ್ತು , ಬಿಳಿ ರೋಮ ಬಂತು ...!!!

                  ಸವಾರಿ
ಆಟೋ ರಾಜನ ಸವಾರಿ ...
ಹತ್ತು ಬಾ ಇದು ಕನ್ನಡಿಗನ ಅಂಬಾರಿ ...
ನಂಬಿ ಕುಳಿತರೆ ಒಂದು ಬಾರಿ ...
ಮೀಟರ್ ಸಂಖ್ಯೆ ಓಡುವುದು ಏರಿ ಏರಿ ...!!!

                  ಮಾರಿ
ನಾ ಕುಡಿಯುವುದ ಕಂಡರೆ ನನ್ನವಳಾಗುವಳು ಮಾರಿ ...
ನಡೆಯುವುದು ಅಂದು ಮಾರಾಮಾರಿ ...
ಹಾಕುವಳು ನನ್ನ ಮನೆಯಿಂದ ಛೀ ಮಾರಿ ...
ಮತ್ತೆ ಕುಡಿಯಲು ಹೋಗುವೆ ಕಾಂಪೌಂಡ್ ಹಾರಿ ...!!!

                  ಮೊಡವೆ
ಕೇಳಿದಳು ನನ್ನವಳು ನೆನಪಿನ ಕಾಣಿಕೆ ಏನು ಕೊಡುವೆ ...
ಮುತ್ತಿಡುವ ನೆಪದಲ್ಲಿ ಹಾಕಿದೆ ಒಡವೆ ...
ತುಟಿ ಕೆನ್ನೆ ಸ್ಪರ್ಶಗಳ ನಡುವೆ ...
ಅವಳಿಗಿತ್ತು ಮುಖದ ತುಂಬಾ ಮೊಡವೆ ...!!!

                   ಚಿನ್ನ
ಹದಿ ಹರೆಯದ ವಯಸಲ್ಲಿ ಹುಡುಗ ಹುಡುಗಿಯ ನೋಟ ಭಿನ್ನ ...
ಹುಡುಗಿಯ ಮೆಚ್ಚಿಸಲು ಕರೆಯುತ್ತಾರೆ ಚಿನ್ನ, ರನ್ನ ...
ಹಾಕುತ್ತಾರೆ ಹೃದಯಕ್ಕೆ ಕನ್ನ ...
ಪ್ರೀತಿಸೋ ಮುನ್ನ ಯೋಚಿಸು ಚಿನ್ನ ...!!!

                  ನೋವ
ಹೆಂಡತಿ ಪೀಡಿಸುವಳು ದಿನಾ  ತರಲಿಲ್ಲ ಯಾಕೆ  ಇನ್ನೋವ ...
ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಿದ್ದ ಹೆಣ್ಣು ಕೊಟ್ಟ ಮಾವ ...
ಕಷ್ಟದ ಪರಿಸ್ತಿತಿಯಲ್ಲೂ ನನ್ನವಳು ದಿನವೂ ಕಾಡುವ ...
ಇದು ನೊಂದ ಜೀವ ಕೊಡದಿರು ನೋವ ...!!!

                  ನನ್ನವಳೆನ್ನಲು
ತುಂತುರು ಮಳೆ ಹನಿ ಮೈ ತಾಕಲು ...
ಪ್ರತಿ ಹನಿಯಲ್ಲೂ ನೀ ಇರಲು ...
ಹನಿಯ ಸ್ಪರ್ಶದಲಿ ನೀ ನನ್ನ ಆವರಿಸಲು ...
ಇಷ್ಟು ಸಾಕು ಕಣೆ ನೀ ನನ್ನವಳೆನ್ನಲು ...!!!

                  ಕನ್ನಡ
ಮಣ್ಣ ಮೆಟ್ಟುವ ಮುನ್ನ, ನಮಸ್ಕರಿಸು ಭೂಮಿ ತಾಯಿಯನ್ನ ...
ನೀರು ಕುಡಿಯುವ ಮುನ್ನ, ವಂದಿಸು ಕಾವೇರಿಯನ್ನ ...
ಮಾತನಾಡುವ ಮುನ್ನ, ಗೌರವಿಸು ಕನ್ನಡಿಗರನ್ನ ...
ಅನ್ನ ತಿನ್ನುವ ಮುನ್ನ, ಕಲಿಯೋ ಕನ್ನಡವನ್ನ ...!!!

                   ನಾರಿ
ಅಂದಿನ ನಾರಿ ಸಂಸಾರಕ್ಕೆ ಸಹಕಾರಿ ...
ಗಂಡಿನ ಯಶಸ್ಸಿನ ಹಿಂದೆ ಅವಳೇ ದಾರಿ ...
ಇಂದಿನ ನಾರಿ ಸಂಸಾರಕ್ಕೆ ಸಂಹಾರಿ ...
ಬೇರೊಬ್ಬ ಗಂಡಿನ ಜೊತೆ ಪರಾರಿ ...!!!

                    ಹನಿ
ನನ್ನವಳು ಮುಟ್ಟಿದರೆ ಮುನಿ ...
ಮುತ್ತಿಟ್ಟಾಗ ಸವಿ ಜೇನಿನ ಹನಿ ...
ಅವಳು ಅತ್ತಾಗ ಜಿನುಗುವುದು ಕಣ್ಣೀರ ಹನಿ ...
ಅವಳು ಕೈಕೊಟ್ಟಾಗ ತೋಟಕುವುದು ನನ್ನ ರಕ್ತದ ಹನಿ ...!!!

                    ಕನಸು
ಕನಸಿನ ಲೋಕದಲ್ಲಿ ನನ್ನದೊಂದು ಪುಟ್ಟ ಕನಸು ...
ಕನಸಿನೊಳಗೆ ನೀನಿರುವುದೇ ಸೊಗಸು ...
ಕೊನೆಯವರೆಗೂ ಜೊತೆಗಿರುವ ಕನಸು ಆಗುವುದೇ ನನಸು ...
ನನಸಾಗಲು ಕನಸು ಮಾಡಬೇಕು ನೀ ಮನಸು ...!!!

                    ಮನದಾಸೆ
ಮನದಾಸೆಯ ಕೆರಳಿಸಿದೆ ವಯಸು ...
ವಯಸಿಗೆ ಬೇಕಿರುವುದು ನಿನ್ನ ಮನಸು ...
ಮನಸಿನ ಪುಟದಲಿ ನನ್ನ ಹೆಸರನು ಸೇರಿಸು ...
ಸೇರಿಸಿದ ಹೆಸರನು ಅಳಿಸಿ ಹೋಗದ ಹಾಗೆ ಪ್ರೀತಿಸು ...!!!

                    ಗೋಳು
ಕಸದಿಂದ ಮುಚ್ಚಿಹೋಗಿದೆ ಬೆಂಗಳೂರು ಮಹಾನಗರಿ ...
BBMP ಗೂ ತೋಚುತ್ತಿಲ್ಲ ಎತ್ತ ಸಾಗಿಸುವುದು ತ್ಯಾಜ್ಯ ವಿಲೇವಾರಿ ...
ಇದರ ನಡುವೆ ಭರದಿಂದ ಸಾಗಿರುವ ಮೆಟ್ರೋ ಕಾಮಗಾರಿ ...
ಜನರ ಗೋಳು ಕೇಳೋರು ಯಾರಿ ?...!!!

                    ಒಳಗೆ
ಮುಗುಳುನಗೆ, ಒಳಗೊಳಗೆ ...
ಬಡಿತ, ಎದೆಯೊಳಗೆ ...
ಆಸೆ, ಮನದೊಳಗೆ ...
ಪ್ರತಿಬಿಂಬ, ನಿನ್ನ ಕಣ್ಣೊಳಗೆ ...!!!

                    ಚಳಿ
ಚುಮು ಚುಮು ಬೀಸುವ ತಂಗಾಳಿ ...
ನಡುಗಿಸುವ ಮೈ ಕೊರೆಯುವ ಚಳಿ ...
ಬೆಚ್ಚಗಾಗದು ಹೊತ್ತಿಕೊಂಡರು ಸಹ ಕಂಬಳಿ ...
ಬೆಚ್ಚಗಾಗುವುದು ನೀನಿದ್ದರೆ ಸದಾ ನನ್ನ ಬಳಿ ...!!!

                    ಕಡೆಗೆ
ನನ್ನವಳಿಗೆ ಕೊಡಿಸುತ್ತಿದ್ದೆ ವಾರಕ್ಕೊಮ್ಮೆ ಹೊಸ ಉಡುಗೆ ...
ಪಾರ್ಕು, ಸಿನಿಮಾ ದಿನವೂ ಒಡನಾಟದ ನಡೆಗೆ ...
ನನ್ನ ಪ್ರೀತಿ ಪಯಣ ಅವಳ ಪ್ರೇಮದೂರಿನ ಕಡೆಗೆ ...
ಅವಳ ಪಯಣ ದುಡ್ಡು ಇರುವವನ ಕಡೆಗೆ ...!!!

                    ಮುತ್ತು
ಮುತ್ತು ಮುತ್ತು ಎಂಥಾ ಮತ್ತು ...
ಮತ್ತಿನ ಮುತ್ತು ಮರೆಸಿತು ತುತ್ತು ...
ಮುತ್ತಿಗೂ ಗೊತ್ತು ಇಲ್ಲ ಹೊತ್ತು ...
ಎಲ್ಲೆಂದರಲ್ಲಿ ಕೊಟ್ಟ ಮುತ್ತು ಬೆಲೆಇರದೆ ಹೋಗುವುದು ಸತ್ತು ...!!!

                    ಮುತ್ತು
ಮುತ್ತು ಏನೈತಿ ಅದರಾಗೆ ಮತ್ತು ...
ಕೇಳಿದರೊಂದು ಮುತ್ತು ಸಿಗುವುದು ಹತ್ತು ...
ಹಸಿ ತುಟಿಗಳ ಮುತ್ತು ಬಲು ಮೆತ್ತು ...
ಹೊತ್ತು ಗೊತ್ತು ಇಲ್ಲದ ಮುತ್ತು ...
ಬೇಕಿನಿಸುವುದು ಮತ್ತು ಮತ್ತು ಮುತ್ತು ...!!!

                    ಅಂತ
ಓದಿನ ವಯಸಿನಲ್ಲಿ ನಾನು ತುಂಬಾ ವಿದ್ಯಾವಂತ ...
ಓದಿನ ಮನಸು ಕೆಡಿಸಿದವಳು ವಿದ್ಯಾ ಅಂತ ...
ಕೆಲಸ ಮಾಡುವುದರಲ್ಲಿ ನಾನು ಪ್ರತಿಭಾವಂತ ...
ಕೆಲಸ ಮಾಡುವ ವೇಳೆ ಕಾಡುವಳು ದಿನ ಪ್ರತಿಭಾ ಅಂತ ...!!!

                    ಎಲ್ಲಾದರೂ ಇರು
BJP ಯಲ್ಲಾದರು ಇರು ...
KJP ಯಲ್ಲಾದರು ಇರು ...
ದಳ ದಲ್ಲಾದರು ಇರು ...
congress ನಲ್ಲಾದರು ಇರು ...
ಎಂದೆಂದಿಗೂ ನೀ ಕೊಳ್ಳೆ ಹೊಡೆಯುತಲಿರು ...!!!

                    ಜ್ವರ
ನಿನ್ನ ನೋಡಿದ ದಿನದಂದು ಬಂದಿತು ಜ್ವರ ...
ಮಾತನಾಡಲಾಗದೆ ನಡುಗುತಿಹುದು ಸ್ವರ ...
ಜೀವ ಭಯಪಡುತಿದೆ ಆಗುವುದೇ ಬಾಳು ನಶ್ವರ ...
ಒಮ್ಮೆ ಬಂದು ತಟ್ಟಿಬಿಡು ಹೃದಯದ ದ್ವಾರ ...!!!

                    ಸುಳಿ
ನಲ್ಲ ಸಿಲುಕಿಹನು ಪ್ರೀತಿ ಅನ್ನೊ ಸುಳಿ ...
ಕರೆದಾಗಲೆಲ್ಲ ಹೋಗುವನು ಆಕೆಯ ಬಳಿ ...
ನಲ್ಲೆ ನಕ್ಕಾಗ ಕೆನ್ನೆ ಮೇಲೆ ಗುಳಿ ...
ನಲ್ಲೆ ಗುಡುಗಿದಾಗ ನಲ್ಲನಿಗೆ ಮೈ ನಡುಗುವ ಚಳಿ ...!!!

                    ನಾರಿ
Diet ಮಾಡಲು ಹೇಳಿದೆ ನನ್ನವಳಿಗೆ ಹಲವು ಬಾರಿ ...
ಕಿವಿಗೊಡದೆ ತಿನ್ನುತ್ತಿದ್ದಳು ಭಾರಿ ...
ಮದುವೆಯ ಹೊಸತರಲ್ಲಿ ನನ್ನವಳು ತೆಳ್ಳಗೆ ಬೆಳ್ಳಗೆ ಭಾರತೀಯ ನಾರಿ ...
ಈಗ ಅವಳು ಭಾರವಾದ ನಾರಿ ...!!!

                    ಕವನ
ನಾ ಬರೆದ ಕವನ ಒಗಟಿನಂತಿರಲಿಲ್ಲ ...
ಅರ್ಥವಾಗದ ಪದಗಳಿರಲಿಲ್ಲ ...
ಯಾರಿಗಾಗಿ ಬರೆದದ್ದೆಂದು ಕೇಳಿದಳಲ್ಲ ...
ಮನಸಿನ ತುಂಬಾ ಅವಳಿರುವುದು ಆಕೆಗೆ ತಿಳಿಯಲೇ ಇಲ್ಲ ...!!!

                    ಕಂಟಿ
ನಮ್ಮ ಎದುರು ಮನೆಯ ಕಂಟಿ ...
ಯಾವಾಗಲು ಒಂಟಿ ...
ಮೂಡ್ ಇದ್ರೆ ಪಕ್ಕದ ಮನೆ ಆಂಟಿ ...
ಮೂಡ್ ಕೆಟ್ರೆ ಬಾರ್ ನಲ್  90 ...!!!

                    ಕವನ
ನನ್ನವಳಿಗಾಗಿ ಬರೆದೆ ಒಂದು ಕವನ ...
ಮೆಚ್ಚಿ ಕೊಟ್ಟಳು ಒಂದು ಚುಂಬನ ...
ಚುಂಬನಕ್ಕಾಗಿ ಬರೆದೆ ದಿನಕ್ಕೊಂದು ಕವನ ...
ಚುಂಬನ ಕೊಡದೆ ಕೈಗಿಟ್ಟಳು ಖಾಲಿ ಚಂಬ್ ನ ...!!!

                    ನಮನ
ಎಲ್ಲರಿಗೂ ನನ್ನದೊಂದು ನಮನ ...
ಓದುವೆ ನಾ ಬರೆದ ಹನಿಗವನ ...
ನಾಲ್ಕು ಸಾಲು ಪದಗಳ ಸಮ್ಮಿಲನ ...
ಚನ್ನಾಗಿದ್ದಲಿ ನಿಮ್ಮ ಚಪ್ಪಾಳೆಯೇ ನನಗೆ ಭೂಷಣ ...!!!

                    ಬನ್ನಿ
ಸಿಹಿ ಬಡಿಸುವಾಗ ಹೇಳುವಳು ಚೆನ್ನಾಗಿ ತಿನ್ನಿ ...
ಆಫೀಸ್ ನಿಂದ ಬರುವಾಗ ಏನಾದರು ತನ್ನಿ ...
ಕರೆ ಮಾಡಿ ಹೇಳುವಳು ಸಂಜೆ ಬೇಗ ಬನ್ನಿ ...
ಶಾಪಿಂಗ್ ಮುಗಿಸಿ ಹೇಳುವಳು 'ಬಿಲ್ ಕಟ್ಟಿ ಬನ್ನಿ' ...!!!


                    ಕಾರು ಬಾರು
ಇರಲಿಲ್ಲ ಯಾರ ಜೋತೆನು ತಕರಾರು ...
ಮದುವೆ ಮುಂಚೆ ನನ್ನದೇ ಕಾರು ಬಾರು ...
ಮದುವೆಯ ನಂತರ ಅವಳದು ಕಾರು ...
ನನ್ನದು ಬಾರು ...!!!

                    ಅಡಗಿ
Sleeveless ಉಡುಗೆಯ ಹುಡುಗಿ ...
ಬೆಳ್ಳನೆ ತೋಳಿನ ಬೆಡಗಿ ...
ನಿನ್ನ ತಳುಕು ಬಳುಕಿನ ನಡಿಗಿ ...
ಗೊತ್ತಿಲ್ಲದೆ ಕುಳಿತಿರುವೆ ಹುಡುಗರ ಕಣ್ಣಲ್ಲಿ ನೀ ಅಡಗಿ ...!!!


                    ಜೀವನ
ನಮ್ಮಿಬ್ಬರ ಈ ಶುಭ ಮಿಲನ ...
ಇದಕೆ ಕಾರಣ ನಿನ್ನ ಒಳ್ಳೆಯ ನಡೆತನ ...
ನಗುವಿರಲಿ ಹೀಗೆ ಅನುದಿನ ...
ಸಪ್ತಪದಿಯ ಹೆಜ್ಜೆ ಇತ್ತು ನಡೆಸೋಣ ಹೊಸ ಜೀವನ ...!!!


                    ರಾಜಕೀಯ
ಚುನಾವಣೆಯ ಸಮಯದಲ್ಲಿ ವೋಟುಗಳ ಡಬ್ಬ ...
ಮತದಾರರಿಗೆ ನೋಟುಗಳ ಹಬ್ಬ ...
ರಾಜಕಾರಣಿಗಳು ಹಾಕುತ್ತರೇಕೆ ಜುಬ್ಬ ...
ನಾರಬೇಕಲ್ಲ ಹೊಲಸು ರಾಜಕೀಯದ ಗಬ್ಬ ...!!!


                    ಹುಡುಗಿ
ತೆಳ್ಳನೆ ಹುಡುಗಿಯ ತಳಕು ಬಳಕು ನಡೆ ನೋಡಿದ ನಂದ ...
ಉದ್ದನೆ ಹುಡುಗಿಯ ಉದ್ದನೆ ಜಡೆ ಚಂದವೆಂದ ...
ಪುಟ್ಟನೆ ಹುಡುಗಿಯ ಪುಟ ಪುಟ ಹೆಜ್ಜೆ ಇಡುವುದೇ ಅಂದ ...
ದಪ್ಪನೆ ಹುಡುಗಿಯ ಕಂಡು ಹಾಸಿಗೆಯೆ ಬೇಡವೆಂದ ...!!!


                    ಬಳೆ
ಇದ್ದರೂ ಮುಖದಲ್ಲಿ ಕೊಳೆ ...
ಮಾಡುತ್ತೀರಿ make up ಕಾಣದ ಹಾಗೆ ಕಪ್ಪು ಕಲೆ ...
ನಿಮ್ಮ ನಗು ಮುಖದಲ್ಲಿ ಏನೋ ಒಂದು ರೀತಿಯ ಕಳೆ ...
ಹಾಕೋದಿಲ್ಲ ಯಾಕ್ರಿ ಕೈಗೆರಡು ಬಳೆ ...!!!


                    ಜಾರಿ
ಹಣೆಯ ಮೇಲೆ ಬೀಳುತ್ತಿತ್ತು ಕೂದಲೆಳೆಯು ಜಾರಿ ...
ಸರಿ ಮಾಡಿಕೊಳ್ಳುತ್ತಿದ್ದಳು ದಿನಕ್ಕೆ ನೂರು ಸಾರಿ ...
ಅವಳನ್ನೇ ಗಮನಿಸುತ್ತಿದ್ದೆ ಹಲವು ಬಾರಿ ...
ಮನ ಸೋತು ಹಾಳಾಯಿತು ಹೃದಯ ಜಾರಿ ...!!!


                    ಮುದ್ರೆ
ಪ್ರಿಯೆ ನಾವು ಹಾಸಿಗೆಯ ಮಳೆ ಬಿದ್ರೆ ...
ಬರೋದಿಲ್ಲ ನಮಗೆ ನಿದ್ರೆ ...
ಬರಬೇಕಾದರೆ ನಿದ್ರೆ ...
ಆಗಬೇಕು ತುಟಿಗಳಿಗೆ ಮುದ್ರೆ ...!!!

                   
                    ಮೌನ
ಮೊದಲ ದಿನದ ಮೌನ ...
ನಾಚಿಕೆ ತುಂಬಿದ ಯೌವ್ವನ ...
ಮಿಡಿಯುತಿದೆ ತನು ಮನ ...
ಗಂಡು ಮುಟ್ಟಿದ ಮೈನ ...!!!


                    Marriage
ಮುಖ ನೋಡದೆ ಮದುವೆಯಾದರೆ - Traditional Marriage ...
ಓಡಿಹೋಗಿ ಮದುವೆಯಾದರೆ - Runaway Marriage ...
ಪ್ರೀತಿಸಿದವರನ್ನು ಮದುವೆಯಾದರೆ - Love Marriage ...
ಬೇರೆಯವರು ನೋಡಿ ಬಿಟ್ಟವರನ್ನು ಮದುವೆಯಾದರೆ - Arrange Marriage ...!!!


                    ಅನುಮಾನ
ಪ್ರಿಯೆ ಮುಖ ಮುನಿಸಿಕೊಂಡಿರುವುದು ಸರೀನ ...
ಬಿಟ್ಟು ಬಿಡು ನಿನ್ನ ಕೋಪನ ...
ಈ ತಣ್ಣನೆಯ ಚಳಿಯ ಹವಮಾನ ...
ಏಕೆ ಪಡುತಿ ನನ್ನ ಮೇಲೆ ನೀ ಅನುಮಾನ ...!!!


                    ಕಡೆ-ಕೊಡೆ
ಪ್ರೀತಿಗೆ ಎಂದೂ ಇಲ್ಲ ಕಡೆ ...
ಒಲವ ತೋರೆ ನನ್ನ ಕಡೆ ...
ಮಳೆ ಸುರಿದಾಗ ಹಿಡಿ ಕೊಡೆ ...
ತುಟಿ ಬಯಸಿದಾಗ ಮುತ್ತು ಕೊಡೆ ...!!!


                    ಮಿಲನ
ಮುಗಿಯಿತು ಒಂಟಿತನ ...
ಶುರುವಾಯಿತು ಜಂಟಿತನ ...
ಎರಡು ಹೃದಯಗಳ ಮಿಲನ ...
ಮನಸುಗಳ ಒಂದಾಗೋ ಸಮ್ಮಿಲ್ಲನ ...!!!


                    ಹೊಸ ಜೀವನ
ನಮ್ಮಿಬ್ಬರ ಈ ದಿನದ ಶುಭಮಿಲನ ...
ಎರಡು ಮನಸುಗಳು ಒಂದಾಗೋ ಸಮ್ಮಿಲನ ...
ಬಂಧು ಮಿತ್ರರು ಸಕುಟುಂಬದೊಂದಿಗೆ ಆಗಮನ ...
ಆಶಿರ್ವಾದದ ಉಡುಗೊರೆಯೊಂದಿಗೆ ಕಾಲಿಡುವೆವು ಹೊಸ ಜೀವನ ...!!!


                    ಹುಳುಕು
ನಲ್ಲೆಯ ನಡೆ ತಳುಕು ಬಳುಕು ...
ಕಂಡು ನಲ್ಲನಿಗೆ ಮೈ ಪುಳುಕು ...
ನಲ್ಲೆಯ ನೋಟಕ್ಕೆ ನಲ್ಲನಿಗೆ ಕಾಲು ಉಳುಕು ...
ನಲ್ಲೆ ನಕ್ಕಾಗ ಹಲ್ಲು ತುಂಬಾ ಹುಳುಕು ...!!!


                    ಪದ್ದು
ಹೇಯ್ ಪದ್ದು ...
ನೀ ಹೃದಯವ ಕದ್ದು ...
ಮಾಡಿದೆ ಮುದ್ದು ...
ಮಾಡದೆ ಸದ್ದು ...!!!


                     ಕಪ್ಪು
ನನ್ನವಳು ನೋಡೋದಕ್ಕೆ ಹೆಣ್ಗಪ್ಪು ...
ಆಸ್ತಿ ನೋಡಿ ಎಲ್ಲರೂ ಹೇಳಿದರು ಒಪ್ಪು ...
ಅವಳನ್ನ ಒಪ್ಪಿ ಮಾಡಿದೆ ತಪ್ಪು ...
ಹುಟ್ಟಿದ ಕೂಸುಗಳು ಬರಿ ಕಪ್ಪು ...!!!


                     ಮುನ್ನ
ಕೈಕೊಟ್ಟು ಹೋಗುವ ಮುನ್ನ ...
ತಿರುಗಿ ನೋಡು ಒಮ್ಮೆ ನನ್ನ ...
ಜಾರುತಲಿಹುದು ಕಂಬನಿ ನೆನೆಯುತ ನಿನ್ನ ...
ಗಟ್ಟಿಯಾಗಿ ತಬ್ಬಿಕೊ ಉಸಿರು ಆರುವ ಮುನ್ನ ...!!!


                    ಆಕರ್ಷಣೆ
ಕಣ್ಣಿನ ಸಂಭಾಷಣೆ ...
ತುಟಿಯ ಆಕರ್ಷಣೆ ...
ಮನಸಿನ ಮಾತಿನ ಚಲಾವಣೆ ...
ಕೊನೆ ಉಸಿರಲೂ ಜೊತೆಗಿರುವೆ ನಿನ್ನಾಣೆ ...!!!


                    ಒರಟು
ತೆಗೆದುಕೊಂಡೆ ನಾ ಒಂದು ಶರಟು ...
ಕೊಡಿಸದೇ ಅವಳಿಗೊಂದು ಸ್ಕರ್ಟು ...
ಅವಳ ಮುಖದಲ್ಲಿ ಕಂಡಿತು ಒರಟು ...
ಕೋಪಿಸಿಕೊಂಡು ನಡೆದಳು ಅಲ್ಲಿಂದ ಹೊರಟು ...!!!


                    ಕಪ್ಪು
ನನ್ನವಳ ಬಣ್ಣ ಕಪ್ಪು ...
ಅವಳನ್ನ ನಾ ಒಪ್ಪು
ಮಾಡಿದೆ ನಾ ತಪ್ಪು ...
ಹುಟ್ಟಿದ ಕೂಸು ತುಂಬಾ ಕಪ್ಪು ...!!!


                    ಚೆಲುವೆ
ಕಾಣದ ಚೆಲುವೆಗೆ ಕಾಡುವ ಕನಸು ...
ಸಿಗದ ಚೆಲುವೆಗೆ ಹಾತೊರೆಯುವ ಮನಸು ...
ಕಣ್ಣಲ್ಲಿ ಚೆಲುವೆಯ ಚಿತ್ತಾರವ ಬಿಡಿಸು ...
ಚೆಲುವೆ ಕೈಕೊಟ್ಟಾಗ ಕಣ್ಣೀರು ಸುರಿಸು ...!!!


                    ಪ್ರೀತಿಸು
ಇನ್ನು ಮುಂದಾದರು ಒಳ್ಳೆಯವನಾಗುವುದನ್ನ ಬಯಸು ...
ಧೂಮಪಾನ ಮದ್ಯಪಾನ ಎಲ್ಲವನ್ನೂ ತ್ಯಜಿಸು ...
ಹಳೆ ಪ್ರೇಯಸಿಯನ್ನ ಮನದಿನ ಓಡಿಸು ...
ಬರೊ ಹೆಂಡತಿಯನ್ನ ಮನಸಾರೆ ಪ್ರೀತಿಸು ...!!!


                    ತರಲೆ
ಪ್ರಿಯೆ ನಿನಗೇನೂಬೇಕೆಂದು ಹೇಳು ...
ಆಗಸದಿಂದ ಚಂದಿರನನ್ನು ಇಳಿಸಿ ತರಲೆ ...
ಬೆಟ್ಟದ ಹೂವಂದ ತರಲೆ ...
ಜೇನಿನ ಸಿಹಿಯನ್ನು ತರಲೆ ...
ಅವಳಅಂದಳು ಬಾಯಿ ಮುಚ್ಕೊಂಡ್ ಬಾರಲೆ ...!!!


                    ಲೊಳಲೊಟ್ಟೆ
ಹೆಂಡತಿಯ ಬದುಕು ಲೊಳಲೊಟ್ಟೆ ...
ಕೇಳಿದರೂ ಕೊಡಿಸುತ್ತಿರಲಿಲ್ಲ ಒಂದು ಜೊತೆ ಬಟ್ಟೆ ...
ಎಷ್ಟು ಬಡಿಸಿದರು ಬೇಗನೆ ಖಾಲಿಯಾಗುತಿತ್ತು ತಟ್ಟೆ ...
ಅವನಿಗಿತ್ತು ದೊಡ್ಡ ಹೊಟ್ಟೆ ...!!!


                    ಹೆಸರು
ಏನೆಂದು ಹೆಸರಿಡಲಿ ನನ್ನವಳಿಗೆ ...
ಬರೆದ ಹೆಸರು ಅಳಿಸಿ ಹೋಯಿತು ಸಾಗರದ ಅಲೆಗೆ ...
ಅಚ್ಚೆಯ ಹಾಕಿಸಿದೆ ಎದೆಯೊಳಗೆ ...
ಸಿಕ್ಕರೂ ಸಿಗದಿದ್ದರೂ ಉಳಿದಳು ಮನದೊಳಗೆ ...!!!


                    ಬಟ್ಟೆ
ಹುಡುಗಿಯರು ಧರಿಸಿದರೆ ಬಟ್ಟೆ ...
ಕಾಣುವುದು ರಟ್ಟೆ ...
ಹುಡುಗರು ಧರಿಸಿದರೆ ಬಟ್ಟೆ ...
ಕಾಣುವುದು ಹೊಟ್ಟೆ ...!!!


                    ದಾನ
ಅನ್ನದಾನ ಮಹದಾನ ...
ರಕ್ತದಾನ ಜೀವದಾನ ...
ನೇತ್ರದಾನ ದೃಷ್ಟಿದಾನ ...
ಕನ್ಯಾದಾನ ಲಿಂಗದಾನ ...!!!


                    ಜೋಡಿ
ದಿನವು ನಿನ್ನನೇ ನೋಡಿ ...
ನಿನಗಾಗಿ ನಾಲ್ಕು ಪದಗಳ ಹಾಡಿ ...
ಅದಕೆ ನೀನಾಗಿ ಮೋಡಿ ...
ಆಗಬಾರದೇಕೆ ನೀ ನನ್ನ ಜೋಡಿ ...!!!


                    ಪತ್ರ
ನನ್ನವಳು ಇರಲಿಲ್ಲ ನನ್ನ ಹತ್ರ
ಕಳುಹಿಸಿದೆ ಅವಳಿಗೊಂದು ಪ್ರೇಮ ಪತ್ರ
ಅಪ್ಪಿ ತಪ್ಪಿ ಪತ್ರ ಅವಳ ಅಪ್ಪನಿಗೆ ಸಿಕ್ಕಿದರೆ ಮಾತ್ರ
ನನಗಾಗುವುದು ಸಣ್ಣಗೆ ಮೂತ್ರ ...!!!


                    ದಾಳಿ
ಆಕೆಯ ಮಾಡಿದಕ್ಕೆ ಚಾಳಿ ...
ಕಟ್ಟಬೇಕಾಯಿತು ತಾಳಿ ...
ಅರಿಸಿದರೆಲ್ಲರು ಕೂಡಿ ಬಾಳಿ ...
ನಡೆಸುತಿಹಳು ಆಕೆ ದಿನ ನನ್ನ ಮೇಲೆ ದಾಳಿ ...!!!


                    ಆಗ - ಈಗ
ಪ್ರಿಯತಮ ನಿನ್ನ ಪ್ರೀತಿಯೊಂದೆ ಸಾಕು ...
ಬೇರೇನೂ ಬೇಡ ಎಂದಳಾಗ ...
Fridge , Washing m / c ತಂದುಕೊಡು ಬೇಗ ...
ಕಾರು , ಸೈಟು ತಗೋಳೋದು ಯಾವಾಗ ...!!!


                    ಡಾಕ್ಟರೇಟ್
ವಯಸ್ಸಾದಮೇಲೆ ಕೊಡುವುದೇಕೆ ಡಾಕ್ಟರೇಟ್ ...
ಕೊಡಿ ಇನ್ನ ಮೇಲೆ ಸರಿಯಾಗಿ ಡಾಕ್ಟರ್ ರೇಟ್ ...!!!


                    ನೆನಪು
ಅವಳ ನೀಲಿ ಕಂಗಳ ಹೊಳಪು ...
ಕೇಶ ರಾಶಿಯ ರೇಶಿಮೆಯ ನುಣುಪು ...
ನೋಡ ನೋಡುತ ಎದೆಯಲಿ ಹುರುಪು ...
ಸಿಗದ ಚೆಲುವೆಗೆ ಹಾತೊರೆದು ಮನಸಿನಲಿ ಉಳಿದ ನೆನಪು ...!!!


                    ಕೋರಿಕೆ
ಮಾತು ಬಾರದೆ ನಿಂತಿರುವುದು ನಾಲಿಗೆಯ ತುದಿಯಲಿ ...
ಗುಲಾಬಿಯ ಹೂವೊಂದು ಹಿಡಿದಿರುವೆ ನನ್ನ ಕೈಯಲಿ ...
ಹೂವ ಕೊಡುವಾಗ ಭಯ, ಆತಂಕ ನನ್ನೀ ಎದೆಯಲಿ ...
ಕಿರುನಗೆಯ ಬೀರಿ ಸ್ವೀಕರಿಸು ಕೊರಿಕೆಯೊಂದೆ ಮನದಲಿ ...!!!


                     ಕಾಲ
ಕೊಡೆ ಹಿಡಿದು ನಡೆಸುವಳು ಬಂದಾಗ ಮಳೆಗಾಲ ...
ತಣ್ಣನೆಯ ಗಾಳಿ ಬೀಸುವಳು ಆದಾಗ ಬೇಸಿಗೆಗಾಲ ...
ಬಿಗಿದಪ್ಪಿಕೊಳ್ಳುವಳು ಆದಾಗ ಚಳಿಗಾಲ ...
ಪ್ರಿಯೆ ನೀನಿಲ್ಲ ಇನ್ನೆಲ್ಲಿ ನನಗೆ ಉಳಿಗಾಲ ...!!!


                     ಚಿನ್ನ
ಮೆಚ್ಚಿ ಬಂದೆ ನಿನ್ನ ...
ತಿರುಗಿ ನೋಡು ಒಮ್ಮೆ ನನ್ನ ...
ಕರೆಯಲೇನು ನಿನ್ನ ಚಿನ್ನ, ರನ್ನ ...
ಆದರೆ ಕೇಳದಿರು ಕೊಡಿಸೆಂದು ಚಿನ್ನ ...!!!


                     ಬಣ್ಣ
ನೀ ನಗೆಯ ಬೀರಿದ್ದಕ್ಕೆ ಸಣ್ಣ ...
ನಾ ಹಾಕಿದೆ ನಿನ್ನ ಮೇಲೊಂದ ಕಣ್ಣ ...
ನನ್ನ ಮುಖದ ತುಂಬಾ ರಕುತದ ಬಣ್ಣ ...
ಇದಕ್ಕೆ ಕಾರಣ ನಿನ್ನ ಅಣ್ಣ ...!!!


                     ಯಾತನೆ
ಸೋತಿರೋ ಮನಸಿಗೆ ನಿನ್ನದ ಯೋಚನೆ ...

ಕನಸಿನಲಿ ಬಂದು ಕಾಡುವೆಯಾ ಸುಖಾ ಸುಮ್ಮನೆ ...
ಮನದ ಮೌನದ ವಿರಹ ವೇದನೆ ...

ಕೇಳುವರಾರು ಹೃದಯ ಬೇನೆಯ ಯಾತನೆ ...!!!

                       ನಾಚಿಕೆ
ಎಲೆ ಮರೀಚಿಕೆ ...
ಇನ್ನಾದರೂ ಬಿಡು ನಾಚಿಕೆ ...
ತಗಿ ನಿನ್ನ ರವಿಕೆ ...
ನೀಗಿಸು ಮೋಹದ ಬಯಕೆ ...!!!


                       ಮಚ್ಚೆ
ಅವಳ ತುಟಿಯ ಮೇಲೊಂದಿತ್ತು ಮಚ್ಚೆ ...
ಎದೆಯಲಿ ಹಾಗೆ ಉಳಿಯಿತು ಅದರ ಅಚ್ಚೆ ...
ಇರುವುದೊಂದೇ ಇಚ್ಛೆ ...
ಹಾಕಬೇಕು ಅವಳ ಕೈಗೊಂದು ಪಚ್ಚೆ ...!!!


                        ನಿದ್ದೆ
ಹೊಟ್ಟೆತುಂಬ ಮುದ್ದೆ ...
ಕಣ್ಣ ತುಂಬ ನಿದ್ದೆ ...

ಬೆಳಗಿನ ಜಾವ ಎದ್ದೆ ...
ಹಾಸಿಗೆ ಎಲ್ಲಾ ಒದ್ದೆ ...!!!


                         ಕವಿತೆ
ಹೊಸದೊಂದು ಕವಿತೆಯ ಬರೆದೆ ...
ಮನಸಿನ ಭಾವನೆಗಳ ತೆರೆದೆ ...
ಮೆಚ್ಚಿ ನೀ ನನ್ನ ಕರೆದೆ ...
ಎದುರು ನಿಂತಾಗ ಮೌನ ವಾದೆ ಮಾತು ಬಾರದೆ ...!!!


                         ಅಳಿಸು
ನಗುನಗುತ ಪ್ರೀತಿಸಿದ ಹುಡುಗಿ ...
ಕಪ್ಪಗಿದ್ದರು ಕಂಡಳು ಬೆಳ್ಳನೆಯ ಬೆಡಗಿ ...
ಅವಳ ಮೋಸದ ಪ್ರೀತಿಗೆ ನಾ ಕರಗಿ ...
ಅಳಿಸುತಿರುವಳು ದಿನ ನನ್ನಲ್ಲೆ ಅಡಗಿ ...!!!

                         ಕರೆಯೋಲೆ
ಇಂದಿನ ಹುಡುಗಿಯರಿಗೇಕೆ ಬೇಕು
ಕಿವಿಯೋಲೆ ...
ಬಂದರೆ ಸಾಕಲ್ಲವೇ ಪ್ರಿಯಕರನ
ಕರೆಯೋಲೆ ...!!! 


                         ಬಾಡಿಗೆ
ನೀ ಇರಲು ಬಿಡದೆ ನನ್ನ ಪಾಡಿಗೆ ...
ತಿಂಗಳ ಕೊನೆಗೆ ಕೈಯೊಡ್ದುವೆ ದುಡ್ಡಿಗೆ ...
ನೀ ಹೀಗೆ ಖರ್ಚು ಮಾಡಿದರೆ ಹಚ್ಚಲು ಕಣ್ಣ ಕಾಡಿಗೆ ...
ಉಲಿಸಬಹುದಲ್ಲೆ ಸ್ವಲ್ಪ ನಮ್ಮ ಮನೆಯ ಬಾಡಿಗೆ ...!!!

                         ಕಾಡಿಗೆ
ಪ್ರಿಯೆ ನೀ ಹಚಿದಾಗ ಕಣ್ಣ ಕಾಡಿಗೆ ...
ಸ್ಫೂರ್ತಿ ತುಂಬಿದೆ ನಾ ಬರೆದ ಹಾಡಿಗೆ ...
ನೀ ಇರಲು ಬಿಡದೆ ನನ್ನ ಪಾಡಿಗೆ ...
ಸಹಿಯೊಂದ ಹಾಕು ಮನದ ಗೂಡಿಗೆ ...!!!

                         ಮಾಯಾ ಬಜಾರು
ಕವಿಯೊಬ್ಬ ಹೇಳಿದ ಹೆಣ್ಣೊಂದು
ಮಾಯಾ ಬಜಾರು ....
ರವಿ ಹೇಳಿದ ಹೆಣ್ಣು ನೀನು ಮಾಯೆ ...
ಅದಕೆ ನನಗೆ ಬೇಜಾರು ...!!! 


                         ರಾಜ್ಯೋತ್ಸವ
ನವೆಂಬರ್ ನಲ್ಲಿ ಕನ್ನಡ ತಾಯಿಯ ಉತ್ಸವ ...
IT BT ಮಂದಿಗೆ ಇಲ್ಲದ ಉತ್ಸಾಹ ...
ಹೂವ ಅಲಂಕರಿಸಿ ಆಚರಿಸುತ್ತೀರಿ ಓಣಂ ವೋತ್ಸವ ...
ಆಚರಿಸೋದಿಲ್ಲ ಯಾಕ್ರೀ ಕನ್ನಡ ರಾಜ್ಯೋತ್ಸವ ...!!!

                         ರೊಟ್ಟಿ
ಅಮ್ಮ ಮಾಡುತ್ತಿದ್ದಳು ರೊಟ್ಟಿ ...
ತಿಂದು ನಾ ಆಗುತ್ತಿದ್ದೆ ಗಟ್ಟಿ ...
ನನ್ನ ಹೆಂಡತಿ ಮಾಡುವಳು ರೊಟ್ಟಿ ...
ಜಗಿಯಲು ಬೇಕು ಹಲ್ಲು ಗಟ್ಟಿ ...!!!

                         ಮುದ್ದೆ
ಅಮ್ಮ ಮಾಡುವಳು
ಗುಂಡು ಮುದ್ದೆ ...
ನನ್ನ ಹೆಂಡತಿ ಮಾಡುವಳು
ಗಂಟು ಮುದ್ದೆ ...!!! 


                         ಮುಂಗುರುಳು
ಮುಂಗುರುಳ ಸರಿಸಿ ನಡೆದು ಬಂದೆ ನೀ ಅಂದು ...
ಎದೆಯಲಿ ಮೂಡಿತು ಪ್ರೇಮ ಬಿಂದು ...
ನೀ ಸಿಗದೆ ಮನ ನೊಂದು ...
ಸಾಕಾಗಿದೆ ಇಂದು ಕಣ್ಣೀರಲ್ಲೆ ಬೆಂದು ...!!! 


                         ನನಗಿರಲಿ
ಪ್ರಿಯೆ,
ಕಣ್ಣು ನಿನಗಿರಲಿ,
ಕಣ್ಣೀರು ನನಗಿರಲಿ ...
ಸುಖ ನಿನಗಿರಲಿ,
ದುಃಖ ನನಗಿರಲಿ ...
ಕೆಲಸ ನಿನಗಿರಲಿ,
ಸಂಬಳ ನನಗಿರಲಿ ...!!!

                          ವ್ಯತ್ಯಾಸ
ಮದುವೆಯ ಹೊಸತನಕ್ಕು,
ಅಂಗಡಿಯ ಪದಾರ್ತಕ್ಕು
ಏನು ವ್ಯತ್ಯಾಸ ?
ಎರಡಕ್ಕೂ ಒಂದೆ ಉತ್ತರ ...
'Best Before 12 Months ' ...!!!
 

                          ಸರಳ
ನೀನಿರುವುದು ತುಂಬ ಸರಳ ...
ನೆನಪು ಕಾಡುತಿದೆ ಬಹಳ ...
ನಿನ್ನ ಸೌಂದರ್ಯ ಅತಿ ವಿರಳ ...
ನಿನ್ನ ದಿನಾ ನೋಡದೆ ಕಳೆಯಲಾಗದು ಒಂದಿರುಳ ...!!!

                          ಹೆಂಡತಿ
weekend ನಲ್ಲಿ ಶಾಪಿಂಗ್ ಮಾಡುತಿ ...
ಹಬ್ಬ ಬಂದಾಗ ಚಿನ್ನ ಕೇಳುತಿ ...
ಹೆ ನನ್ನ ಮುದ್ದಿನ ಹೆಂಡತಿ ...
ಹೀಗೇಕೆ ನನ್ನ ಪ್ರಾಣ ಹಿಂಡುತಿ ...!!! 


                          ಇರುವೆನಲ್ಲ
ಅತ್ತಿಂದಿತ್ತ ಲೋಟ ಎತ್ತಿಟ್ಟವನಲ್ಲ ...
ಅಮ್ಮನಿಗೆ ಒಂದಿಷ್ಟೂ ಸಹಾಯ ಮಾಡಿದವನಲ್ಲ ...
ಹೆಂಡತಿ ಬಂದಮೇಲೆ ...
ಅಡಿಗೆ ಮನೆಯಲ್ಲೆ ಇರುವೆನಲ್ಲ ...!!!

                          ಚಾಕ್ ಲೇಟು
ಮನೆಗೆ ಹೋದೊಡನೆ ...
ಮಗಳು ಕೇಳುವಳು ...
ಪಪ್ಪ ಚಾಕ್ ಲೇಟು ...
ಹೆಂಡತಿ ಕೇಳುವಳು ...
ಯಾಕ್ ಲೇಟು ...!!!

                           ಪ್ರೀತಿ
ಯಾರಿಗೂ ತಿಳಿಯದ ಹಾಗೆ ಪ್ರೀತಿ ಮಾಡ್ತೀರ ...
ಹೆತ್ತವರ ದೂರ ಮಾಡ್ತೀರ ...
ಮೋಸದ ಪ್ರೀತಿಗೆ ಮೈ ಕೊಡ್ತೀರ ...
ನಿಜವಾದ ಪ್ರೀತಿಗೆ ಕೈ ಕೊಡ್ತೀರ ...!!!


                           ಎಲ್ಲಾದರು ಇರು
ಅಮ್ಮ ಹೇಳುವಳು
ಎಲ್ಲಾದರೂ ಇರು ಹೇಗಾದರೂ ಇರು ...
ಊಟ ತಿಂಡಿ ಮಾಡ್ಕೊಂಡ್ ಚನ್ನಾಗಿರು ...
ಹೆಂಡತಿ ಹೇಳುವಳು
ಎಲ್ಲಾದರೂ ಇರು ಹೇಗಾದರೂ ಇರು ...
ಮೊದಲು ಮನೆಗೆ ಬಂದು ಸೇರು ...!!!


                           Snacks
Snacks ಮತ್ತೆ snaps ಗೆ ನನ್ನವಳು
ಸದಾ ಮುಂದೆ ...
ಕೊಡಿಸಲು
ನಾನು ಅವಳ ಹಿಂದೆ ...!!!

                           ಹಣ್ಣು
ಇನ್ನೇತಕೆ ಬೇಕು ನನಗೆ ತಿನ್ನಲು ಹಣ್ಣು ...
ಪಕ್ಕದಲ್ಲಿ ಇರುವಾಗ ಚೆಂದದ ಹೆಣ್ಣು ...
ಪ್ರಿಯೆ ನಿನ್ನ ರಾತ್ರಿ ಯೆಲ್ಲ ಚುಂಬಿಸಿ ...
ನನಗಾಯಿತು ಬಾಯಿತುಂಬ ಹುಣ್ಣು ...!!!


                           ನೆನಪು
ನೆನಪಾಗುವೆ ಗೆಳತಿ ಹೊತ್ತಿಲ್ಲದ ಹೊತ್ತಿನಲಿ ...
ಕುಳಿತಿರುವೆ ನಿನ್ನ ಹೃದಯದ ಹೊಸ್ತಿಲಲಿ ...
ಹಸ್ತಾಕ್ಷರವ ನೀಡು ನನ್ನ ಮನಸಿನ ಪುಟದಲಿ ...
ಪ್ರಾಣ ಪಕ್ಷಿ ಹಾರಿಹೊಗಲಿ ನಿನ್ನ ಕೊನೆಯ ನಗುವಿನಲಿ ...!!!

                           ABCD
ಸ್ಕೂಲ್ ಗೆ ಹೋಗಿ ಕಲಿಯಲಿಲ್ಲ ABCD ...
ಇಂದು ನೋಡಿ ತಿಳಿಯಿತು ನಿತ್ಯಾನಂದನ CD ...!!!

                           123
ಸ್ಕೂಲ್ ಗೆ ಹೋಗಿ ಕಲಿಯಲಿಲ್ಲ 123 ...
ನಿನ್ನ ನೋಡಿ ಕಲಿತೆ 143 ...!!!


                           ಪ್ರೆಗ್ನೆಂಟು
ಅಂದು ಮಹಿಳೆಯರು ಆಗುತ್ತಿದ್ದರು ಪ್ರೆಗ್ನೆಂಟು
ವಯಸ್ಸಾಗುತ್ತಿದ್ದಂತೆ ಹದಿನೆಂಟು ...
ಇಂದು ಮಹಿಳೆಯರಿಗೆ ಬೀಳುತ್ತಿಲ್ಲ ಕತ್ತಿಗೆ ಮೂರು ಗಂಟು ...
ಕೇಳಿದರೆ ಹೇಳುತ್ತಾರೆ ವಯಸ್ಸು ಜಸ್ಟ್ ಇಪ್ಪತ್ತೆಂಟು ...!!!


                           Funny
ಆಕೆ ತನ್ನ ಪ್ರಿಯತಮನಿಗೆ ಹೇಳಿದಳು
" you are so funny " ...
ಪ್ರಿಯತಮನಿಗೆ ತಿಳಿಯಲಿಲ್ಲ
ಆತ ಆಕೆ ಹೇಳಿದಂತೆ ಕೇಳುವ ನಾಯಿ "ಕುನ್ನಿ" ...!!!


                           ಕಮಂಗಿ
ಈಕೆ ನನ್ನ ಅರ್ಧಾಂಗಿ ...
ಹಾಕಲು ಬಿಡೋದಿಲ್ಲ ಅರ್ಧ ತೋಳಿನ ಅಂಗಿ ...
ದಿನ ಮಾಡುತ್ತಾಳೆ ಸಾರು ಮೂಲಂಗಿ ...
ಅದ ತಿಂದು ನಾ ಆಗಿರುವೆ ಕಮಂಗಿ ...!!!

                           ನಾನಾಗುವೆ
ಪ್ರಿಯೆ,
ನಿನ್ನ ಕಣ್ಣ ರೆಪ್ಪೆ ನಾನಾಗುವೆ ...
ಕಣ್ಣ ಕಾಡಿಗೆ ನಾನಾಗುವೆ ...
ಕಣ್ಣ ಬಿಂಬ ನಾನಾಗುವೆ ...
ಕಣ್ಣ ಬಿಂದು ಜಾರಿದರೆ ನಿನ್ನೊಳಗೆ ನಾನಾಗುವೆ ...!!!


                           ಫೈಟು
ತಡರಾತ್ರಿ ನಾ ಮನೆಗೆ ಹೋದಾಗ ಆಗುತ್ತಿತ್ತು ಫೈಟು ...
ಹೆಂಡತಿ ಕಾಯುತ್ತಿದ್ದಳು ಕೈಲಿಡಿದು ಸೌಟು ...
ಯಾವಾಗಲೂ ನನಗೂ ನನ್ನ ಹೆಂಡತಿಗೂ ಫೈಟು...
ಕಾರಣ ಅವಳ ಹೆಸರಲ್ಲಿ ಬೇಕಂತೆ ಒಂದು ಸೈಟು...!!!


                            ಜಡೆ
ಅಂದಿನ ಹೆಣ್ಣು ಮಕ್ಕಳ ಜಡೆ ...
ಹಾವಿನ ಹೆಡೆ ...
ಇಂದಿನ ಹೆಣ್ಣು ಮಕ್ಕಳ ಜಡೆ ...
ನಾಯಿ ಕೊಡೆ ...!!!


                            ಮನೆ
ದೇವರಿಲ್ಲದ ಮನೆ ...
ದೆವ್ವದ ಮನೆ ಇದ್ದಂತೆ ...
ಹೆಂಡತಿ ಇಲ್ಲದ ಮನೆ
ತಣ್ಣಗಿನ ವಾತಾವರಣವಿದ್ದಂತೆ ...!!!


                            ಕಣ್ ಸನ್ನೆ
ಅಂದು ಆಕೆ ಕೊಟ್ಟಿದ್ದು
ಕಣ್ ಸನ್ನೆ ...
ಇಂದು ಪರೀಕ್ಷೆಯಲ್ಲಿ ಸಿಕ್ಕಿದ್ದು
ಎರಡು ಸೊನ್ನೆ ...!!!


                            ಹಾಡು
ನನ್ನೆದೆಯಲಿ ಗೀಚಿರುವೆ ನಿನ್ನದೊಂದು ಹಾಡು ...
ನೀ ಅದನೊಮ್ಮೆ ಬಂದು ಓದಿ ನೋಡು ...
ಬರಿದಾಗಿದೆ ನೀನಿಲ್ಲದೆ ನನ್ನೆದೆಯ ಗೂಡು ...
ಯಾರ ಬಳಿ ಹೇಳಲಿ ನಾ ದಿನ ಪಡೋ ಪಾಡು ...!!!


                            ಬಿಗ್ ಬಾಸು
ಈಟಿವಿಯಲ್ಲಿ ಶುರುವಾಗಿದೆ ಬಿಗ್ ಬಾಸು ...
ವಾರಕ್ಕೊಮ್ಮೆ ಸುದೀಪನಿಂದ ಎಲ್ಲರಿಗೂ ಕ್ಲಾಸು ...
ಒಂಬತ್ತು ಘಂಟೆಗೆ ಕೈಯಲ್ಲಿ ಹಿಡಿದರೆ ಗ್ಲಾಸು ...
ಆಗುವುದು ಒಳ್ಳೆ ಟೈಮ್ ಪಾಸು ...!!!


                            ಅಡಿಗೆ
ಹೆಂಡತಿಗೆ ಸಾಕಾಗಿದೆ ದಿನವೂ ಅಡಿಗೆ ಮಾಡಿ ...
ಗಂಡನಿಗೆ ಹೇಳಿದಳು ಕಲಿತುಕೊ ನಾ ಮಾಡೋದನ್ನ ನೋಡಿ ...
ಗಂಡ ಹಿಡಿದನು ಕೈಯಲ್ಲಿ ಲತೋಡಿ ...
ಮಾಡಿಬಿಟ್ಟ ಅಡಿಗೆ ಮನೆ ತುಂಬಾ ರಾಡಿ ...!!!


                            ಜೋರು
ಮನೆಯಲ್ಲಿ ನನ್ನ ಹೆಂಡತಿಯ ಮಾತೆ ಜೋರು ...
ಅವಳ ಮುಂದೆ ನನ್ನ ಮಾತು ಜೀರೊ ...
ಹೆಂಡತಿ ಇಲ್ಲದಿರೆ ಮನೆಯಲ್ಲಿ ಸಂಭ್ರಮ ಜೋರು ...
ಹಾಗೆ ಹೊಡೆದೆ ನಾಲ್ಕು ಬಾಟ್ಲಿ ಬೀರು ...!!!


                            Make up
ಆಫೀಸಿಗೆ ಹೋದ್ರೆ Desktop ...
ಮನೆಗೆ ಬಂದ್ರೆ Laptop ...
ಹೆಂಡತಿಯ ಕೈಯಲ್ಲಿ ಯಾವಾಗಲು What 's App ...
ಕನ್ನಡಿ ಮುಂದೆ ನಿಂತರೆ ಮುಗಿಯಲ್ಲ ಅವಳ Make up ...!!!


                             ಬಿಟ್ಟೆ
ಪ್ರಿಯೆ, ನಿನಗಾಗಿ ನಾನು
ಕುಡಿತ ಬಿಟ್ಟೆ ...
ಸಿಗರೇಟು ಬಿಟ್ಟೆ ...
ಸ್ನೇಹಿತರ ಸಹವಾಸ ಬಿಟ್ಟೆ ...
ಬದಲಾಗಿ ನೀನು ನನ್ನನ್ನೆ ಬಿಟ್ಟೆ ...!!!


                             ಇಂಡಿಯಾ
Amul , ದಿ ಟೇಸ್ಟ್ ಆಫ್ ಇಂಡಿಯಾ ...
News , ಟೈಮ್ಸ್ ಆಫ್ ಇಂಡಿಯಾ ...
Bank , ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ...
Culture , ಐ ಲವ್ ಮೈ ಇಂಡಿಯಾ ...!!!


                             ಬಾಳು
ಒಂಟಿತನದ ಜೀವನದಲ್ಲಿ ನನಗೆ ನಾನೇ ಆಳು ...
ಹುಡುಗಿ ಇಲ್ಲದಿರೆ ಜೀವನವೇ ಹಾಳು ...
ಮದುವೆಯಾದೆ ಹಸನಾಗುವುದೆಂಬ ಬಾಳು ...
ನನ್ನ ಬೊಕ್ಕ ತಲೆಗೆ ಕಾರಣ ಸಂಸಾರದ ಗೋಳು ...!!!


                             ಮನೆ
ಅಲ್ಲಿರುವುದು ಸ್ವಂತ ಮನೆ ...
ಇಲ್ಲಿರುವುದು ಬಾಡಿಗೆ ಮನೆ ...
ಕಟ್ಟಿಸಬೇಕೆಂಬ ಆಸೆ ಸ್ವಂತ ಮನೆ ...
EMI ಕಟ್ಟಲಾಗದೆ ಇರುವೆ ಸುಮ್ಮನೆ ...!!!


                             ವೈಯ್ಯಾರ
ಮೂಗುತಿ ಮುಂಬಾರ ...
ಕುಂಕುಮ ಹಣೆಯ ಸಿಂಗಾರ ...
ಏಕೆ ತೋರಿಸುವೆ ನಿನ್ನ ವೈಯ್ಯಾರ ...
ಮೊದಲು ಇಳಿಸಿಕೊ ನಿನ್ನ ಮೈ ಭಾರ ...!!!


                             ಹೃದಯ
ಪ್ರಿಯೆ, ಕೊನೆ ಉಸಿರೆಣಿಸುತಿದೆ ನಿನ್ನ ಬಿಗಿ ಅಪ್ಪುಗೆಗಾಗಿ ...
ಪ್ರಾಣ ಬಿಡುವಾಸೆ ನಿನ್ನ ಮಡಿಲಲ್ಲಿ ಮಗುವಾಗಿ ...
ಚಿಂತಿಸದಿರು, ಹೃದಯವ ಕಾದಿರಿಸು ನನಗಾಗಿ ...
ನಾ ಮತ್ತೆ ಹುಟ್ಟಿ ಬರುವೆ ನಿನಗಾಗಿ ...!!!


                             ಗೊರಕೆ 
ಎಷ್ಟೊ ದೇವತೆಗಳ ಹೊತ್ತಿದ್ದೆ ಹರಕೆ ...
ಸಿಗಲಿ ಒಳ್ಳೆ ಗಂಡನೆಂಬ ಬಯಕೆ ...
ಮಲಗಿದಾಗ ಬಿದ್ದರೆ ಸಾಕು ಅವನಿಗೆ ಹೊದಿಕೆ ...
ಶುರುವಾಗತ್ತೆ ಅವನ ಗೊರಕೆ ...!!!

                             ಗಮನ
ನಿತ್ಯವೂ ಕಣ್ಣು ನೋಡುತಿಹುದು ನಿನ್ನ ಆಗಮನ ...
ನನಗರಿವಿಲ್ಲದೆ ನಿನ್ನ ಕಡೆ ಹೋಗುತಿದೆ ಗಮನ ...
ಕೆಂಪು ಗುಲಾಬಿಯೊಂದಿಗೆ ಪ್ರೀತಿ ಕೋರಿಕೆಯ ನಮನ ...
ನೀ ಕೊಟ್ಟರೆ ಸಾಕು ಆಹ್ವಾನ ...!!!

                            ಕವನ 
ಹೆಸರೇಳದೆ ಬರೆಯಲು ಹೇಳಿದೆ ಕವನ ...
ಸುಳಿವು ತಿಳಿಯಲು ಮಾಡಿದೆ ನಾನು ಹೋಮ ಹವನ ...
ಭಾವನೆಗಳ ತುಂಬಿರುವ ಭಾವನ ...
ನೀ ನನ್ನ ಕೈ ಹಿಡಿದರೆ ಆಗುವುದು ಜೀವನ ಪಾವನ ...!!!

                           ವಿಧಿ 
ಹಣೆಬರಹಕೆ ಹೊಣೆಯಾಯಿತು ವಿಧಿ ...
ಕೊಟ್ಟು ಕ್ಷಣ ಕಾಲದ ಅವಧಿ ...
ಪ್ರಿಯೆ ನಿನ್ನ ಕೊನೆ ಉಸಿರೇ ನನಗೆ ಔಷಧಿ ...
ಸಿಗುವುದು ಸ್ವರ್ಗದಲ್ಲಿ ಸ್ವಲ್ಪ ನೆಮ್ಮದಿ ...!!!

                           ಜೀವನ 
ಜಾಹಿರಾತಿಲ್ಲದ ಜೀವನ ...
ವಯಸ್ಸು ತುಂಬಿದ ಯವ್ವನ ...
ಸರಸಕ್ಕೆ ಏತಕೆ ಬೇಕು ಕಾನೂನು ...
ನೀ ಕೊಟ್ಟರೆ ಸಾಕು ಜಾಮೀನು ...!!!

                           Flat 
ಆಕೆಯ ಅಂದ ಚಂದ ನೋಡಿ 
ನಾನಾದೆ flat ...
ಮದುವೆಯ ನಂತರ ಕೇಳುವಳು 
ಕೊಡಿಸೊಂದು flat ...!!!

                           ಕಲ್ಲು ಹೃದಯ 
ಎಷ್ಟೇ ಮಳೆ ಸುರಿದರು ಕರಾಗಿರಲಿಲ್ಲ 
ಕಲ್ಲಿನಂತಿದ್ದ ಈ ಹೃದಯ ...
ಪ್ರಿಯೆ ನಿನ್ನ ಒಂದು ಕಣ್ಣೀರ ಹನಿಗೆ
ಕರೆಗೆ ನೀರಾಯಿತಲ್ಲ ಹೃದಯ ...!!!

                           ಸೆಲ್ಫಿ 
ಅಂದು ಆಕೆಯ ಜೊತೆ ತಿಂದಿದ್ದೆ 
ಮ್ಯಾಂಗೋ ಕುಲ್ಫಿ ...
ಇಂದು ಆಕೆ ಮಕ್ಕಳ ಜೊತೆ 
ತೆಗೆಸಿಕೊಳ್ಳಬೇಕಾಯಿತು ಸೆಲ್ಫಿ ...!!!

                           ನೋವು 
ವಸಂತ ಮಾಸದಲ್ಲಿ ಚಿಗುರಿತು ಮಾವು ...
ಸಮ್ಮಿಲನಕ್ಕೆ ಏರಿತು ದೇಹದ ಕಾವು ...
ಆಕೆ ಮುಡಿದಿದ್ದಳು ತಲೆ ತುಂಬಾ ಮಲ್ಲಿಗೆ ಹೂವು ...
ಅಂದು ನನಗೆ ತಲೆ ತುಂಬಾ ನೋವು ...!!!

                           ಭಾಗ್ಯ 
ಸಿದ್ದರಾಮಯ್ಯನ ಸರ್ಕಾರ ಕೊಟ್ಟಿತು 
ಬಡ ಕುಟುಂಬಗಳಿಗೆ ಅನ್ನ ಭಾಗ್ಯ ...
ಬಡ ಮಕ್ಕಳಿಗೆ ಕ್ಷೀರ ಭಾಗ್ಯ ...
ಮುಸ್ಲೀಮರಿಗೆ ಶಾದಿ ಭಾಗ್ಯ ...
ಸಿದ್ಧರಾಮಯ್ಯನಿಗೆ ಬಯಸದೆ ಸಿಕ್ಕಿತು ಮುತ್ತಿನ ಭಾಗ್ಯ ...!!!

                           ನುಡಿ 
ಮನಸು ಎಂಬುದು ಮಾತಿನ ಮುನ್ನುಡಿ ...
ಕನಸು ಎಂಬುದು ಕಾಣದ ಕನ್ನಡಿ ...
ದೇಹ ಎಂಬುದು ಶ್ರೀಗಂಧದ ಗುಡಿ ...
ನಾಲಿಗೆ ಮೇಲಿರಲಿ ಸದಾ ಕನ್ನಡ ನುಡಿ ...!!!

                           ಕಾವೇರಿ ನೀರು 
ಸಾಂಬ ಬೆಳೆಗೆ ಹರಿಸಿದರು ಕಾವೇರಿ ನೀರು ...
ಕಿತ್ತುಕೊಂಡು ನಮ್ಮ ಕುಡಿಯೋ ನೀರು ...
ಕರುಣೆ ಇಲ್ಲ ತಮಿಳು ಸರ್ಕಾರಕ್ಕೆ ಒಂದು ಚೂರು ...
ಕಂಡರೂ ಕನ್ನಡಿಗರ ರಕ್ತ ಕಣ್ಣೀರು ...!!!

                          ಯೋಚನೆ 
ಕಣ್ಮುಚ್ಚಿದರೆ ಸಾಕು ನಿನ್ನದೇ ಯೋಚನೆ ...
ಕೊಟ್ಟಂತೆ ಮಾಡುತಿಯ ಪ್ರೀತಿ ಸೂಚನೆ ...
ಇನ್ನೊಮ್ಮೆ ಮಾಡು ನೀ ಆಲೋಚನೆ ...
ಸಿಗಲಿ ಇದಕ್ಕೊಂದು ವಿಮೋಚನೆ ...!!!

                          ಕಪ್ಪು ಹಣ 
೫೦೦, ೧೦೦೦ ನೋಟುಗಳ ನಿಷೇಧ 
ಹೊರಬಂದಿತು ಕಪ್ಪು ಹಣ ...
Fair & Lovely ಆದರೆ ನಿಷೇಧ ...
ಹೊರ ಬರುವುದು ಹುಡುಗಿಯರ ಕಪ್ಪು ವರ್ಣ ...!!!

                          ರೀ 
ನನ್ನವಳು ಕರೆದಾಗ ರೀ ...
ನನಗಾಗುವುದು ವರಿ ...
ಹೇಳಲಿಲ್ಲವೆಂದರೆ ಅವಳು ಹೇಳಿದ್ದಕ್ಕೆಲ್ಲ ಸರಿ ...
ಮನೆಗೆ ಹೋಗಲು ನನಗೆ ಗಾಬರಿ ...!!!

                          ಪಾಲಿಗೆ 
ಹಿಡಿತವಿಲ್ಲದ ಹೆಂಡತಿಯ ನಾಲಿಗೆ ...
ಗಂಡ ಕೊಟ್ಟಂತಹ ಸಲಿಗೆ ...
ಗಂಡನಿಗೆ ತಿಳಿಯದೆ ಆಗುತ್ತಿದೆ ಹಣದ ಸುಲಿಗೆ ...
ಹೆಂಡತಿಯ ತವರು ಮನೆಯ ಪಾಲಿಗೆ ...!!!

                         ಒಬ್ಬಟ್ಟು 
ಹಬ್ಬ ಬಂತೆಂದರೆ ಸಾಕು 
ನಮ್ಮ ಮನೆಯಲ್ಲಿ ಒಬ್ಬಟ್ಟು ...
ಭಾನುವಾರ ಸಂಜೆ ಆದರೆ ಸಾಕು 
ತಂಗಳ ಉಪ್ಪಿಟ್ಟು ...!!!

                         ಹನಿಗವನ 
ನನ್ನ ಹೆಂಡತಿಗೆ ಇಷ್ಟವಿಲ್ಲ 
ನಾ ಬರೆಯೊ ಹನಿಗವನ ...
ಅವಳಿಗೆ ಯಾವಾಗಲೂ ಒಂದೇ ಚಿಂತೆ 
ಮನಿಗವನ ...!!!

                         ಬದುಕು 
ಹೇಳಿಕೊಡಲಿಲ್ಲ ಬದುಕುವುದು ಹೇಗೆಂದು ನೀನಿಲ್ಲದ ...
ಬದುಕು ಮುಳುಗುವ ಹಡಗಾಗಿದೆ ...
ಅಲೆಗಳು ಮೌನವಾಗಿದೆ ಅಪ್ಪಳಿಸದೆ ...
ಬದುಕು ಹೀಗಾಗಿ ಹೋಯಿತು ಊಹಿಸಲಾಗದೆ ...!!!

                         ನಿಲುವು 
ಇರಬಹುದು ಸಂಸಾರದಲ್ಲಿ ಸಮಸ್ಯೆಗಳು ಹಲವು ...
ಹೊಂದಾಣಿಕೆಯಿಲ್ಲದೆ ವಿಚ್ಛೇದನ ಆಗಿದೆ ಕೆಲವು ...
ಅನಿಸಿಕೊಂಡರೂ, ಸಹಿಸಿಕೊಂಡರೂ ಹುಸಿಯಾಯಿತು ಒಲವು ...
ಸರಿಯೇ? ಹೆಣ್ಣು ತಪ್ಪೆಂದು ದೂರುವ ಈ ಸಮಾಜದ ನಿಲುವು ...!!!

                         ಹೆಸರು 
ಏನು ಹೆಸರು ನಿಂದು ...
ಬಂದಿರುವ ಹಾಗಿದೆ ಮಳೆಯಲಿ ನೆಂದು ...
ಮೈಗಂಟಿದ ಹನಿಗಳು ಜಾರುತಲಿವೆ ನೊಂದು ...
ಬರೆದು ಹೆಸರ ನಿಂದು ...!!!

                         ಕಾವೇರಿ 
ತಮಿಳರ ಆರ್ಭಟಕ್ಕೆ ಕೊನೆಯೆಲ್ಲಿ ...
ಕರುನಾಡಿಗೆ ಕುಡಿಯುವ ನೀರು ಇನ್ನೆಲ್ಲಿ ...
ಕಾವೇರಿ ಬತ್ತಿದಳು ಮಣ್ಣಲ್ಲಿ ...
ಉಕ್ಕಿ ಹರಿದಳು ರೈತರ ಕಣ್ಣಲ್ಲಿ ...!!!

                         ಕನ್ನಡ 
ಕನ್ನಡದಲ್ಲಿ ಬರಿಯಲಾಗುತ್ತಿಲ್ಲ ನಾಲ್ಕು ಸಾಲು ...
ಛೆ, ಇದೆಂಥಾ ಸೋಲು ...
ಅಪ್ಪ ಹಿಡಿದಿದ್ದ್ದರೆ ಅಂದು ಕೈಯಲ್ಲಿ ಕೋಲು ...
ಇಂದು ನಾ ಆಗುತ್ತಿರಲ್ಲಿ ಕನ್ನಡದಲ್ಲಿ ಫೇಲು ...!!!

                          ಸ್ಪರ್ಶ 
ಕಣ್ಣುಗಳು ನಿನ್ನನ್ನೆ ಹುಡುಕುತಿವೆ ...
ಕೈಗಳು ಸ್ಪರ್ಶವ ಬಯಸುತಿವೆ ...
ತಿಳಿದೋ ತಿಳಿಯದೋ ನೀ ನನ್ನ ನಿರಾಕರಿಸುತ್ತಿರುವೆ ...
ನನ್ನ ಕೈಹಿಡಿಯಲು ಇನ್ನೇನು ಯೋಚಿಸುತಿರುವೆ ...!!!

                           ಮೂಕ 
ಮದುವೆಯ ಮುನ್ನ ನಿನ್ನ ಅಂದ ಚಂದಕೆ 
ನಾ ಮೂಕ ವಿಸ್ಮಿತ ...
ಮದುವೆಯ ನಂತರ ನಿನ್ನ ಬಾಯಿಮಾತಿಗೆ 
ನಾ ಮೂಕ ಪ್ರೇಕ್ಷಕ ...!!!

                            ಎದೆಬಿಗಿತ 
ಎದೆಬಿಗಿದ ಹನುಮಂತನಿಗೆ
ಕಾಣಿಸಿದ್ದು ರಾಮ ...
ಅಂಗಿ ಬಿಗಿದ ಹೆಂಡತಿಗೆ ಕಾಣಿಸಿದ್ದು 
ಗಂಡನ ಎದೆ ಮೇಲಿನ ರೋಮ ...!!!

                             ಸಿಟ್ಟು 
ಏನು ಹೇಳಿದರು ನನ್ನ ಹೆಂಡತಿಗೆ ಬರುವುದು ಬೇಗ ಸಿಟ್ಟು ...
ಅವಳು ಹೇಳಿದಂತೆಯೇ ಆಗಬೇಕೆಂದು ಹಿಡಿವಳು ಪಟ್ಟು ...
ಕೇಳಿಸಿಕೊಳ್ಳ ಬೇಕಂತೆ ನಾನು ಸುಮ್ಮನೆ ಕೈಕಟ್ಟು ...
ಕತ್ತರಿಸಬೇಕೆನಿಸುತ್ತದೆ ರಾತ್ರಿ ಮಲಗಿರುವಾಗ ಅವಳ ಜುಟ್ಟು ...!!!

                             ತಾಳಿ 
ಹಣ್ಣಿಗೆ ಕಟ್ಟುವಾಗ ತಾಳಿ ...
ಗಂಡಸರೇ ಸ್ವಲ್ಪ ತಾಳಿ ...
ಅತಿ ಖುಷಿಯಾಗಬೇಡಿ ಕಟ್ಟುವಾಗ ತಾಳಿ ...
ವರುಷ ಕಳೆದ ಮೇಲೆ ಹೇಳುವಳು 
ಅಡಿಗೆ ಮನೆಯ ಪಾತ್ರೆ ತೊಳಿ ...!!!

                             ಸಾಲ
ಸಾಲ ಕೇಳಿ ಬರುವರು ಮನೆಗೆ ...
ಬಿಡೋದಿಲ್ಲ ಹಣ ಕೊಡುವವರೆಗೆ ...
ಮರಳಿ ಮಾಡಿದರೆ ಅವರ ಮೊಬೈಲ್ ಕರೆಗೆ ...
ಚಂದದಾರರು ವ್ಯಾಪ್ತಿ ಪ್ರದೇಶದ ಹೊರಗೆ ...!!!

                             ಕಲೆ 
ಇದ್ದರೇನಂತೆ ಬಿಡೆ ಮುಖದಲ್ಲಿ ಕಪ್ಪು ಕಲೆ ...
ಬಡಿದೆಬ್ಬಿಸಿದೆಯಲ್ಲ ನನ್ನೊಳಡಗಿದ್ದ ಕಲೆ ...
ನಿನ್ನ ಸ್ನೇಹದಿಂದ ಶುರುವಾಯಿತು ಹವ್ಯಾಸ ಚಿತ್ರಕಲೆ ...
ಮದುವೆಯಾದ ಮೇಲೆ ಆಯಿತು ಬೊಕ್ಕತಲೆ ...!!!

                             ಹುಂಬ
ಬೆಂಬಿಡದ ನಿನ್ನ ಪ್ರತಿಬಿಂಬ ...
ತುಂಬಿಕೊಂಡಿರಿವೆ ತಲೆ ತುಂಬ ...
ಹೌದು ಕಣೆ ನಾನು ಸ್ವಲ್ಪ ಹುಂಬ ...
ನಾನೆ ಕಣೆ ನಿನ್ನ ಜೀವನದ ಆಧಾರಸ್ತಂಭ ...!!!

                             ಪ್ರೀತಿ
ಪ್ರಿಯೆ, ನೆನಪಿಲ್ಲವೆ ನಾವು ಓಡಾಡಿದ ದಿನಗಳು 
ಮರಗಳ ನೆರಳಲ್ಲಿ ...
ಕಡಲ ಮರಳಲ್ಲಿ ...
ಕನಸುಗಳ ಇರುಳಲ್ಲಿ ...
ಇಂದೇಕೆ ಮೌನವಾದೆ ಪರಪುರುಷನ ತಾಳಿ 
ಬೀಳುವಾಗ ಕೊರಳಲ್ಲಿ ...!!!

                            ಕರೆಯೋಲೆ
ಬಾಗಿಲಲ್ಲಿ ನಿಂತಿರುವಳು ಮದುವೆಯ ಕರೆಯೋಲೆ ಹಿಡಿದುಕೊಂಡು ...
ಪ್ರೀತಿಯ ನೆನಪಿನ ದಿನಗಳನ್ನು ಬಚ್ಚಿಟ್ಟುಕೊಂಡು ...
ಗೋಡೆಯ ಮೇಲೆ ಇಂಚಿಂಚೂಗೂ ಅವಳ ಭಾವಚಿತ್ರಗಳನ್ನು ಕಂಡು ...
ಮೌನ ಮುದುಡಿಕೊಂಡು ಹಿಂತಿರುಗಿದಳು ಬಟ್ಟಲು ಕಂಗಳಲ್ಲಿ ಕಂಬನಿ ತುಂಬಿಕೊಂಡು ...!!!

                          ದೀಪಿಕಾ ಪಡುಕೋಣೆ 
ದೀಪಿಕಾ ಪಡುಕೋಣೆ 
ವಯಸ್ಸು 30 ದಾಟಿದೆ ಕಣೆ ...
ಇನ್ನು ಯಾವಾಗ ಏರುವುದು ಹಸೆಮಣೆ ...
ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆಯಲ್ಲ ಇದಕ್ಕೆ ಯಾರು ಹೊಣೆ ...!!!

                          ಶಿಲ್ಪಾ ಶೆಟ್ಟಿ 
ಶಿಲ್ಪಾ ಶೆಟ್ಟಿ ನೀನು ಯೋಗದಲ್ಲಿ ತುಂಬಾ ಗಟ್ಟಿ ...
ಯಾರಿರುವರು ಹೇಳು ನಿನ್ನ ಮೈಕಟ್ಟಿಗೆ ಸರಿಸಾಟಿ ...
ನಿನ್ನ ಯೋಗದ ಚಿತ್ರಗಳನ್ನ ನೋಡಿ ತಲೆಕೆಟ್ಟಿ ...
ಸೊನ್ನೆಗಳಿಂದ ತುಂಬಿರುವುದು ನನ್ನ ಅಂಕಪಟ್ಟಿ ...!!!

                          ಹಸ್ಬೆಂಡ್ 
ಮದುವೆಯ ಹೊಸತರಲ್ಲಿ ಎಲ್ಲ ಹೆಂಗಸರಿಗೂ 
ತಮ್ಮ ಗಂಡಂದಿರು ಪ್ರೀತಿಯ ಹಸ್ಬೆಂಡ್ ...
ಕೆಲವು ವರ್ಷಗಳ ನಂತರ 
ಎಲ್ಲ ಗಂಡಂದಿರು ಹಸ-ಬೆಂಡು ...!!!

                          ಮುನಿ-ಮನಿ
ಹೆಣ್ಣು - ಮುಟ್ಟಿದರೆ ಮುನಿ ...
ಗಂಡು - ಮುಟ್ಟಿದರೆ ಮನಿ ...!!!

                           ನೆಮ್ಮದಿ 
ಜೀವನದಲ್ಲಿ ನೆಮ್ಮದಿಯ ಕಳೆದುಕೊಂಡು ...
ಕುಳಿತುಕೊಳ್ಳುತ್ತಾರೆ ಹುಡುಗರು ಬಂತೆಂದರೆ ಸಾಕು ವೀಕೆಂಡು ...
ಅವರಿವರಿಗೆ ಬೈದುಕೊಂಡು 
ash trey ನಲ್ಲಿ ಸಿಗರೇಟುಗಳ ತುಂಡು ...
ಖಾಲಿ ಬಾಟಲಿಯಲ್ಲಿ ಬಿಟ್ಟು ಇನ್ನು ಸ್ವಲ್ಪ ಗುಂಡು ...!!!

                          City 
ಹೇಳಿಕೊಳ್ಲಲು ಬೆಗಳೂರು ಮಹಾನಗರ gardencity ...
ಆದರೆ ಅದು gardencity ಅಲ್ಲ garbegcity ...
fastfood ಜನಜೀವನದ simplicicty ...
ಬಂದಿರುವುದು ಎಲ್ಲರಿಗು obescity ...!!!

                          ಮೇವು ಹಗರಣ 
ಸಮೋಸ ಎಂದರೆ ನೆನಪಾಗುವುದು ಆಲೂ ...
ದನಕರುಗಳಿಗೆ ಮೇವು ಇಲ್ಲವೆಂದರೆ ನೆನಪಾಗುವರು ಲಾಲೂ ...!!!

                          ಒಬ್ಬಟ್ಟು 
ನನ್ನಾಕೆ, ತನ್ನ ಕಡೆಯವರು ಬಂದಾಗ 
ಮಾಡಿ ಬಡಿಸುವಳು ಒಬ್ಬಟ್ಟು ...
ನನ್ನ ಕಡೆಯವರು ಬಂದಾಗ 
ತಂದಿಡುವಳು ತಂಗಳ ಉಪ್ಪಿಟ್ಟು ...!!!

                        ವ್ಯತ್ಯಾಸ 
ಹಣ್ಣಿಗೂ ಹೆಣ್ಣಿಗೂ ಏನು ವ್ಯತ್ಯಾಸ 
ಎರಡಕ್ಕೂ ಒಂದೆ ಉತ್ತರ 
"End of season sale " ...!!!

                        ಜೀವನ 
ತಾಯಿ ಮಗನ ತಲೆ ನೇವರಿಸಿದರೆ 
     ಹಸನಾಗುವುದು ಬಾಳು ...
ಹೆಂಡತಿ ಗಂಡನ ತಲೆ ನೇವರಿಸಿದರೆ 
     ವ್ಯಸನಾಗುವುದು ಕೂದಲುದುರಿ ಬೋಳು ...!!!

                        ಕಟೌಟು 
ಬೆಂಗಳೂರಿನ ಚಿತ್ರಮಂದಿರಗಳಲ್ಲಿ 
ಕನ್ನಡ ಚಿತ್ರಗಳಿಗೆ ಬಾರಿ ಕಟೌಟು ...
ಪರಭಾಷೆ ಚಿತ್ರಗಳು ಬಂದರೆ 
ಕನ್ನಡ ಚಿತ್ರಗಳಿಗೆ ಗೆಟೌಟ್ ...!!!

                      ಬೇಸರ 
ದಿನಪತ್ರಿಕೆಗಳಿಗೆ ಕವನಗಳ ಕಳುಹಿಸಿ ಕಳುಹಿಸಿ ಆಗಿರುವುದು ಬಲು ಬೇಸರ ...
ಕಾರಣ ಇನ್ನು ಬರುತಿಲ್ಲ ಅದರಲ್ಲಿ ನನ್ನದೊಂದು ಹೆಸರ ...
ಬೆಳಕು ನೀಡೊ ನೇಸರ ...
ಬೆಳಕಾಗಿಸು ನನ್ನ ಕವನಕ್ಕೆ ಬಿಟ್ಟು ಸ್ವಲ್ಪ ಲೇಸರ ...!!!

                     ನಗೆ 
ತುಟಿ ನಡುವೆ ಇರೊ ನಗೆ 
    ಹಲವುಬಗೆ ...
ತುಟಿ ಅಂಚಿನಲ್ಲಿರುವ ನಗೆ 
    ಮುಗುಳು ನಗೆ ...!!!

                    ಉತ್ತರ 
ಸುರಿದರು ನೆತ್ತರ ಸುಳಿಯಲಿಲ್ಲ ಹತ್ತಿರ ...
ಏನು ತೋಚದೆ ಮನಗೊಂಡಿದೆ ತತ್ತರ ...
ಕನಸುಗಳ ಕಟ್ಟಿರುವೆ ಬಲು ಎತ್ತರ ...
ಸಿಗದೆ ಹಲವು ಪ್ರಶ್ನೆಗಳಿಗೆ ಉತ್ತರ ...!!!

                   ಕಂಬನಿ 
ಕಂಬನಿ ಸುರಿಯುತಿದೆ ಇಳಿಜಾರಿನ ಕೆನ್ನೆಗೆ ...
ತಡೆಹಿಡಿಯಬೇಕೆ ನಿನಗೆ ?
ಅತ್ತುಬಿಡಬೇಕೆನಿಸಿದೆ ನನಗೆ 
ತೋಳ್ಗಳ ಚಾಚಿಬಿಡು ಸಾಕೆನಗೆ ...!!!

                   Ring (ರಿಂಗು)
ಮದುವೆಯ ಮುನ್ನ engagement "Ring" ...
ಮದುವೆಯ ನಂತರ suffe"Ring" ...!!!

                  ಕತ್ತಲು
ಆವರಿಸಿದೆ ಸಂಜೆಗತ್ತಲು ...
ಯಾರಿಲ್ಲ ಸುತ್ತಮುತ್ತಲು ...
ಹೊತ್ತಲ್ಲದ ಹೊತ್ತಿನಲೂ ...
ತುಟಿ ಬಯಸುತಿದೆ ಮುತ್ತಲು ...!!!

                  ನೋವು 
ನಗು ಮೊಗದ ಹುಡುಗ ನಾನು 
        ನಗುವನ್ನೆ ಮರೆಸಿದೆ ನೀನು ...
ಕೈ ಹಿಡಿಯಲು ಬಂದವನು ನಾನು 
        ಕೈ ಬಿಡಿಸಿಕೊಂಡು ಹೋದವಳು ನೀನು ...
ದೊಡ್ಡ ಕನಸುಗಳನು ಕಟ್ಟಿರುವೆ ನಾನು 
        ಕನಸು ಕನಸಾಗಿಯೆ ಉಲಿಯಲು ಕಾರಣ ನೀನು ...
ಹೊತ್ತಲ್ಲದ ಹೊತ್ತಿನಲೂ ನೆನಪಿಸಿಕೊಳ್ಳುವೆ ನಾನು 
        ನೆನಪಾಗುವ ನೆಪದಲ್ಲಿ ನೆನಪಾಗಿಯೆ ಉಳಿದೆ ನೀನು ...!!!

                     ಹೆಂಡ 
ಹೆಂಡತಿ ಮನೆಯೊಳಗಿದ್ದರೆ ಉಪ್ಪು ಹುಳಿ ಸಿಹಿ ಖಾರ ...
ಗುಂಡು ತುಂಡಿಗೆ ಅನುಮತಿ ಇಲ್ಲದೆ ಗ್ರಹಚಾರ ...
ಹೆಂಡತಿ ತವರಿಗೆ ಹೋದಾಗ ಹೆಂಡವೆ ಆಹಾರ ...
ಉಪ್ಪಿನಕಾಯಿಯೆ ಉಪಚಾರ ...!!!

                    ಕೊರಗು 
ಕಣ್ಣ ಕಾಡಿಗೆ ಕಂಬನಿಗೆ ಕರಗಿ ...
ಇಳಿಜಾರಿನ ಕೆನ್ನೆಗೆ ಒರಗಿ ...
ಮನಗುಂದಿದೆ ದೇಹವು ಸೊರಗಿ ...
ನೋವ ನುಂಗುತ್ತಿದೆ ಜೀವ ದಿನವೂ ಕೊರಗಿ ಕೊರಗಿ ...!!!

                    ಪ್ರೀತಿ 
ಪ್ರೇಮಿಗಳು ಪ್ರೀತಿಸುತ್ತಾರೆ ...
ದಂಪತಿಗಳು ಪ್ರೀತಿಸಿ ಸುತ್ತುತ್ತಾರೆ ...!!!

                    ಜಡೆ
ಅಂದಿನ ಹೆಣ್ಣು ಮಕ್ಕಳ ಜಡೆ ...
ಹಾವಿನ ಹೆಡೆಯಂತಿತ್ತು ಜಡೆ ...
ಇಂದಿನ ಹೆಣ್ಣು ಮಕ್ಕಳ ಜಡೆ ...
ಕೊತ್ತುಎಂಬರಿ ಕಟ್ ಗಿಂತಲೂ ಕಡೆ ...!!!

                   ಆಸಕ್ತಿ 
ಗಂಡಿಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದರೆ
ಅವರ ಮನೆಯಾಗತ್ತೆ ಲೈಬ್ರರಿ ...
ಹೆಣ್ಣಿಗೆ ಬಂಗಾರದಲ್ಲಿ ಆಸಕ್ತಿ ಇದ್ದರೆ 
ಅವರ ಮನೆಯಾಗತ್ತೆ ರಾಬರಿ ...!!!

                  ಕ್ಯಾಂಟೀನ್ 
ಹಸಿವು ಮುಕ್ತ ಬೆಂಗಳೂರಿಗರಿಗೆ 
ಜೆಡಿಎಸ್ ಕೊಟ್ಟಿತು 'ನಮ್ಮ ಅಪ್ಪಾಜಿ ಕ್ಯಾಂಟೀನ್ '...
ಸಿದ್ದು ಸರ್ಕಾರ ಕೊಟ್ಟಿತು 'ಇಂದಿರಾ ಕ್ಯಾಂಟೀನ್ '...
ಬಿಜೆಪಿಯಿಂದ ಯೆಡಿಯೂರಪ್ಪನವರು ಕೊಡಬಹುದೆ
೧೦ ರೂ. ಗೆ ಬಿಯರ್ ಬಾಟಲಿ ಕ್ಯಾನ್ ಗಳ ಟಿನ್ ...!!!

                  ಏಕಾಂತ 
ಹಿಂತಿರುಗಿ ಸುಳಿಯಲಿಲ್ಲ ಆದರೂ ವಾರಾಂತ್ಯ ...
ಹೋಗಿ ಕುಂತುಬಿಟ್ಟವಳೆ ತವರು ಮನೆಯಲ್ಲಿ ಬೇಕಂತ ...
ನೀ ಹೀಗೆ ಬಿಟ್ಟರೆ ನನ್ನ ಏಕಾಂತ ...
ಹೇಗಿರಲಿ ನಾ ಜೀವಂತ ...!!!

                  ಪ್ರೀತಿ ಇಲ್ಲದ ಮೇಲೆ 
ಕಾದು ಕಾದಿರಿಸಿ ಹೇಳಿದಳು ಬರಲೊಲ್ಲೆ ...
ಮಡುಗಟ್ಟಿವೆ ನೋವುಗಳ ಸರಮಾಲೆ ...
ಈ ಒಂಟಿ ಜೀವಕೆ ಇನ್ನೆಲ್ಲಿಯ ಲೀಲೆ ...
ಪ್ರೀತಿ ಇಲ್ಲದ ಮೇಲೆ ...!!!

                 ಶಾಲು 
ಬರೆದರೆ ನಾಲ್ಕು ಸಾಲು ...
ಕವಿಗೋಷ್ಠಿಯಲ್ಲಿ ಹೊದಿಸುವರು ಶಾಲು ...
ನನ್ನ ಮಡದಿಯಾಕೆ ಹೇಳಿದಳು 
ಬರೆಯಿರಿ ಇನ್ನು ಹೆಚ್ಚಿಗೆ ನಾಲ್ಕು ಸಾಲು ...
ಕೊಡಬಹುದು ಶಾಲಿನ ಜೊತೆ ಟವಲ್ಲು ...!!!

                ಆಟ
ಕಷ್ಟಗಳೆದುರಾದಾಗ ಶನಿಕಾಟ ...
ಪ್ರಾಣ ಹಾರಿಹೋದರೆ ವಿಧಿಯಾಟ ...
ಜೀವವೆಂಬುದು ಗೊಂಬೆಯಾಟ ...
ಜೀವನವೆಂಬುದು ಬದುಕು ಕಲಿಸೊ ಪಾಠ ...!!!

               ಹೆಸರು 
ಹುಟ್ಟಿದಾಗ ಉಸಿರು ...
ಜೀವನದುದ್ದಕ್ಕೂ ದುಡಿಮೆಯೆ ಕೈ ಕೆಸರು ...
ಬದುಕಿದ್ದಾಗ ಉಳಿಸು ಹೆತ್ತವರ ಹೆಸರು ...
ಸತ್ತಮೇಲೆ ಉಳಿಯುವಂತೆ ಮಾಡು ನಿನ್ನ ಹೆಸರು ...!!!

               ಆಹಾರ 
ನನ್ನ ಹೆಂಡತಿ ಮನೆಯಲ್ಲಿದ್ದಾಗ ಮಾಡುವಳು 
ರುಚಿ ರುಚಿಯಾದ ಆಹಾರ ...
ಅವಳು ತವರಿಗೆ ಹೋದಾಗ 
ಹೆಂಡವೆ ಆಹಾರ ...!!!

                 ದಡ್ಡ 
ನನ್ನವಳು ಹೇಳಿದಳು 
ನಿನಗೆ ಒಂದು ಮುತ್ತು ಕೊಡಲು ಬರುವುದಿಲ್ಲ ದಡ್ಡ ...
ಅವಳು ಕೈಕೊಟ್ಟು ಹೋದಾಗ 
ಸ್ವಲ್ಪ ಹೆಚ್ಚಾಗಿದೆ ಗಡ್ಡ ...!!!

                 ಬಂಗಾರ 
ಮಾತು ಬೆಳ್ಳಿ ಮೌನ ಬಂಗಾರ ...
ಹೌದು ಸ್ವಾಮಿ ನಿಜ 
ಬೆಲೆ ಗಗನಕ್ಕೇರಿದಾಗ 
ನನ್ನ ಹೆಂಡತಿ ಮೌನ ಬಂಗಾರ ...!!!

                  ಆಕರ್ಷಣೆ 
ಆಕೆ ಆಕರ್ಷಿತಳಾಗಿದ್ದು ಅವಳು ಹಚ್ಚಿದ ಕಣ್ಣ ಕಾಡಿಗೆ ...
ಸಣ್ಣ ನಡುವಿನ ನಡಿಗೆ ...
ಅವಳು ಬೀಳಲಾರದ ಈ ಬಾಡಿಗೆ ...
ಕೆರೆತ ಹೆಚ್ಚಗಿದೆ ದಾಡಿಗೆ ...!!!

                   ಪ್ರಶ್ನೆ 
ಕೇಳಿದರೊಬ್ಬರು ನನ್ನ,
ನೀವು ಹೆಣ್ಣಿನ ಬಗ್ಗೆಯೇ ಹೆಚ್ಚು 
ಹನಿಗವನಗಲ್ಲ ಬರೆಯುತ್ತೀರಿ ಏಕೆ ?
ಹೌದು, ಹೆಣ್ಣು ಹಣ್ಣಿನಷ್ಟೇ 
ರುಚಿಯಾಗಿರುತ್ತಾಳೆ ಅದಕೆ ...!!!

                   ಆಚರಣೆ 
ಅಂದು ನಮ್ಮ ಪ್ರೀತಿ ಪ್ರೇಮ 
ದಿನಗಳ ಆಚರಣೆ ...
ಇಂದು ನೋವುಗಳ ಜೊತೆ 
ದಿನವೂ ಜಾಗರಣೆ ...!!!

                  ಧಾರವಾಡ
ಧಾರವಾಡ ಎಂದರೆ ನೆನಪಾಗುವುದು ಫೇಡಾ ...
ಫೇಡಾ ಎಂದರೆ ನೆನಪಾಗುವರು ವೈದ್ಯರು ...
ಹೇಳಿದ್ದರು ಸಿಹಿ ತಿನ್ನಬೇಡ ...!!!


                 ಹಲವುಸಲ
ನೋಡಿದರು ನಿನ್ನ ಮೊದಲಸಲ ...
ನೆನಪಾಗುವೆ ಹಲವುಸಲ ...
ಕಣ್ಣೆದುರೇ ಆದು ಹೋಗುವೆ ಪ್ರತಿಸಲ ...
ಒಪ್ಪಿಬಿಡು ಮನವೆ ಒಂದುಸಲ ...!!!


                 ಮುಖ
ಬೆಳಗಾಗೆದ್ದು ನೆನೆದರೆ ನಿನ್ನ ಮುಖ ...
ದಿನಚರಿಯಲ್ಲಿ ನೀನೆ ಪ್ರಮುಖ ...
ನಿನ್ನ ಮುಖ ಸದಾ ಹಸನ್ಮುಖ ...
ಮನದ ಕನವರಿಕೆಗೆ ದಿನಭೇಟಿಯೇ ಗುಣಮುಖ ...!!!


                 ಸಂತೂರು
ಆಕೆ ಒಂದು ಹೆಣ್ಣು ಮಗುವಿನ ತಾಯಿಯೆಂದು
ಗೊತ್ತಾಗುವುದೇ ಇಲ್ಲ ಒಂಚೂರು ...
ಕಾರಣ  ಸಂತೂರು ...!!!


                 ವ್ಯತ್ಯಾಸ
ಸ್ಕೂಲಿಗೆ ಹೋಗುವ ದಿನಗಳಲ್ಲಿ
ಹಾಕುತ್ತಿದ್ದೆವು ದೀಪಕ್ಕೆ ಎಣ್ಣೆ ...
ಇಂದು ಹಾಕುತ್ತಿದ್ದೇವೆ
ಹೊಟ್ಟೆಗೆ ಎಣ್ಣೆ ...!!!


                 ಒಳ್ಳೆತನ
ನನ್ನ ಹೆಂಡತಿ ತುಂಬಾ ಒಳ್ಳೆಯವಳು
ಏಕೆಂದರೆ ...
ಮನೆಗೆ ಕುಡಿದುಕೊಂಡು ಹೋದರು ...
ಆಗುವುದಿಲ್ಲ ತೊಂದರೆ ...!!!


                 ವಿದಾಯ
ಹೇಳಿದಳು ವಿದಾಯ ...
ಹೃದಯದಲ್ಲಿ ಮೂಡಿಸಿ ಹೊಸದೊಂದು ಗಾಯ ...
ಕ್ಷಮೆಗೂ ಕೊಡದೆ ಸ್ವಲ್ಪ ಸಮಯ ...
ಆಗಬೇಕಿದೆ ಬತ್ತಿದ ಹೃದಯಕೆ ಪ್ರೀತಿಯ ವ್ಯವಸಾಯ ...!!!


                 ಗುರುತು
ತುಟಿಯ ಮೇಲೆ ತುಂಟಾಟದ ಗುರುತು ...
ಒಡನಾಟದಲಿ  ಮನಸುಗಳು ಬೆರೆತು ...
ಅಪ್ಪುಗೆಯ ಸಂಭದವನ್ನು ನೀನು ಅರಿತು ...
ಹೇಗೆ ಬಾಳಲಿ ಇವೆಲವನ್ನು ನಾನು ಮರೆತು ...!!!


            ನಿಲ್ಲಲು
ಆಗೋದಿಲ್ಲ ಕಣೆ ನಿನ್ನ ಎದುರು ನಿಲ್ಲಲು ...
ನಿನ್ನ ಕಂಗಳು ಸೆಳೆಯುತ್ತವೆ ನನ್ನ ಕೊಲ್ಲಲು ...
ಬರುವಾಗ ನೀ ನಗುವೊಂದು ಚೆಲ್ಲಲು ...
ಕಾರಣವೂ ಬೇಕೇ ನಾ ಸೋಲಲು ...!!!


            ಎಲ್ಲೆಲ್ಲೂ ನೀನೆ
ಎದೆಯಲ್ಲೂ ನೀನೆ ...
ಎದುರಲ್ಲೂ ನೀನೆ ...
ಎಲ್ಲೆಲ್ಲೂ ನೀನೆ ...
ದಿನ ಕೊರಗುವುದು ಮಾತ್ರ ನಾನೆ ...!!!


            ಸಂಖ್ಯಾಬಲ 
ಸೋತಿರಬಹುದು ಬಿಜೆಪಿ ಇಂದು 
 ಕೇವಲ ಸಂಖ್ಯೆಯಲ್ಲಿ ...
ಕರುನಾಡ ಜನತೆಯ ಹೃದಯ ಗೆದ್ದಿತು ...
 ಹೆಚ್ಚಿನ ಸಂಖ್ಯೆಯಲ್ಲಿ ...!!!

            ಅಳು
ಮಾಯವಾದಳು ಕಣ್ಣ ಕನ್ನಡಿಯೊಳಗೆ ...
ಮೂಡಿಸಿ ಹೊಸದೊಂದು ಗಾಯ ಎದೆಯೊಳಗೆ ...
ಅಳಬೇಕೆನಿಸಿದೆ ಏಕೊ ಒಳಗೊಳಗೆ ...
ಪಾಪಿ ಕಣ್ಣೀರು ಬತ್ತಿದೆ ಹೃದಯದೊಳಗೆ ...!!!

            ಮಾಹಿತಿ
ಸಿಕ್ಕರೆ ಸಾಕು ಕಣೆ ನಿನ್ನ ಬಗ್ಗೆ
    ಸ್ವಲ್ಪ ಮಾಹಿತಿ …
ನಾ ಬರೆಯುವೆ ...
    ಕಣ್ಣಲ್ಲೆ ಸಾಹಿತಿ …!!!


         ಜೊತೆಗಿದ್ದವಳು
ಕತ್ತಲಲ್ಲಿ ಕಣ್ಣಾದವಳು …
ಬಿಸಿಲಲ್ಲಿ ನೆರಳಾದವಳು …
ಏಕಾಂತದಲ್ಲಿ ಒಂಟಿಯಾದವಳು …
ಮದುವೆ ಎಂದೊಡನೆ ಮರೆಯಾದಳು …!!!


           Hi Bye 
ಸಿಕ್ಕಾಗ Hi ಅಂತಿಯ ...
ಹೋಗುವಾಗ Bye ಅಂತಿಯ ...
I Love You ಅಂತ ಯಾವಾಗ ಅಂತಿಯ ...!!!

          ಮರೆತೆ
ನಿನ್ನ ನೋಡಿದ ದಿನದಿಂದ 
ನನ್ನೇ ನಾ  ಮರೆತೆ ...
ನಿನ್ನ ಸ್ನೇಹಿತೆಯ ನೋಡಿದ ಕ್ಷಣದಿಂದ 
ನಿನ್ನೆ ನಾ ಮರೆತೆ ...!!!

          ಕೋರಿಕೆ 
ಕನಸಲ್ಲೂ ನಿನದೆ ಕನವರಿಕೆ ...
ಮನದಲ್ಲೂ ನಿನದೆ ಮನವರಿಕೆ ...
ದೇವರಲ್ಲಿ ನನ್ನದೊಂದೆ  ಕೋರಿಕೆ ...
ಅದುವೆ ನಿನ್ನ ಚೇತರಿಕೆ ...!!!

           ಬಣ್ಣನೆ 
ತಿರುಗಿ ನೋಡದೆ ನೀನು ಹೋದರು ನೀನು ಪರವಾಗಿಲ್ಲ ...
ನಿನ್ನ ನೋಡದೆ ನಾನು ಇರುವುದಿಲ್ಲ ...
ದಿನವಿಡಿ ನಿನ್ನ ನೋಡಿದರು ಕಣ್ಣುಗಳಿಗೆ ಸಾಕೆನಿಸುವುದಿಲ್ಲ ...
ನಿನ್ನ ಬಣ್ಣಿಸಲು ಪದಗಳೆ ಸಾಕಾಗುವುದಿಲ್ಲ ...!!!

              ಮದುವೆ ಯಾವಾಗ?
ಹೋದಲೆಲ್ಲಾ ಕೇಳುವರು ಮದುವೆ ಯಾವಾಗ ...?
ಬರಿ ಉಪ್ಪಿಟ್ಟು ತಿಂದು ಬರ್ತಿಯಲ್ಲೋ ಆಗಾಗ ...
ಮದುವೆ ಯಾದೊಡನೆ ಕೇಳುವರು ಮಕ್ಕಳು ಯಾವಾಗ ...?
ತಡವಾದರೆ ಹೇಳುವರು ಹಸಿ ಈರುಳ್ಳಿ ನುಗ್ಗೆಕಾಯಿ ತಿನ್ನುತ್ತಿರು ಆಗಾಗ ...!!!

              ಕಳೆದ ನಗುವು 
ನಿನದೆ ನೋವು ನಿನದೆ ಜಗವು ...
ಕಂಬನಿಯಿಂದ ತುಂಬಿದೆ ನಿನ್ನ ಮೊಗವು ...
ನಿನ್ನ ಮನಸು ಒಂದು ಮುಗ್ದ ಮಗುವು ...
ಸಿಗಲಿ ಬೇಗ ಕಳೆದು ಹೋದ ನಗುವು ...!!!

            ಆಹಾರ 
ಹೆಂಡತಿ ಮನೆಯಲ್ಲಿದ್ದರೆ ರುಚಿ 
ರುಚಿಯಾದ ಆಹಾರ ...
ಹೆಂಡತಿ ತವರಿಗೆ ಹೋದರೆ
ಹೆಂಡವೆ ಆಹಾರ ...!!!

           ಉಂಗುರ
ಗುಂಗುರ ಚೆಲುವೆಗೆ ಮನಸೋತು 
ಹಾಕಲು ಹೋದಾಗ ಕೈಗೆ ಉಂಗುರ 
ಮೂರ್ಛೆ ಹೋದೆ ನೋಡಿ ಅವಳ ಕಾಲುಂಗುರ ...!!!

           ಮುತ್ತಿಕ್ಕು 
ಮುಗಿಲು ಸಿರಿದ ಮಳೆ ...
ಮುತ್ತಿಕ್ಕುತಿದೆ ಇಳೆ ...
ಮದರಂಗಿ ಹೆಣ್ಣಿನ ಮುಖದಲ್ಲಿ ನಾಚಿಕೆಯ ಕಳೆ...
ನವಿರಾದ ಕೈಗಳಿಗೆ ಮುತ್ತಿಕ್ಕುತ್ತಿವೆ ಬಳೆ ...!!!

            ಸ್ವಾದ
ಹೆಂಡತಿಯ ಕೈರುಚಿ ಎಷ್ಟೇ ಇದ್ದರು ಸ್ವಾದ ...
ಇರಲೇ ಬೇಕು ಮನೆಯಲ್ಲಿ ವಾದ ...
ಎರಡು ದಿನಗಳಾದರೂ ಮುಗಿಯದ ವಾಗ್ವಾದ ...
ಭೀಮನ ಅಮಾವಾಸ್ಯೆ ಬಂದರಂತೂ ಮುಟ್ಟೋದಿಲ್ಲ ಗಂಡನ ಪಾದ ...!!!

       ಹುಡುಗಿ ನಕ್ಕರೆ 
ಕನಸಲ್ಲಿ ಹುಡುಗಿ ನಕ್ಕರೆ 
  ಹೃದಯ ಆಹ್ಲಾದಕರ ...
ಎದುರಿಗೆ ಹುಡುಗಿ ನಕ್ಕರೆ 
  ಹೃದಯ ಹಾನಿಕರ ...!!!

          ಉಪ್ಪಿಟ್ಟು 
ಹುಡುಗಿ ನೋಡಲು ಹೋದಾಗ 
 ಚೆಲುವೆ ತಂದಳು ಉಪ್ಪಿಟ್ಟು ...
ಮೊದಲ ರಾತ್ರಿಯಲ್ಲಿ 
 ಅವಳ ಮುಖ ಕಪ್ಪಿಟ್ಟು ...!!!

           ಜೀವನ
ನಾ ಬರೆಯುವೆ ಹನಿಗವನ ...
ಹನಿಯೆ ಇಲ್ಲದ ನನ್ನ ಜೀವನ ...
ಮರುಗಟ್ಟಿದ ನೋವುಗಳಿಗೆ ಎಲ್ಲಿಯ ಸಾಂತ್ವನ ...
ಕೊನೆಯಿಲ್ಲದ ಕಂಬನಿಗೆ ಇಳಿಜಾರಿನ ಪಯಣ ...!!!

            ನೇಸರ
ನೆತ್ತಿಮೇಲೆ ಬಂದಿರುವನು ನೇಸರ …
ಬೆಳಗ್ಗೆ ಕಣ್ಣು ಬಿಡಲು ಬಲು ಬೇಸರ …
ಅಮ್ಮ ತಂದು ಕೊಡುತ್ತಿದ್ದಳು ಕಾಫಿ
ಮೆಲುಧನಿಯಲಿ ಕರೆಯುತ ಹೆಸರು …
ಹೆಂಡತಿ ಕರೆವಳು ಎದ್ದು ಬಾ ಬೇಗ
ಎಚ್ಚುವಂತೆ ತರಕಾರಿ ಸರ ಸರ …!!!


             ನೇಸರ
ಕಾರ್ಮೋಡದಲಿ ಬಂಧಿಯಾಗಿರುವನು ನೇಸರ …
ಭುವಿ ಬೆಳಗಿಸಲಾಗದೆ ಪಡುತಿಹನು ನೇಸರ …
ಭುವಿಗೆ ಮುತ್ತಿಕ್ಕಲು ಮಳೆರಾಯನಿಗೆ ಅವಸರ …
ಹನಿ ಮುತ್ತುಗಳ ಪೋಣಿಸಿ ಬರೆಯಬೇಕೆಂಬ ಆಸೆ ನನ್ನವಳ ಹೆಸರ …!!!


                ಸರ
ನನ್ನ ಹೆಂಡತಿಗೆ ಮುತ್ತು ಕೊಡಲು
 ನನಗೆ ಬಲು ಅವಸರ …
ಮುತ್ತು ಕೊಡಲು ಹೋದರೆ ಕೇಳುವಳು
 ಎಲ್ಲಿ ಕಾಸಿನ ಸರ ? !!!


               ಪಂಚು
ಹನಿಗವನದಲ್ಲಿ ಇರಲೇಬೇಕು
 ಕೊನೆ ಸಾಲಿನಲ್ಲಿ ಪಂಚು …
ದಿನ ನೋಡುವೆನು ನನ್ನ ಹೆಂಡತಿಯ ಮುಖದಲ್ಲಿ
 ಕಾದ ಕೆಂಪು ಹೆಂಚು …!!!



            ಅಭ್ಯಾಸ 
ಶಾಲೆಯಲ್ಲಿ ತಲೆಗೆ ವಿದ್ಯಾಭ್ಯಾಸ ...
ಈಗ ದಿನ ನಿನ್ನ ಹಿಂದೆ ಸುತ್ತುವುದೆ 
ನನಗೆ ಅಭ್ಯಾಸ ...!!!

            Scarf
ಮುಖದ ತುಂಬಾ ನೀ Scarf ಹಾಕಿಕೊಂಡರೆ ಹೀಗೆ ...
ನಿನ್ನ ತ್ವಚೆಯ ಮೈಕಾಂತಿಯನ್ನು ಹುಡುಗರು ನೋಡುವುದು ಹೇಗೆ ...
ಸುಡು ಬಿಸಿಲ ಬೇಗೆ ...
ತೆಗೆದುಬಿಡು ಒಮ್ಮೆ 
ಹುಡುಗರ ಕಣ್ಣು ಸ್ವಲ್ಪ ತಂಪಾಗಲಿ ಹಾಗೆ ...!!!

            ವಾರು
ಹೆಂಡತಿ ಮನೆಯಲ್ಲಿದ್ದರೆ ವಾರು ...
ಹೆಂಡತಿ ತವರಿಗೆ ಹೋದರೆ ಮನೆಯೇ ಬಾರು ...!!!

            ಸ್ವಾತಂತ್ರ 
ಭಾರತಕ್ಕೆ ಸಿಕ್ಕರೂ ಸ್ವಾತಂತ್ರ...
ಎಷ್ಟೋ ಗಂಡಸರಿಗೆ ಸಿಕ್ಕಿಲ್ಲ ಹೆಂಡತಿಯಿಂದ ಸ್ವಾತಂತ್ರ ...!!!

             ವರ್ಣನೆ 
ಅವಳು ನೋಡುವುದಕ್ಕೆ ತುಂಬಾ Cute-u ...
ಅವಳ ವಾಯ್ಸ್ ತುಂಬಾ ಸ್ವೀಟು ...
ಅವಳ ಮುಂದೆ ನನ್ನ ಬಾಯಿ Mute-u ...!!!

             ಮೊಬೈಲು
Earphone ನಲ್ಲಿ ನೀ ಮಗ್ನಳಾಗಿರಲು ...
ನಿನ್ನ ನೋಟಕ್ಕೆ ನನ್ನ ಕಣ್ಣುಗಳು ಕಾದಿರಲು ...
ಸಾಕು ಬಿಡು ಎಷ್ಟು ನೋಡುತಿಯ ಮೊಬೈಲು ...
ಇತ್ತ ಕಡೆ ತಿರುಗಿ ಕೊಡಬಾರದೇ ಒಂದು ಸ್ಮೈಲು ...!!!

              ಅಂಬೆಗಾಲು
ಕನ್ನಡ ಸಾಹಿತ್ಯ ಲೋಕಕ್ಕೆ ಇಡುತ್ತಿರುವೆ ಅಂಬೆಗಾಲು ...
ನಿಮ್ಮ ಚಪ್ಪಾಳೆ ಪ್ರೋತ್ಸಹದಿಂದ ಇಡಬೇಕು ದಾಪುಗಾಲು ...
ಕೇಳಿರಿ ಎಲ್ಲ ನಾ ಬರೆದ ಕವಿತೆಗಳ ಸಾಲು ...
ದಯವಿಟ್ಟು ಪಕ್ಕಕ್ಕಿಟ್ಟು ನಿಮ್ಮ ಮೊಬೈಲು ...!!!

              ಹೃದಯ 
ಪ್ರೀತಿಗಾಗಿ ಮಿಡಿದ ಹೃದಯ ...
ಪ್ರೀತಿ ಇಲ್ಲದ ಮೇಲೆ ಚೂರಾಯಿತು ಹೃದಯ ...
ಮದುವೆ ಎಂದೊಡನೆ ಹೇಳಿದಳು ವಿದಾಯ ...
ಕಾರಣ ಐದಂಕಿ ಇಲ್ಲದ ನನ್ನ ತಿಂಗಳ ಆದಾಯ ...!!!

            ಮೊಬೈಲು 
ದುಃಖ, ಬೇಜಾರು, ಒಂಟಿತನ 
ಎಂದೂ ನನಗೆ ಯಾವತ್ತೂ ಅನ್ನಿಸಿಯೇ ಇಲ್ಲ ...
ಏಕೆಂದರೆ 
ಮೊಬೈಲ್ ಇದೆಯಲ್ಲ ...!!!

              ಕಾರಣ
ಅಪಘಾತಕ್ಕೆ ಅವಸರವೇ ಕಾರಣ ...
ತಿಳಿದು ಪ್ರೀತಿಸಿದೆ ನಿನ್ನ ವಿನಾಕಾರಣ ...
ಏಕಾಂತ ಮೌನದಲಿ ಕಾಲುದಾರಿಯ ಪಯಣ …
ಖಾಲಿ ಹಾಳೆ ಮೇಲೆ ಗೀಚಲು ನೆನಪುಗಳೆ ಕಾರಣ …!!!


              ಸೊಗಸು
ನಿನ್ನ ಜೊತೆ ಹೆಜ್ಜೆ ಇಡುತ ನಡೆದರೆ ಅದೇನೊ ಸೊಗಸು ...
ನನ್ನ ಪ್ರೀತಿಯ ಒಲೆಯ ಸ್ವೀಕರಿಸು …
ಇದು ನನ್ನ ಬಹುದಿನದ ಕನಸು …
ನೀ ಮಾಡಬೇಕಷ್ಟೆ ಮನಸು …!!!


                ದಾರಿ
ಕಂಬನಿಯು ಬೀಳುತಿದೆ ಕೆನ್ನೆ ಮೇಲೆ ಜಾರಿ …
ಕಾಣದಾಗಿದೆ ಒಂಟಿತನದ ದಾರಿ …
ಪ್ರಯೋಜನವೇನು ನಿನ್ನ ದೂರಿ …
ಒರೆಸಿಬಿಡು ಕಣ್ಣೀರನು ನೆನಪುಗಳ ಜೊತೆ ಸೇರಿ …!!!


                ಮುನಿಸು
ಎಷ್ಟೇ ಕೆಲಸದ ಒತ್ತಡವಿದ್ದರೂ ಹೆಂಡತಿಯನ್ನು ಗಮನಿಸು …
ಇಲ್ಲದಿದ್ದರೆ ಸಂಸಾರದಲ್ಲಿ ತಪ್ಪಿದ್ದಲ್ಲ ಇರಸುಮುರಸು …
ಹೆಂಡತಿ ಮಾಡಿಕೊಂಡರೆ ಮುನಿಸು …
ಕಷ್ಟವಾಗುವುದು ಗಂಡನಿಗೆ ತಿಂಡಿ ತಿನಿಸು …!!!


               ಹಲವು 
ಬರೆದಿರುವೆ ಹನಿಗವನಗಳು ಹಲವು ...
ಆಯ್ದುಕೊಂಡು ಬಂದಿರುವೆ ಕೆಲವು ...
ಇದುವರೆಗೂ ಸಿಕ್ಕಿರಲಿಲ್ಲ ಅವಕಾಶ ಒಂದು ಸಲವೂ ...
ನಿಮ್ಮ ಚಪ್ಪಾಳೆಯೇ ನನ್ನ ಬರವಣಿಗೆಗೆ ಸಿಗುವ ಒಲವು ...!!!

               ಕೊನೆಗೂ
ವ್ಯತ್ಯಾಸವಿರದ ಹಾಲಿನ ಕೆನೆಗೂ …
ಆಕೆಯ ಗುಳಿ ಕೆನ್ನೆಗೂ …
ಕರೆಯಲಿಲ್ಲ ಆಕೆ ತನ್ನ ಮನೆಗೂ …

ಅಕ್ಕಿಸೇರು ಒದ್ದು ವಸಲು ದಾಟಿ ಬರಲಿಲ್ಲ ಕೊನೆಗೂ …!!!

               ಕ್ಷಣ
ನೀ ಆದು ಹೋಗುವ ಕ್ಷಣ …
ಕಣ್ಣುಗಳು ನಿನ್ನೆ ನೋಡುವುದು ತಕ್ಷಣ …
ಹೃದಯಕೆ ಬೇಕಾಗಿದೆ ಪ್ರೀತಿ ಪಾಠದ ಶಿಕ್ಷಣ …
ಕಣ್ಗಾವಲಾಗಿರುವೆ ನಿನ್ನ ಪ್ರತಿಕ್ಷಣ …!!!


              ಮುನಿ
ನನ್ನವಳು ಮುಟ್ಟಿದರೆ ಮುನಿ …
ಕೇಳಿದಾಗಲೆಲ್ಲ ಕೊಡಬೇಕು ಮನಿ …
ಏರಿದರೆ ಸ್ವಲ್ಪ ನನ್ನ ದನಿ …
ಥಟ್ಟನೆ ಜಿನುಗುತ್ತದೆ ಅವಳ ಕಣ್ಣೀರ ಹನಿ …!!!


              ಸನ್ಮಾನ
ಈ ಒಣ ಹವೆಯ ಹವಾಮಾನ …
ನಿನ್ನ ಪ್ರೀತಿ ಸಿಕ್ಕಿರುವುದೇ ನನಗೆ ಬಹುಮಾನ …
ತುಟಿ ಬಯಸುತಿದೆ ಮುತ್ತುಗಳ ಸನ್ಮಾನ …
ನೀ  ಕೊಡಬೇಕಷ್ಟೆ ಆಹ್ವಾನ …!!!


             ಒರಗು
ಸುತ್ತಬೇಕು ನಿನ್ನ ಹಿಂದೆ ಇನ್ನು ಎಲ್ಲಿಯವೆಗೂ …
ಉತ್ತರವಿಲ್ಲ ಒಂದಕ್ಕೂ ನಾ ಮಾಡಿದ ಕರೆಗೂ …
ನನ್ನೆದೆಗೆ ತಲೆಕೊಟ್ಟು ಒಮ್ಮೆ ಒರಗು …
ಜೀವನದಲ್ಲಿ ನೋಡಿಕೊಳ್ಳುತ್ತೇನೆ ಬರದಂತೆ ನಿನಗೆ ಕೊರಗು …!!!


            ಕಂಪನಿ
ಅವಳ ಜೊತೆ ಸುತ್ತಾಡುವುದೆಂದರೆ  
ಒಳ್ಳೆ ಕಂಪನಿ …
ಮದುವೆ  ಎಂದೊಡನೆ
ಸುರಿಸಿದಳು ಕಂಬನಿ …!!!


            ತಾಣ
KFC, Mc Donalds, Dominos
ನನ್ನವಳಿಗೆ ತಿನ್ನೋದಕ್ಕೆ ಇವುಗಳು
 ಮೆಚ್ಚಿನ ತಾಣ …
ಬಿಲ್ ಕೊಟ್ಟು ಕೊಟ್ಟು
 ನಾ ಹೈರಾಣ …!!!


             ಕಂಡೀಶನ್
ಮದುವೆಯಾಗೊ ಹುಡುಗಿಯರದ್ದು
ಬಾರಿ ಕಂಡೀಶನ್
ಸ್ಮೋಕಿಂಗ್, ಡ್ರಿಂಕಿಂಗ್ ಇರಲೇಬಾರದು
ಇವುಗಳ ಅಭ್ಯಾಸ ಹುಡುಗನಿಗೆ …
ಹೆಚ್ಚಿನ
ಹುಡುಗಿಯರು ತಗಲಾಕ್ಕೊಳೋದು
ಕುಡುಕನಿಗೆ …!!!


            ಅರ್ಧಾಂಗಿ
ಸಾಕು ಮಾಡು ನಿನ್ನ ಕೋಪದ ಭಂಗಿ …
ಸಾಕಾಗಿದೆ ಕಣೆ ಏಕಾಂಗಿ …

ಕೊಳೆಯಾಗಿದೆ ನನ್ನ ಅಂಗಿ …
ತವರು ಬಿಟ್ಟು ಬಾರೆ ನನ್ನ ಅರ್ಧಾಂಗಿ …!!!


            ಕರುಣಿಸು 
ನನ್ನತ್ತ ಸ್ವಲ್ಪ ಗಮನಿಸು ...
ತುಸು ಕೋಪವ ಬಿಟ್ಟು ಕರುಣಿಸು ...
ನಿಮ್ಮ ಅಪ್ಪ ಅಮ್ಮ ನೋಡಿದ ಹುಡುಗನನ್ನು ಕಡೆಗಣಿಸು ...
ನನ್ನನ್ನೇ ಪರಿಗಣಿಸು ...!!!

            ತಿರಸ್ಕಾರ 
ಕವಿ ಎಂದೊಡನೆ ಮದುವೆಯಾಗಲು 
ಮಾಡಿದಳು ತಿರಸ್ಕಾರ ...
ಇಂದು ಓಡೋಡಿ ಬಂದಳು 
ವೇದಿಕೆ ಮೇಲೆ ಸಿಕ್ಕಿದ್ದಕ್ಕೆ 
ಗೌರವ ಪುರಸ್ಕಾರ ...!!!

            ಚಿತ್ರಣ 
ನನ್ನ ಮುಂದಿದೆ ನಿನ್ನ 
ಚಿತ್ರಣ ...
ಆಗಬೇಕಿದೆ ನಮ್ಮಿಬ್ಬರ 
ಮನಸುಗಳ 
ಮಿಶ್ರಣ ...!!!

           Chemistry
ಮದುವೆಯ ಹೊಸತರಲ್ಲಿ 
ಚೆನ್ನಾಗಿಯೇ ಇತ್ತು ನಮ್ಮ 
Chemistry ...
ಆಗೇ ಹೋಯಿತು ಇಂದು 
ಊಹಿಸಲಾಗದ Mystry ...!!!

           ಸಮಾಚಾರ 
ಸದ್ದಿಲ್ಲದೆ ಶುರುವಾಗಿದೆ ಸಮಾಚಾರ ...
ಉಪವಾಸವಿರದೆ ಆಗಿದೆ ಉಪಚಾರ ... 
ಅಳವಡಿಸಿಕೊಂಡಿಲ್ಲ ಆಚಾರ ವಿಚಾರ ...
ಗೆಲುವಿನ ಹಾದಿಯಲ್ಲಿ ಶುರುವಾಗಿದೆ ಗ್ರಹಚಾರ ...!!!

            ಸ್ಫೂರ್ತಿ 
ಬರವಣಿಗೆಗೆ ನೀನೇ ಸ್ಫೂರ್ತಿ ...
ಜೀವನ ಹಾಳಯಿತು ಪೂರ್ತಿ ...!!! 

           ನಗೆಪಾಟಲು  
ವೀಕೆಂಡ್ನಲ್ಲಿ ಹುಡುಗರು ಸೇರಿದರೆ ನಗೆಪಾಟಲು ...
ಖಾಲಿಯಾಗುವುದು ಬಾಟಲು ...!!!

             ವಿಫಲ 
ಅಂಕ ಪರೀಕ್ಷೆಯಲ್ಲಿ ನಾನು ವಿಫಲ ...
ಪ್ರೀತಿ ಪರೀಕ್ಷೆಯಲ್ಲಿ ನಾನು ಸಫಲ ...!!! 

             ಗಾಳ 
ಹುಡುಗನ ಕಡೆಯವರು ಗಾಳ 
ಹಾಕುವರು ಹುಡುಗಿಯ ಅಪ್ಪ 
ಶ್ರೀಮಂತನಿಗೆ ...
ಹುಡುಗಿ ತಗಲಾಕ್ಕೊಳೋದು 
ಕುಡುಕನಿಗೆ ...!!!

              ಹಾರ 
ಮದುವೆಯಲ್ಲಿ ಬದಲಾಯಿತು ಹಾರ ... 
ಹೊಸತರಲ್ಲಿ ರುಚಿ ರುಚಿಯಾದ ಆಹಾರ ... 
ವರುಷ ಕಳೆದಮೇಲೆ ಕೊಡಿಸೆಂದಳು ಮುತ್ತಿನಹಾರ ... 
ದುಡ್ಡು ಜೋಡಿಸುವುದರಲ್ಲಿ ಗಂಡ ಹರೋಹರ ...!!! 

            ಹುಡುಗಿ ನೋಡಲು ಹೋದಾಗ 
ಹುಡುಗಿ ನೋಡಲು ಹೋದಾಗ ಸೋಫಾದಲ್ಲಿ ಕುಳಿತುಬಿಟ್ಟೆ ...
ಸೀರೆ ಹುಟ್ಕೊಂಡು ಬರೋ ಹುಡುಗಿಯ ಮೇಲೆ ನಿಗಾಇಟ್ಟೆ ...
ಎದುರಿಗೆ ಬಂದು ನಿಂತಳು ಕೈಯಲ್ಲಿ ಹಿಡಿದು ಕಾಫಿ ಲೋಟಗಳ ತಟ್ಟೆ ...
ನೋಡ ನೋಡುತ ಒಳಗೆ ಎಳೆದುಕೊಂಡೆ ಸ್ವಲ್ಪ ನನ್ನ ಹೊಟ್ಟೆ ...!!!

         ಫೋಟೋ 
ಫೋಟೋ ಕ್ಲಿಕ್ಕಿಸುವಾಗ 
ಒಂದು ಸ್ಮೈಲ್ ಕೊಟ್ಟೆ ...
ಒಳಗೆ ಎಳೆದುಕೊಂಡು 
ನನ್ನ ಹೊಟ್ಟೆ ...!!!

            ಕಳೆ 
ಹೊಳೆಯುತಿದೆ ಅವಳ ತ್ವಚೆ ಮೈಕಾಂತಿಯ ಕಳೆ ...
ಸದ್ದು ಮಾಡುತಿದೆ ಕೈ ಬಳೆ ...
ಮುಗಿಯದ ಮನದೀ ರಗಳೆ …
ಹೃದಯ ಹಾಳಾಯಿತು ಹಾಡುಹಗಲೆ ...!!!

            ಏಕಾಂತ
ಮನೆಯಲ್ಲಿ ಮಾಡಿ ರಾದ್ದಾಂತ …
ಬಿಟ್ಟು ಹೋದಳು ನನ್ನ ಸಹವಾಸ ಸಾಕಂತ …
ಸುಡುತಿದೆ ಏಕಾಂತ …
ಹೇಗಿರಲಿ ನಾ ಜೀವಂತ …!!!


             ಜೀವನ
ಅಂದುಕೊಳ್ಳುವುದಲ್ಲ ಜೀವನ …
ಹೊಂದಿಕೊಳ್ಳುವುದು ಜೀವನ …
ದುಡಿಯುವ ಹೆಣ್ಣಿಗೆ ಇರಬೇಕು ಸಮಾಧಾನ …
ಇಲ್ಲದಿದ್ದರೆ ಸಾಗುವ ದಾರಿಯೇ ವಿಚ್ಚೇದನ …!!!


            ಮೋಹ
ಇದು ಉಪ್ಪು ಉಳಿ ತಿಂದಿರೋ ದೇಹ ...
ತಪ್ಪೇನೆ ನಿನ್ನ ಮೇಲೆ ಆದದ್ದು ಮೋಹ ...
ನೀಗಿಸು ಬಾ ನನ್ನ ಪ್ರೀತಿಯ ದಾಹ ...
ಸವಿದರೆ ಸಾಕು ನನ್ನ ಜೊತೆ ಒಂದು ಕಪ್ ಚಹಾ ...!!!

           ಅಚ್ಚೇದಿನ 
ಮೋದಿ ಸರಕಾರದಿಂದ 
ಭಾರತಕ್ಕೆ ಅಚ್ಚೆದಿನ ...
ನನ್ನ ಹೆಂಡತಿಯಿಂದ ನನಗೆ 
ಸಿಕ್ಕಿದ್ದು ವಿಚ್ಚೇದನ ...!!!

          Cadburry 
ಫೋನ್ ಮಾಡಿ ಹೇಳುವಳು ಮಗಳು 
ಬೇಕಂತ Cadburry ...
ಹೆಂಡತಿ ಹೇಳುವಳು  
ಮನೆಗ್ ಬೇಗ್ ಬರ್ರಿ ...!!!

          ತಾಪತ್ರೆ
ಸಂಸಾರದಲ್ಲಿ ಯಾವಾಗಲು
ಇದ್ದಿದ್ದೇ ತಾಪತ್ರೆ …
ಅದಕೆ ಹೆಂಡತಿ ಹೇಳಿದೊಡನೆ
ಗಂಡ ತೊಳೆಯುವನು ಪಾತ್ರೆ …!!!


          ಕನವರಿಕೆ
ಮನದಲ್ಲಿ ನಿನದೆ ಮನವರಿಕೆ …
ಸಮೀಪದಲ್ಲೆಲ್ಲೋ ನಿನ್ನ ಇರುವಿಕೆ …
ಹೃದಯಕ್ಕೆ ಆಗಬೇಕಿದೆ ಸ್ವಲ್ಪ ಚೇತರಿಕೆ …
ಕಾರಣ ನೀ ಒಂದು ಮರೀಚಿಕೆ …!!!


              ಖಾತರಿ
ಅವಳು ಜೊತೆಯಲ್ಲಿದ್ದಾಗ ಜೇಬಿಗೆ ಬೀಳುತ್ತಿತ್ತು ಕತ್ರಿ …
ಬೇರೊಬ್ಬನ ಜೊತೆ ಮಾಡಿಕೊಂಡಿದ್ದಳು ಮೈತ್ರಿ …
ಅವಳು ಸಿಗೋದಿಲ್ಲವೆಂದು ಆಗೇ ಹೋಯಿತು ಖಾತ್ರಿ …
ಕಣ್ಣಿಗೆ ನಿದ್ರೆ ಇಲ್ಲ ದಿನ ರಾತ್ರಿ …!!!


           ಕನವರಿಕೆ 
ಹಗಲಿರುಳು ನಿನದೆ ಕನವರಿಕೆ ...
ಮನದ ತುಂಬಾ ಮಧುರ ನೆನಪುಗಳ ಸೋರಿಕೆ ...
ಹೃದಯ ಬಯಸಿದೆ ಪ್ರೀತಿಯ ಕೈಗಾರಿಕೆ ...
ನಿನ್ನ ಮುಂದೆ ಮುಂದೆ ನಿಂತು ಹೇಳಲಾಗದ ಎದೆಗಾರಿಕೆ ...!!!

            ಗುಣ
ಮುದುವೆ ಸಮಯದಲ್ಲಿ ಕೂಡಿದರೆ ಸಾಕಂತೆ ಹುಡುಗ ಹುಡುಗಿಯ ಗಣ ...
ಕೇಳುವರಾರು ಅವನ ಗುಣ ...
ಸರಿಯಾಗಿ ವಿಚಾರಿಸಿ ಹುಡುಗಿ ಕೊಡುವ ಮುನ್ನ ...
ಇಲ್ಲವಾದರೆ ಜೀವನ ಪೂರ್ತಿ ಕೊರಗಬೇಕಾದೀತು ಪ್ರತೀಕ್ಷಣ ...!!!

         ಸ್ವೇಟರ್ರು 
ಚಳಿ ಎಂದೊಡನೆ ಹುಡುಗರು 
ಹಾಕಿಕೊಳ್ಳುವರು ಸ್ವೇಟರ್ರು ...
ಹುಡುಗಿಯರು ತೆಳುವಾದ 
ಚುಡಿದಾರದಲ್ಲಿಯೇ ಇರುತ್ತಾರೆ 
ಅದೇನಪ್ಪ ಅವರ ಖದರ್ರು ...!!!

            ಒಂಟಿ 
ನೋವುಗಳ ಕೊಡವಿದರು ಕುಳಿತಿಹುವುದು ಮೈಗಂಟಿ ...
ಸುತ್ತಮುತ್ತಲು ಓಡಾಡುತಿಹರು ಜಂಟಿ ...
ಕಾದು ಕುಳಿತಿರುವೆ ನಿನಗಾಗಿ ಕಾಯುತ ನಾ ಒಂಟಿ ...
ತೆಗೆದುಕೊಳ್ಳುತ್ತಾ ಒಂದು 90 ...!!!

         ಕಳೆ 
ಕೈಗಳಿಲ್ಲದ ಬಳೆ ...
ಮುಖದಲ್ಲಿ ಕಳೆದುಹೋಗಿದೆ  ಕಳೆ ...
ಎದೆಯಲ್ಲಿ ಬತ್ತಿದೆ ನೋವಿನಿಂದ ಬೆಳೆ ...
ಸಿಂಪಡಿಸಬೇಕಾಗಿದೆ ಪ್ರೀತಿಯ ಮಳೆ ...!!!

                ಸ್ಥಾನ 
ದೌಡಾಹಿಸುತ್ತಿದ್ದರೆ ನಾಡಿನ ಸಾಹೇಬರು 
ಆಗಾಗ ದೇವಸ್ಥಾನಕ್ಕೆ ...
ಧಕ್ಕೆ ಬಾರದಿರಲೆಂದು 
ಅವರ ಸ್ಥಾನಕ್ಕೆ ...!!!

                 ಒಂಟಿ
ಹಾತೊರೆಯುತಿದೆ ಮನ ನಿನ್ನ ನಂಟಿಗಾಗಿ ...
ಸುತ್ತ ಮುತ್ತಲು ಓಡಾಡುತಿಹರು ಕೈ ಕೈ ಹಿಡಿದು ಜಂಟಿಯಾಗಿ ...
ನಿನ್ನ ಹಾದಿಯ ನೋಡುತ ನಿಂತಿರುವೆ ನಾ ಒಂಟಿಯಾಗಿ ...
ಕಾಯುತಿರುವೆ ನೀ ಹಾಕೋ ಮೂರು ಗಂಟಿಗಾಗಿ ...!!!

                ಇಷ್ಟಪಟ್ಟು
ನಿನ್ನನ್ನೇ ಮದುವೆಯಾಗಲು ಬಂದಿರುವೆ ಇಷ್ಟಪಟ್ಟು ...
ಹಿಂದೆ ಸರಿಯಬೇಡ ದಯವಿಟ್ಟು ...
ಹುಸಿ ಕೋಪವ ಬದಿಗಿಟ್ಟು ...
ಹೂಗುಚ್ಛವನ್ನು ಸ್ವೀಕರಿಸು ಒಂದು ಹೆಜ್ಜೆ ಮುಂದಿಟ್ಟು ...!!!

               ಮುಂಗುರುಳು 
ಬಿಡದೆ ಕೆನ್ನೆಗೆ ಮುತ್ತಿಕ್ಕುವ ಮುಂಗುರುಳು ...
ಆಗಾಗ ಆಕ್ರಮಿಸೋ ನಿನ್ನ ಕೈ ಬೆರಳು ...
ಬಂಧಿಸಬೇಕಾಗಿದೆ ಮುಗುರುಳಿಗೆ ಹಾಕಿ ಸರಳು ...
ಸದ್ದಿಲ್ಲದೇ ಕದಿಯಬೇಕೆನಿಸಿದೆ ಹಾಲ್ಗೆನ್ನೆಯ ತಿರುಳು ...!!!

                ಚಿನ್ನ 
ಕರೆದರೆ ಹೆಂಡತಿಯನ್ನ ಚಿನ್ನ ...
ಕೇಳುವಳು ಕೊಡಿಸೆಂದು ಚಿನ್ನ ...
ಮುತ್ತಿಡಲು ಹೋದರೆ ಗಲ್ಲಕೆ ...
ಹಿಂದಕೆ ಸರಿವಳು ಮೆಲ್ಲಕೆ ...!!!

              ದುಃಖ
ಸಂಸಾರದ ಜಂಜಾಟದಲ್ಲಿ ಬರಿ ದುಃಖ ...
ಇರಲಿಲ್ಲ ಒಂದು ದಿನಾನೂ ಸಖಿ ಸುಖ ...
ಗಂಡ ಅವರ ಅಪ್ಪ ಅಮ್ಮನ ಮಾತು ಕೇಳೋ ಮೂಕ ...
ಕಣ್ಣೆರಲ್ಲೇ ಮುಳುಗಿ ಹೋಗಿಹುದು ಅವಳ ಮುಖ ...!!!

            ಆಶ್ರಮ
ಹಿರಿಯರನ್ನು ನೂಕುತ್ತಿದ್ದೇವೆ 
ವೃದ್ಧಾಶ್ರಮಕ್ಕೆ ...
ಮಕ್ಕಳನ್ನು ನೂಕುತ್ತಿದ್ದೇವೆ 
'ಡೇ ಕೇರ್ ' ಆಶ್ರಮಕ್ಕೆ ...!!!

         ಕನಿಕರ
ಹುಡುಗಿ ಅತ್ತಹೊಡನೆ 
ಹುಡುಗ ತಕ್ಷಣ ತೋರಿಸುವನು 
ಕನಿಕರ ...
ಹುಡುಗಿ ನಕ್ಕೊಡನೆ 
ಹುಡುಗನ ಹೃದಯ 
ಹಾನಿಕರ ...!!!

          ಗುಂಡಿ
ಸಾಯೋದ್ರೊಳಗೆ ಒಮ್ಮೆ ನೋಡು
ಜೋಗದ ಗುಂಡಿ ...
ಇರೋದ್ರೊಳಗೆ ಒಮ್ಮೆನೋಡು
ಬೆಂಗಳೂರು ರಸ್ತೆ ಗುಂಡಿ …!!!


         ವಿಸ್ತರಣೆ
ಆಶ್ವಾಸನೆಗಳ ಮಹಾಪೂರ
ಹರಿಸುವವರೆಂದರೆ ಅದಕ್ಕೆ ನಮ್ಮ
ರಾಜಕಾರಣಿಗಳೇ ಉದಾಹರಣೆ …
ಇನ್ನು ಬಗೆಹರಿಯದ
ಮೈತ್ರಿ ಸರ್ಕಾರದ

ಸಂಪುಟ ವಿಸ್ತರಣೆ …!!!

        ಬೆನ್ನೆಲುಬು
ರೈತ ಈ ದೇಶದ ಬೆನ್ನೆಲುಬು …
ಕುಡುಕ ಈ ಸರ್ಕಾರದ ಬೆನ್ನೆಲುಬು …!!!

            ಮೊದಲ ಮುತ್ತು
ಮೊದಲ ಮುತ್ತು ಶಾಶ್ವತವಾಗಿ ನೆನಪಿಸುವ ಮುತ್ತು …
ಮುತ್ತಿಗಿಲ್ಲ ಹೊತ್ತುಗೊತ್ತು …
ಮುತ್ತು, ಅದೇನು ನಿನ್ನ ತಾಕತ್ತು  …
ತುಟಿಗಳ ನಡುವೆ ಇಟ್ಟೆಯಲ್ಲ ಮತ್ತೇರಿಸುವ ಗಮ್ಮತ್ತು …!!!

                 ಅಭಿಮಾನಿ
ಇರಬಹುದು ಕಣೆ ನೀನು ತುಂಬಾ ಸ್ವಾಭಿಮಾನಿ …
ಆದರೆ ನಿನ್ನ ಎಲ್ಲಾ ಬರಹಗಳಿಗೆ ನಾನೇ ನಿನ್ನ ಅಭಿಮಾನಿ …!!!

                  ಮುದ್ದು ಕಂದಮ್ಮ 
ಇರಬಹುದು ನಿನ್ನ ಅಮ್ಮ ತುಂಬಾ ಸ್ಟ್ರಿಕ್ಟು …
ಬಿಡದಿರು ನಿನ್ನ ತುಂಟಾಟವ ಅವಳು ಎಷ್ಟೇ ಮಾಡಿದರು ಕಟ್ಟುನಿಟ್ಟು …
ಅಜ್ಜಿ ಮಾಡಿ ಕೊಡುವಳು ನಿನಗೆ ಒಬ್ಬಟ್ಟು
ನಿನ್ನ ಮುದ್ದು ಕೆನ್ನೆಯ ಮೇಲೊಂದು ಸಿಹಿಯ ಮುತ್ತನಿಟ್ಟು …!!!
 
                         ನೆನಪು
ಬರಿದಾದ ಬಾಳಲ್ಲಿ ನೆನಪುಗಳು ಮನೆ ಮಾಡಿವೆ …
ನೆನಪುಗಳೊಂದಿಗೆ ದಿನಗಳು ಸಾಗಿವೆ …
ಬೆಂಬಿಡದೆ ಕನಸುಗಳು ಬಂದು ಕಾಡುತ್ತಿವೆ …
ನೆನಪುಗಳು ನೆನಪುಗಳಾಗೆ ಉಳಿದಿವೆ …!!!

                        ಹುಡುಕು
ಹುಡುಕುತಿತುವೆ ನಿನ್ನ ನಾ ಬರೆದ ಕವನಗಳಲ್ಲಿ …
ದಿನಗಳು ಉರುಳಿತಿವೆ ನಿನ್ನ ನೆನಪುಗಳಲ್ಲಿ …
ನನ್ನ ಬಿಂಬ ನೋಡಬೇಕೆಂದುಕೊಂಡಿರುವೆ ನಿನ್ನ ಕಣ್ಣುಗಳಲ್ಲಿ …
ನೀ ಇಲ್ಲದ ಮೇಲೆ ಸಾಯಬೇಂದುಕೊಂಡಿರುವೆ ನಿನ್ನ ನೆರಳಿನಲ್ಲಿ …!!!

         ಎರಡು
ಎರಡು ಜಡೆ ಸೇರಿದರೆ
ಮನೆನೇ ಹಾಳು …
ಎರಡು ತಲೆ ಸೇರಿದರೆ
ರಾಜ್ಯನೆ ಹಾಳು …!!!

                    ಪ್ರೀತಿಮಾತು
ಸಹಿ ಹಾಕಿದ ಮನಸಿನಲಿ ನಿನದೆ ಸಿಹಿಮಾತು …
ಕಿವಿಗಳಲ್ಲಿ ಪೋಲಿ ತುಂಟಾಟದ ಪಿಸುಮಾತು …
ಬಿಗಿದಪ್ಪುಗಯಲಿ ಬಿಸಿ ಉಸಿರಿನ ಮಾತು …
ಮುತ್ತಿಕ್ಕಲು ಇನ್ನೇತಕೆ ನಿನ್ನ ರುಜುವಾತು …!!!


                 ಸುಕ್ಕು
ಎಷ್ಟೇ ಸರಿಮಾಡಿದರು ಸೀರೆಯ ನೆರಿಗೆ 
ಬಿಡೋದಿಲ್ಲ ಅದರ ಸುಕ್ಕು  ...
ಎಷ್ಟೇ ಹಠಮಾಡಿದರು ನನ್ನವಳು 
ಬಿಡಲೊಲ್ಲೂ ಅವಳ ಸೊಕ್ಕು ...!!!

               ಜುಮ್ಕಿ 
ಆಗಾಗ ಅವಳ ಕೆನ್ನೆಗೆ ಮುತ್ತಿಕ್ಕುತಿದೆ 
ಹಠ ಬಿಡದ ಜುಮ್ಕಿ ...
ನಾನು ಮುತ್ತಿಟ್ಟಾಗ 
ಹಾಕದಿದ್ದರೆ ಸಾಕು ನನಗೆ ಧಮ್ಕಿ ...!!!

               ಬಿಕ್ಕಳಿಕೆ
ಯಾರೋ ನೆನೆಸಿಕೊಳ್ಳುತಿಹರೇನೋ ಇಂದೇಕೋ ಬರುತಿದೆ ಬಿಕ್ಕಳಿಕೆ ...
ಬಿಕ್ಕಳಿಕೆಗೂ ಏಕೋ ನಿಲ್ಲದ ಹೆಗ್ಗಳಿಕೆ ...
ನನ್ನೆದೆಯಲ್ಲಿ ಪ್ರೀತಿ ತುಂಬಿದ ಬತ್ತಳಿಕೆ ...
ನಾನ್ ಅರಿಯೆ ಅವಳಿಗೇಕೋ ಇನ್ನು ಬರುತ್ತಿಲ್ಲ ತಿಳುವಳಿಕೆ …!!!


                 ದೋಸ್ತಿ
ಒಬ್ಬರಿಗೊಬ್ಬರಿಗೆ ತಿಳಿಯದ ಹಾಗೆ ಮಾಡುತ್ತಿದ್ದಳು ಮೋಜು ಮಸ್ತಿ …
ತಂದಿಟ್ಟಳು ಇಬ್ಬರ ಸ್ನೇಹಿತರ ನಡುವೆ ಕುಸ್ತಿ …
ಪೋಸು ಕೊಡಬೇಡ ಕಣೆ ನೀನು ಜಾಸ್ತಿ …
ಹಾಳಾಯಿತು ನಿನ್ನಿಂದ ನಮ್ಮಿಬ್ಬರ ದೋಸ್ತಿ …!!!


                 ವಾಟ್ಸಪ್ಪು
ತಲ್ಲೀನ ನಾಗಿದ್ದೆ ನೋಡುವುದರಲ್ಲೇ
ವಾಟ್ಸಪ್ಪು …
ಮರೆತೇಹೋಯಿತು ತರುವುದು
ಕೊತ್ತಂಬರಿ ಸಪ್ಪು …

ಸಿಟ್ಟಿನಿಂದ ಹಾಕಿದಳು
ಒಗ್ಗರಣೆಗೆ ಒಂದು ಹಿಡಿ ಉಪ್ಪು ...!!!


       ಪ್ರಪಂಚ
ಪ್ರಿಯೆ ನೀನೆ ಕಣೆ
ನನ್ನ ಪ್ರಪಂಚ ...
ಸ್ವಲ್ಪ ಅಡ್ಜಸ್ಟ್ ಮಾಡ್ಕೋ
ನಮ್ಮ ಮನೆಯಲ್ಲಿ ಇರುವುದು
ಒಂದೇ ಮಂಚ …!!!


             ಮುಂಗುರುಳು
ಗುಂಗುರು ಕೂದಲ ಮುಂಗುರುಳು …
ಮಾಡಿಬಿಟ್ಟಿದೆ ನನ್ನ ಮರುಳು …
ಸ್ಪರ್ಶಿಸಲು ಹೋದಾಗ ಅವಳ ಕೈ ಬೆರಳು …
ನೂಕುಬಿಟ್ಟಿತು ಅವಳ ನೆರಳು …!!!


        ಅಳು
ಎಲ್ಲರ ಮುಂದೆ
ಅಳುವವಳು ಹೆಣ್ಣು …
ಒಬ್ಬನೇ ಇದ್ದಾಗ
ಆಳುವವನು ಗಂಡು …!!!


               #METOO
ಅವಳು ನೋಡುವುದಕ್ಕೆ ತುಂಬಾ ಕ್ಯೂಟು …
ಆಗಾಗ ನಡೆಯುತ್ತಿತ್ತು ನಮ್ಮ ನಡುವೆ ಟ್ವೀಟು …
I Love You ಅಂತ ಹೇಳಿ ಬಾಯಿಗಿಟ್ಟಳು ಸ್ವೀಟು …
ಹೇಳಲು ನನಗೇಕೋ ಭಯ Me Too …!!!


            ತಾಯಿಯ ಮಮತೆ
ತಾಯಿಯೇ ಮೊದಲ ದೇವತೆ …
ಸಂಸಾರದ ಜವಾಬ್ದಾರಿಯನ್ನ ಹೊರುವ ವನಿತೆ …
ಸದಾ ಪ್ರೀತಿ ತುಂಬಿರುವ ಮಮತೆ …
ತನ್ನೊಡಲ ಸುಟ್ಟು ಬೆಳಕನ್ನು ನೀಡುವ ಹಣತೆ …!!!


                ಹೆಚ್ಚು
ಹೆಣ್ಣಿಗೆ ಗಂಡನ ಮನೆಯಲ್ಲಿ
ತೋರಿಸಬಹುದು ಪ್ರೀತಿ ಹೆಚ್ಚು …
ಆದರೆ ತವರು ಮನೆಯಿಂದ ತರೋ
ಬೊಗಸೆ ಮಡ್ಲಕ್ಕಿ ಅದಕ್ಕಿಂತ ಹೆಚ್ಚು …!!!



               ಲಿಂಕು 
ನಮ್ಮಿಬ್ಬರ ಮನಸಿನ ಭಾವೆನೆಗಳು ಆದರೂ ಸಿಂಕು  ...
ಕೂಡಿಬರುತ್ತಿಲ್ಲ ಜಾತಕಗಳ ಲಿಂಕು ...
ಅವಳ ಬಗ್ಗೆ ಮಾಡಿ ಮಾಡಿ ಥಿಂಕು ...
ಮಾನವೇಕೊ ಕವಿದಿದೆ ಮಂಕು ...
ಕುಡಿಯಬೇಕಾಗದೆ ಇಂದು Old Monk ...!!!

          Ladies First 
ಎಲ್ಲರೂ ಹೇಳುವರು ಯಾವಾಗಲು 
Ladies First ...
ನಮ್ಮ ಮನೆಯಲ್ಲಿ 
ಅಭಿಪ್ರಾಯಗಳು ನಿರ್ಧಾರಗಳು 
ಯಾವಾಗಲು 
ಅವಳದ್ದೇ First ...!!!

          Me Too
ದಿನೆ  ದಿನೇ ಏರುತ್ತಿದೆ ಮೀ ಟೂ ಹಗೆತನ …
ನಟಿಯರು ಇಷ್ಟು ವರ್ಷ ಮುಚ್ಚಿಟ್ಟು ಮಾಡಿದರು ದಡ್ಡತನ …
ಕಳಚಿ ಬೀಳುತಿದೆ ಹೆಸರಾಂತ ನಟರ  ಸಣ್ಣತನ …
ಧ್ವನಿ ಎತ್ತಿದರೆ ರಾಧಿಕಾ ಕುಮಾರಸ್ವಾಮಿ, ಸರ್ಕಾರ ಪತನ …!!!


          ಬಾಯ್ಸು
ಕಾಲೇಜು ಅಂದಮೇಲೆ ಇದ್ದಿದ್ದೇ ನಾಯ್ಸು …
ಹುಡುಗಿಯರದು ಕಮ್ಮಿ ಸ್ವಲ್ಪ ವಾಯ್ಸು …
ರೇಗಿಸಲು ಇದ್ದರೇನಂತೆ ನಿನ್ನ ಸುತ್ತ ಬಾಯ್ಸು …
ಧೈರ್ಯಮಾಡಿ ಸ್ವಲ್ಪ ದಾಬಾಯ್ಸು …!!!


         Beautiful
ಅವಳು ನೋಡಲು ತುಂಬಾ
Beautiful …
ಅವಳನ ಹಿಂದೆ ಹುಡುಗರು ಯಾವಾಗಲು
Housefull …!!!


           ನೂರು
ನಿನಗೋಸ್ಕರ ಖರ್ಚು ಮಾಡಿದ ಲೆಕ್ಕಗಳೇ ಇಲ್ಲ ಐನೂರು, ಸಾವಿರ …
ಆದರೂ ಮನದ ಭಾವನೆಗಳು ಹೊರಹಾಕಲು ಏಕೋ ಮುಜುಗರ …
ಕಟ್ಟಬೇಕೆಂದಿರುವೆ ನಿನಗೆ ಗಂಟು ಮೂರು …
ಅದಕ್ಕೂ ಮುನ್ನ ನಿನಗ್ಗಾಗಿ ಅರ್ಪಣೆ ನನ್ನ ಕವನಗಳು ನೂರು …!!!


      ಮುಂಗುರುಳು
ಆಕೆಯ ಕೆನ್ನೆಮೇಲೆ ಆಗಾಗ 
ಸವರುತ್ತಿತ್ತು ಆಕೆಯ 
ಮುಂಗುರುಳು ...
ನಾ ಆಕೆಯ ಕೆನ್ನೆ ಸವರಿದಾಗ 
ಹಿಸುಕಿದಿದ್ದರೆ ಸಾಕು 
ನನ್ನ ಕೊರಳು ...!!!

           ಬಸ್ಕಿ 
ಶಾಲೆಯಲ್ಲಿ ತಪ್ಪು ಮಾಡಿದಾಗ 
ಹೊಡೆಯುತ್ತಿದ್ದೆವು ಬಸ್ಕಿ ...
ಇಂದು ಜೀವನ ತಪ್ಪು ಎನಿಸಿದಾಗ
ಹೊಡೆಯುತ್ತಿದೇವೆ ವಿಸ್ಕಿ ...!!!

         ಕೊಳ್ಳೆ 
ರಾಜಕಾರಿಣಿಗಳು ಹೊಂಚು ಹಾಕುತ್ತಾರೆ 
ಹೊಡೆಯಲು ಕೊಳ್ಳೆ ...
ಜನಸಾಮಾನ್ಯರು ಹೊಂಚು ಹಾಕುತ್ತಾರೆ 
ಹೇಗೆ ಹೊಡೆಯುವುದು ಸೊಳ್ಳೆ ...!!!

      ಕುಲ್ಫಿ
ಅವಳ ಜೊತೆ
ತಿಂದಿದ್ದೆ ತಿಂದಿದ್ದು
ಕುಲ್ಫಿ ...
ಈಗ ಒಬ್ಬನೇ ನಿಂತು
ತೆಗೆದುಕೊಳ್ಳಬೇಕಾಗಿದೆ
ಸೆಲ್ಫಿ …!!!


        ಕವಿ
ಪುಸ್ತಕಗಳನ್ನು ಓದಿ 
ಪುಸ್ತಕವನ್ನು ಬರೆಯುವವರು 
ಶ್ರೇಷ್ಠ ಕವಿ ...
ಮೊಬೈಲ್ ನಲ್ಲೆ ಓದಿ 
ಮೊಬೈಲ್ ನಲ್ಲಿ ಬರೆಯುವವರು 
ಯುವ ಕವಿ ...!!!

        ರಿಂಗು
ಮಾಡುವೆ ಸಮಯದಲ್ಲಿ
ಹುಡುಗನಿಗೆ
ಕೊಳ್ ಚೈನು
ವಾಚು
ರಿಂಗು ...
ಮದುವೆಯಂತರ
ಹುಡುಗನಿಗೆ
ಸಫರಿಂಗು …!!!

        ಮಾತು
ಜೀವನದ ಮೊದಲರ್ಧ
ಹೆತ್ತವರ ಮಾತು ಕೇಳುತ್ತೀವಿ ...
ಉಳಿದರ್ಧ
ಹೆಂಡತಿಯ ಮಾತು ಕೇಳುತ್ತೀವಿ …!!!


                     ನವಿಲುಗರಿ
ಹಣೆಯಿಂದ ಗಲ್ಲದವರೆಗೆ ಇಳಿಜಾರಿನ ಕೆನ್ನೆಗೆ
ನವಿಲುಗರಿಯಿಂದ ಸ್ಪರ್ಶಿಸುವ ಆಸೆ ನನಗೆ …
ಕೆನ್ನೆ ಮೇಲಿನ ಗುಳಿ ನಾಚಿ ಹೊರಬಾರದೆ
ಖುಷಿ ಪಡುತಿಹುದು ನೋಡು ಒಳಗೊಳಗೆ …!!!


             ಖದರ್ರು
ಇಳಿದೇಹೋಯಿತು
ಅವಳ ಮುಂದೆ
ನಿಲ್ಲುವ ಖದರ್ರು ...
ಅವಳು
ಹೇಳಿದಾಗಿನಿಂದ
ನನ್ನ ಬ್ರದರ್ರು …!!!


           ಫೋನು
ಅವಳೊಂದಿಗೆ ಗಂಟೆಗಟ್ಟಲೆ
ಮಾತಡುತ್ತಿದ್ದೆ

ಫೋನ್ ನಲ್ಲಿ …
ಕದ್ದು ಮುಚ್ಚಿ message 
ಮಾಡುತ್ತಿದ್ದೆ ರೂಮ್ ನಲ್ಲಿ
ಈಗ ಮುಳುಗಿರುವೆನು
ಲೋನ್ ನಲ್ಲಿ …!!!

             ಅಪ್ಪುಗೆ
ಅಂದು ಅವಳಿಗೆ ಬಿಗಿದಪ್ಪುಗೆ ...
ಕೇಳದೆಯೇ ಅವಳ ಒಪ್ಪಿಗೆ ...
ಈಗ ಆಗುವುದಿಲ್ಲ ಅಪ್ಪುಗೆ ...
ಅವಳಿರುವಳು ತುಂಬಾ ದಪ್ಪುಗೆ …!!!


              ಸಕ್ಕರೆ

ಚೆಲುವೆ 
ನೀನು ನಕ್ಕರೆ
ಹಾಲು ಸಕ್ಕರೆ ...
ಅದಕ್ಕೆ ಬಂದಿರುವುದು
ನನಗೆ

ಖಾಯಿಲೆ ಸಕ್ಕರೆ …!!!

         Deodrant
ಮದುವೆಯ ಹೊಸತರಲ್ಲಿ
Perfume , Deodorant ...
ಕೆಲ ವರ್ಷಗಳ ನಂತರ
Amrutanjan , Vicks
Permanent ... !!!

Entertainment
ಪ್ರೇಮಿಗಳಿಗೆ
ಪ್ರೀತಿ ದಿವಸಗಳು
ಬಲು Entertainment ...
ಮದುವೆಯಾದಮೇಲೆ
ಮನಸ್ಸಿಗಾದ ಗಾಯಕ್ಕೆ
ಪರದಾಡುತ್ತಾರೆ
ಸಿಗದೇ Ointment …!!!


           ವಾಚನ
ನಿರೂಪಕರು ಹೇಳುತ್ತಿರುತ್ತಾರೆ
ಎಲ್ಲರೂ ಅದ್ಭುತವಾಗಿ
ಮಾಡುತ್ತಾರೆ
ಕವನ ವಾಚನ …
ಪಾಪ ಅವರು
ಆಗಾಗ ನೋಡಿಕೊಳ್ಳುತ್ತಿರುತ್ತಾರೆ
ಕೈ ಲಿರೋ ವಾಚ್ ನ …!!!

          ಸುತ್ತಾಟ
ಅವಳ ಜೊತೆ ಅಂದು
ಸುತ್ತೀದ್ದೇ ಸುತ್ತಿದ್ದು
ಕಾರ್ ನಲ್ಲಿ …
ಇಂದು ಅವಳ ನೆನಪುಗಳೊಂದಿಗೆ
ಕಕ್ಕಿದ್ದೇ ಕಕ್ಕಿದ್ದು
ಬಾರ್ ನಲ್ಲಿ …!!!


         ದುಡ್ಡು
ದುಡ್ಡೇ ದೊಡ್ಡಪ್ಪ
ಅಂದ ನಮಪ್ಪ …!!!
ದುಡಿದು ತೋರಿಸು
ಹೆಣ್ಣು ಕೊಡ್ತೀನಿ
ಅಂದ ನಿಮಪ್ಪ ..!!!


    Instagram
ಸಾಕು ಬಿಡೆ ನಿನ್ನ
ಭಾವಚಿತ್ರಗಳನ್ನು
ಅಪ್ಲೋಡ್ ಮಾಡಿದ್ದು
Instagram ನಲ್ಲಿ ...
ಮೊದಲು ಇಳಿಸಿಕೋ ನಿನ್ನ ತೂಕ
Kilogram ನಲ್ಲಿ …!!!


          ತಂಡಿ
ಮೈಕೊರೆಯುವ ಚಳಿ
ವಾತಾವರಣ ಬಹಳ ತಂಡಿ ...
ಟಿವಿ ಯಲ್ಲಿ ತೋರಿಸುತ್ತಾರೆ ಬಗೆಬಗೆಯ
ಸಿಹಿ ಹಾಗು ಖಾರದ ತಿಂಡಿ
ಆದರೆ ಎಲ್ಲ ಹೆಂಗಸರಿಗೆ
ಇರುವುದು ಒಂದೇ ಚಿಂತೆ

ಬೆಳೆಗ್ಗೆ ಏನ್ ತಿಂಡಿ? …!!!

              ಹಂಬಲ
ಸಿಗದ ಚೆಲುವೆಗೆ ಮನದ ಹಂಬಲ …
ಅವಳ ಮನೆಯಲ್ಲಿ ಸಿಗುತ್ತಿಲ್ಲ ಯಾರದ್ದು ಬೆಂಬಲ …
ನೀನು ನನ್ನ ಜೊತೆ ಓಡಿಬರುತ್ತೀಯ ಎಂದು ನಿನ್ನ ನಂಬಲ …
ಇಲ್ಲ!, ನಿನ್ನ ಸ್ನೇಹಿತೆಯ ತಲೆಗೆ ಪ್ರೀತಿ ತುಂಬಲ …!!!

        ತಣ್ಣೀರು
ಇದ್ದಾಗ ಎರಚುವರು
ತಣ್ಣೀರು ...
ಸತ್ತಾಗ ಹಾಕುವರು
ಕಣ್ಣೀರು …!!!

                 ಮೋಡ
ಸೇರುತಿಹುದು ನೋಡು ಮೋಡ …
ಮಳೆಬರುವ ಹೊತ್ತಾಗಿದೆ ನೋಡ …
ಮುತ್ತಿನ ಮಳೆಯಲಿ ಮುಳುಗೇಳಲು ಆವರಿಯಿದೆ ಕಾರ್ಮೋಡ …
ಮತ್ತಿನ ಮದವೇರಲು ಹಾಕಬೇಕಿದೆ ಗ್ಲಾಸಿಗೆ ಚೂರು ಸೋಡ …!!!


        ನಗುವು
ಗೆದ್ದಂತಿತ್ತು ಜಗವು …
ನೋಡಿದಾಗ ನಿನ್ನ ಮೊಗವು …
ನಿದ್ರೆ ಗೆಡಿಸುತ್ತಿತ್ತು ಆ ನಿನ್ನ ತುಂಟ ನಗುವು …
ಈಗಲೂ ನಿದ್ರೆಗೆಡಿಸುತ್ತಿದೆ ನಮ್ಮ ಮಗುವು …!!!


         TV
ಎಷ್ಟೋ ಜನರಿಗೆ
ಬಲು ದೊಡ್ಡ ಆಸೆ ಒಮ್ಮೆಯಾದರೂ
ಬರಬೇಕೆಂದು TVಯಲ್ಲಿ …
ಗೊತ್ತಿಲ್ಲದೆ ಸೆರೆಯಾಗಿಬಿಡುತ್ತಾರೆ
CCTV ಯಲ್ಲಿ …!!! 


                  ಬಾಳು
ಜೀವನದಲ್ಲಿ ಇರುವುದು ಸಾಮಾನ್ಯ ಏಳು ಬೀಳು …
ಸಂಸಾರದಲ್ಲಿ ಯಾವಾಗಲೂ ಇದ್ದಿದ್ದೇ ಗೋಳು …
ಮೂರು ದಿನದ ಈ ಬಾಳು  …
ಮೂರು ಗಂಟು ಹಾಕಿದ ಮೇಲೆ ತಲೆ ಬೋಳು …!!!


           ಕಂಬನಿ
ಕೆನ್ನೆಮೇಲೆ ಇಳಿಜಾರುತಿದೆ
ಕಂಬನಿ …
ಯಾರು ಇಲ್ಲ ಜೊತೆಗೆ
ಕಂಪನಿ  …!!!


        ಕರು
ದನ ಇದ್ದ ಕಡೆ ಕರು …
ಧನ ಇದ್ದಕಡೆ ಶಾಸಕರು …!!!


       ಬಾಳು
ನೆನ್ನೆ ಇವತ್ತು ನಾಳೆ
ಮೂರು ದಿನದ ಈ ಬಾಳು ...
ಮೂರು ಗಂಟು ಹಾಕಿದ
ಮೇಲೆ ತಲೆ ಬೋಳು …!!!


              ಲೇಸು
ಮಕ್ಕಳು ಕೇಳುತ್ತಾರೆ ತಿನ್ನಲು ಲೇಸು …
ಹೆಂಡತಿ ಕೇಳುತ್ತಾಳೆ ಕೊರಳಿಗೆ ನೆಕ್ ಲೇಸು …
ಗಂಡ ಕ್ಯಾಶ್ ಲೆಸ್ಸು …!!!


             ನಗರಿ
ಬೆಂಗಳೂರಿಗೆ ಏನೆಲ್ಲಾ ಹೆಸರು
ಉದ್ಯಾನ ನಗರಿ
ಸಿಲಿಕನ್ ನಗರಿ 
ಐಟಿ ಬಿಟಿ ನಗರಿ
ಸಿಲಿಕಾನ್ ನಗರಿ
ಗಲ್ಲಿ ಗಲ್ಲಿ ಗಳಲ್ಲಿ
ಕಸದ ರಾಶಿ ನೋಡಿ ಎಲ್ಲ
ಮೂಗು ಮುಚ್ಚಿಕೊಂಡು ಹೋಗರಿ …!!!


               ನಗರಿ
ಬೆಂಗಳೂರಿಗೆ ಏನೆಲ್ಲಾ ಹೆಸರು
ಉದ್ಯಾನ ನಗರಿ
ಸಿಲಿಕನ್ ನಗರಿ 
ಐಟಿ ಬಿಟಿ ನಗರಿ
ಸಿಲಿಕಾನ್ ನಗರಿ
ಗಲ್ಲಿ ಗಲ್ಲಿ ಗಳಲ್ಲಿ
ಬೃಹತ್ ಕಟ್ಟಡಗಳ ದುಸ್ಥಿತಿ ನೋಡಿ
ಎಲ್ಲರೂ ಸ್ವಲ್ಪ ನೋಡಿ ನಗರಿ …!!!


                   ಪದ್ಯ
ಹೆಂಡತಿ ಮಾಡುವಳು ದಿನಕ್ಕೊಂದು ರುಚಿ ರುಚಿ ಖಾದ್ಯ …
ಅವಳನ್ನು ಹೋಗಳಿ ಬರೆದೆ ಒಂದು ಪದ್ಯ …
ಅವಳು ಏನು ಮಾಡಲಿಲ್ಲ ಸದ್ಯ …
ಮನೆಗೆ ಕುಡಿದು ಹೋದಮೇಲೆ ಮದ್ಯ …!!!


                   ಲಕ್ಕು
ನನ್ನ ಅವಳ ಪರಿಚಯಕ್ಕೆ ಸಾಕ್ಷಿ ಫೇಸ್ ಬುಕ್ಕು …
ಸೋತು ಹೋದೆ ಅವಳು ಕೊಟ್ಟಂತಹ ಆ ಒಂದು ಲುಕ್ಕು …
ಅವಳನ್ನು ಮದುಯಾಗಿದ್ದೆ ಶುರುವಾಯಿತು ನನ್ನ ಲಕ್ಕು …
ಈಗ ದಿನಾ ನಾನೇ ಮಾಡಬೇಕಾಗಿದೆ ಕುಕ್ಕು …!!!


               ಪ್ರಸ್ತ
ಮದುವೆ ಮುಂಚೆನೇ
ಮಾಡಿಕ್ಕೊಳ್ಳೋಣವೆಂದೇ ಪ್ರಸ್ತ …
ನನ್ನ ಕೆನ್ನೆ ಮೇಲೆ ಬಿದ್ದಿತು
ಅವಳ ಹಸ್ತ …!!!


                    ಪರ್ಸು
ಅವಳು ಶಾಪಿಂಗ್ ಹೋದಾಗಲೆಲ್ಲ ಬೇಕು ನನ್ನದೇ ಪರ್ಸು …
ನಾ ಮಾರ್ಕೆಟ್ ಗೆ ಹೋಗಿ ತಂದರೆ ಬೀನ್ಸು, ಬರಿ ನರ್ಸು …
ಸಿಟ್ಟಿನಿಂದ ಹೇಳುವಳು ಟೀಪಾಯಿ ಮಂಚ ಸರ್ಸು …

ಎಲ್ಲಕಡೆ ನೆಲ ವರ್ಸು …!!!

           ನಿದಿರೆ
ವರುಶಪೂರ್ತಿ ಸಿಗದವಳ
ಬಗ್ಗೆ ಕೊರಗುತ್ತ
ಬರದು  ನಿದಿರೆ ...
ಅವಳನ್ನು ಮರೆಯಲು
ಏರಿಸಬೇಕಾಗಿದೆ
ಸ್ವಲ್ಪ ಮದಿರೆ …!!!


                 ಲಿಫ್ಟ್
ಪ್ರತೀ ವರ್ಷವೂ ಕೊಡಿಸಬೇಕು ನನ್ನವಳಿಗೆ ತಪ್ಪದೆ ಗಿಫ್ಟ್ …
ಅವಳು ಕೇಳಿದಾಗಲೆಲ್ಲ ಕೊಡುತ್ತಿರಬೇಕು ಲಿಫ್ಟ್ …
ಮಾರಬೇಕಾಯಿತು ನನ್ನ ಕಾರು ಸ್ವಿಫ್ಟ್ …
ಅವಳ ಹಾರ್ಟು ಬೇರೊಂದು ಹೃದಯಕೆ ಶಿಫ್ಟ್ …!!!


                  ಕವಿ
ಹೇಳಿಕೊಳ್ಳಲು ನಾನೊಬ್ಬ ಕವಿ …
ಬರೆಯಲಿಲ್ಲವೆಂದರೆ ನನ್ನ
ಹೆಂಡತಿಯ ಬಗ್ಗೆ ಹೊಗಳಿ ಕವಿತೆ
ಹಿಂಡುವಳು ನನ್ನ ಕಿವಿ …!!!


         ಹಾಯ್
ಅಂದಳು ಹಾಯ್ …
ಕುಡಿದೆವು ಚಾಯ್ …
ಹೇಳಿದಳು ಬಾಯ್ …!!!


                         ಬಾಯ್
ಸಿಕ್ಕಾಗಲೆಲ್ಲ ನಗುಮೊಗದಿಂದ ಹೇಳುತ್ತಿದ್ದಳು ಹಾಯ್ …
ಖುಷಿಯಿಂದ ಕುಡಿಯುತ್ತಿದ್ದೆವು ಬೈಟು ಚಾಯ್ …
ಮತ್ತೆ ನಗುಮೊಗದಿಂದ ಹೇಳುತ್ತಿದ್ದಳು ಸಿ ಯು ಬಾಯ್ …
ಈಗ ಹೇಳುತ್ತಾಳೆ ಬರ್ಲಾ ಟಾಟಾ ಬಾಯ್ ಬಾಯ್ …!!!


      ಒಪ್ಪಲಿ
ಕಲ್ಲಿನಂತಿರುವ
ನಿನ್ನ ಹೃದಯ ಕರಗಿ
ನನ್ನ ಪ್ರೀತಿಯನ್ನು
ನಿನ್ನ ಮನವು
ಬೇಗನೆ ಒಪ್ಪಲಿ ...
ದಯವಿಟ್ಟು ಬಾರದಿರಲಿ
ನಿನ್ನ ಕೈಗೆ ಚಪ್ಪಲಿ …!!!


      ಅಭಿಯಾನ
ಇರಬಹುದು ನಿನಗೆ
ನೀ ಉಟ್ಟ ಸೀರೆಯ ಮೇಲೆ
ಬಾರಿ ಅಭಿಮಾನ ...
ಸ್ವಲ್ಪ ಮೇಲಕ್ಕೆತ್ತಿ
ಸಿಕ್ಕಿಸಿಕೊಂಡರೆ ಒಳ್ಳೆಯದು
ಇಲ್ಲವಾದರೆ ಆಗುವುದು
ಸ್ವಚ್ಛತಾ ಅಭಿಯಾನ …!!!

ಅವ್ವನ -  ಯವ್ವನ
ಮರೆತುಬಿಟ್ಟೆಯಲ್ಲಾ
ಚಂದಿರವ ತೋರಿಸಿ ಉಣಿಸುತ್ತಿದ್ದ
ನಿನ್ನ ಅವ್ವನ …
ಹುಡುಗಿಯೊಬ್ಬಳು
ಚಂದಿರನಂತೆ ಆಟವಾಡಿಸುತ್ತಿರುವಾಗ
ನಿನ್ನ ಯವ್ವನ …!!!

                  K.G.F
ನನ್ನ ಸಣಕಲು ದೇಹಕ್ಕೆ ಕೇಳುವರು
ನಾ ಇರುವುದು ಎಷ್ಟು                                 - K    G
ಯಾರು ರೆಡಿ ಇಲ್ಲ ಆಗಲು ನನ್ನ                 -        G    F
ನಂದೇ ಹವಾ ಕುಡಿಯಲು ಕುಳಿತರೆ            - K           F
ಇಡೀ ಚಿತ್ರರಂಗದಲ್ಲಿ ಧೂಳ್ ಎಬ್ಬಿಸ್ತಿದೆ     - K    G    F
(KG - Kilo Gram
 GF - Girl Friend
 KF - King Fisher
 KGF - Movie Name)

               ಮುನಿಸು
ನನ್ನ  ಕಡೆನೂ ಸ್ವಲ್ಪ ಗಮನಿಸು …
ನನ್ನದು ಏನೇ ತಪ್ಪಿದ್ದರು ಕ್ಷಮಿಸು …
ಸಾಕು ಕಣೆ ಬಿಡು ಮುನಿಸು …
ಕಷ್ಟವಾಗುತ್ತಿದೆ ನೀ ಇಲ್ಲದೆ ತಿಂಡಿ ತಿನಿಸು …!!!

                      ಹೈಕು
5-7-5 ಪದಗಳಲ್ಲಿ ಅಡಗಿರುವುದು ಹೈಕು …
ಎಲ್ಲರೂ ಕೊಡುವರು ಇದಕ್ಕೆ ಲೈಕು …
575 ಪರೀಕ್ಷೆಯಲ್ಲಿ ತೆಗೆದಿದ್ದರೆ ಇಷ್ಟು ಮಾರ್ಕು …
ಕೇಳಬಹುದಿತ್ತು ನಮ್ಮಪ್ಪನಿಗೆ ಕೊಡಿಸೊಂದು ಬೈಕು …!!!



              ಮನ
ಅರ್ಥವಾಗದ ನಿನ್ನ ಮನ …
ಪ್ರಶ್ನೆಯಾಗಿಯೇ ಕಾಡುತಿದೆ ದಿನ …
ಬಿಟ್ಟುಬಿಡು ನಿನ್ನ ತನ …
ನಿನ್ನ ಇಚ್ಛೆಯಂತೆಯೇ ನಡೆಸೋಣ ಜೀವನ …!!!


             ಹೊಟ್ಟೆ
ಗಂಡಸರೇ ತಿಂದು ತಿಂದು
ಬೆಳೆಸಿಕೊಳ್ಳಬೇಡಿ
ನಿಮ್ಮ ಹೊಟ್ಟೆ …
ಬೆಳೆಸಿರಿ ನಿಮ್ಮ
ಹೆಂಡತಿಯ ಹೊಟ್ಟೆ …!!!


            ಮದರ್ರು
ಸಮಯಕ್ಕೆ ಸರಿಯಾಗಿ
ಉಣಬಡಿಸಿ ಹಾಲು ಕುಡಿಸಿ
ಮಲಗಿಸುವಳು ಮದರ್ರು ...
ನಿದ್ದೆಯಿಂದ ಬಡಿದೆಬ್ಬಿಸುವುದು
ಪ್ರೇಯಸಿಯ ಖದರ್ರು …!!!


             ಶತ್ರು          
ಹೆಣ್ಣಿಗೆ ಹೆಣ್ಣೇ ಶತ್ರು …
ಎಣ್ಣೆಗೆ ಹೆಣ್ಣೇ ಶತ್ರು …!!!

        ಲಾಲ್ ಬಾಗ್
ಒಂಟಿತನದಲ್ಲಿ ನನ್ನ
ಹೃದಯ ವಿಶಾಲವಾಗಿತ್ತು
ಲಾಲಬಾಗ್ ನಂತಿತ್ತು …
ಪ್ರಿಯತಮೆ ಕರೆದಾಗಲೆಲ್ಲ
ಬಾಗ್ ಬಾಗ್ ಅನ್ನತ್ತೆ …!!!


            ದಟ್ಟಣೆ
ಬಂದ್ ಇದ್ದರೂ ಎಂದಿನಂತಿತ್ತು
ವಾಹನಗಳ ದಟ್ಟಣೆ …
ದಿನಾ ಕೂರುವ ಜಾಗದಲ್ಲಿ
ಅವಳಿಲ್ಲದೆ ಕಣ್ಣೇರು

ತೊಟ್ಟಿಕ್ಕಿತು ತಟ್ಟನೆ …!!!

               ಚಳಿ
ಮೈಕೊರೆಯುವ ಚಳಿಯಲ್ಲಿ
ಹುಡುಗಿಯರಿಗೆ ಐಸ್ ಕ್ರೀಮ್ 
ತಿನ್ನುವ ಹಠ ...
ಗಂಟಲ ದಾಹ
ನೀಗಿಸಿಕೊಳ್ಳಲು ಹುಡುಗರಿಗೆ
ಕುಡಿಯುವ ಚಟ …!!!


          ಮುನಿಸು
ಸಾಕು ಬಿಡು ಮುನಿಸು …
ದಯವಿಟ್ಟು ಏನೇ ತಪ್ಪಿದ್ದರು ಕ್ಷಮಿಸು …
ಕಾಯಿಸು, ಉಣಿಸು, ಪ್ರೀತಿಸು …
ನೆನ್ನೆದೆಗೆ ತಲೆ ಒರಗಿ ಒಮ್ಮೆ ನನ್ನ ಆಲಂಗಿಸು …!!!


          ಹುಡುಗಿ
ಮದುವೆ ಮುಂಚೆ ಹುಡುಗಿ
Viloent ಆಗಿರಬೇಕು …
ಮದುವೆ ಆದಮೇಲೆ ಹುಡುಗಿ
Silent ಆಗಿರಬೇಕು …


                ಹರಕೆ
ನಿನ್ನ ಪ್ರೀತಿ ಕಾಳಜಿಯೆ ದಿವ್ಯೋಷಧಿ ನನ್ನ ಜ್ವರಕೆ …
ನೀನೆ ಬೇಕೆಂದು ಸುತ್ತಿದೆ ಎಷ್ಟೋ ಮರಕ್ಕೆ …
ತೀರಿಸಿದೆ ಎಲ್ಲದರ ಹರಕೆ …
ಸಹಿಸಲಾರೆನು ದಿನ ನೀ ಹೊಡೆಯೊ ಗೊರಕೆ …!!!


      One Way
ನನ್ನ ಪ್ರೀತಿ ಆಗಿದ್ದು
One Way
ಎಷ್ಟೇ ಪ್ರಯತ್ನಿಸಿದರೂ
ಆಗಲಿಲ್ಲ
Two Way
ಅದಕ್ಕೆ ಹೇಳಿದಳು
Get Away


         ರಮ್ಮು
ಪ್ರಿಯೆ,
ಮೈಕೊರೆಯುವ ಚಳಿ
ಕಣೆ ಪ್ಲೀಸ್ ಕಮ್ಮು …
ನೀ ಬರದೇ ಇದ್ದರೂ
ಬೇಡ ಹೋಗು
ನನ್ನ ಹತ್ತಿರ ಇದೆ

ಒಂದು ಬಾಟಲಿ ರಮ್ಮು …!!!

             ಹೆಣ್ಣು
ಹೆಣ್ಣು ಸಂಸಾರದ ಸಾಗರವನ್ನು
ನಿಭಾಯಿಸಲು ಬರುವ
ಎರಡನೇ ತಾಯಿಯಂತೆ …
ಗಂಡು ಅವಳು ಹೇಳಿದಂಗೆ
ಕೇಳುವ ಗುಲಾಮನಂತೆ …!!!

     ಎಳ್ಳು ಬೀರು
ಪ್ರಿಯೆ,
ಇವತ್ತು ಎಷ್ಟಾರ ಮನೆಗೆ
ಹೋಗಿ ಎಳ್ಳು ಬೀರು …
ಉಳಿದ ಏಳು ದಿನಗಳಲ್ಲಿ
ಕುಡಿಯಲು ಬಿಡು
ಒಂದೆರಡು ಬೀರು …!!!

          ನಲ್ಲೆ
ಅಂದು ತುಟಿಗೆ ತುಟಿ
ಸೇರಿಸಿ ಮುತ್ತಿಟ್ಟ
ನನ್ನ ನಲ್ಲೆ …
ಮದುವೆಯಾಗು ಎಂದರೆ
ಹೇಳುವಳು ನಾ ವಲ್ಲೆ …!!!


                ಕುರಿ
ಅವಳಿಗೆ ಕೊಡಿಸಿದ್ದೇ ಕೊಡಿಸಿದ್ದು
ಪಾನಿಪುರಿ, ಬೇಲ್ ಪುರಿ, ಮಸಾಲ ಪುರಿ...
ಅವಳು ಕೈಕೊಟ್ಟ ಮೇಲೆ ಶುರುವಾಯಿತು ಉರಿ...
ತಲೆಯಲ್ಲಾಡಿಸಿದೆ ಅವಳು ಹೇಳಿದ್ದಕ್ಕೆಲ್ಲ ಸರಿ ಸರಿ...
ಸರಿಯಾಗಿ ಮಾಡಿದಳು ನನ್ನ ಕುರಿ…!!!

          ಚಳಿ
ತಾಳಲಾರೆನು ಚಳಿ
ಹೊದ್ದಿಕೊಂಡರೂ ರಗ್ಗು...
ಹಾಕಲೆ ಬೇಕಾಗಿದೆ
ಇಂದು ಪೆಗ್ಗು…!!!

           ಡ್ರಾಪು
ಅವಳು ಕರೆದಾಗಲೆಲ್ಲ
ಹೋಗುತ್ತಿದ್ದೆ, ಕಾಯುತ್ತಿದ್ದೆ
ಅವಳು ಕೇಳಿದ ಕಡೆಯಲ್ಲೆಲ್ಲಾ
ಸುತ್ತಾಡಿಸಿ ನನ್ನದೇ ಗಾಡಿಯಲ್ಲಿ
ಮಾಡುತ್ತಿದ್ದೆ ದಿನಾಲೂ ಡ್ರಾಪು...
ಕೊನೆಗೆ ನನ್ನೇ ಮಾಡಿದಳು ಡ್ರಾಪು…!!!

       ಪ್ರೇಮಿಗಳ ದಿನಾಚರಣೆ
ಲವರ್ಸ್ ನ ಕಂಡರೆ ನಂಗೆ ಒಂಥರಾ ಉರಿ...

ಗರ್ಲ್ ಫ್ರೆಂಡ್ ಇದ್ರೆ ದಿನಾ ಅವಳ 
ಜೊತೆ ತಿನ್ನಬಹುದಿತ್ತು ಪಾನಿಪುರಿ...
ಗರ್ಲ್ ಫ್ರೆಂಡ್ ಇಲ್ಲ ಅನ್ನೋದೇ ನಂಗೆ ವರಿ...
ಯಾಕಾದರೂ ಬರುತ್ತಪ್ಪ ಈ ಫೆಬ್ರವರಿ…!!!

      ಜೋಡಿ ಹಕ್ಕಿಗಳು
ಜೋಡಿ ಹಕ್ಕಿಗಳಿಗೆ ಇಂದು
ಪಾರ್ಕು, ಸಿನಿಮಾ, ಐಸ್ ಕ್ರೀಮ್,
ಹೋಟೆಲ್ ಅಂಡ್ ರೆಸ್ಟೋರೆಂಟ್...
ಒಂಟಿ ಹಕ್ಕಿಗಳಿಗೆಯಾವಾಗಲೂ
ಇದ್ದೇ ಇರುತ್ತದೆ
ಬಾರ್ ಅಂಡ್ ರೆಸ್ಟೋರೆಂಟ್ …!!!

                 ಮೊಬೈಲು
ಅವಳ ಕೈಯಲ್ಲಿ  ಮೂರೊತ್ತು ಮೊಬೈಲು …
ವೇಸ್ಟು ಅವಳ ಮುಂದೆ ಮಾಡುವುದು ಸ್ಟೈಲು …
ಹಿಡಿದಿದೆ ಅವಳಿಗೆ ಮೊಬೈಲಿನ ಐಲು …
ಸ್ಮೈಲಿಗಳ ಜೊತೆ ಅವಳ ಸ್ಮೈಲು …!!!


                   ಜೋಡಿ
ಪದೇ ಪದೇ ತಿರುಗಿ ನೀ ನನ್ನೇ  ನೋಡಿ …
ನಾ ಕಾಣೆ ಅದೇನು ಮಾಡಿದೆನೋ ನಿನಗೆ ಮೋಡಿ …
ನೀ ಒಪ್ಪುವುದಿಲ್ಲ ಬಿಡು ಆಗಲು ನನ್ನ ಜೋಡಿ …
ಸುತ್ತಾಡಲು ಇಲ್ಲ ನನ್ನ ಹತ್ತಿರ ಗಾಡಿ …!!!


                  ಗಜಲ್
ಅವಳ ಕಣ್ಣ ಕಾಡಿಗೆಯ ಕಾಜಲ್...
ಎದೆಯಲಿ ಸದ್ದು ಮಾಡುತ್ತಿದೆ ಜಲ್ ಜಲ್ …
ಅವಳಿಗಾಗಿ ಹೊಡೆಯುತ್ತಿದೆ ಅಂದು ವಿಜಲ್ …
ಅವಳ ನೆನಪಲ್ಲಿ ಬರೆಯುತ್ತಿದ್ದೇನೆ ಗಜಲ್ …!!!


             ಆಪಲ್
ಸಪೂರಾಗಿ ಕೆನ್ನೆ
ಇಳಿಜಾರಿನಂತಿದ್ದರೆ
ಆಹಾ ಕಾಶ್ಮೀರಿ ಆಪಲ್ …
ಅಲ್ಲ ಅಡೆತಡೆಗಳಿದ್ದರೆ
ಪೈನ್ ಆಪಲ್ …!!!


   ಮಹಿಳಾ ದಿನಾಚರಣೆ
ಮಹಿಳೆಯರಿಗೆಲ್ಲ ಅಂದು
ಮಹಿಳಾ ದಿನಾಚರಣೆ …
ಪುರುಷರಿಗೆಲ್ಲ ಅಂದು
ಮೌನಾಚರಣೆ …!!!


                 ಮಿಂಚು
ಹಲವು ಚೆಲುವೆಯರ ನಡುವೆ
ನೀ ಹೊಳೆಯುತಿರುವ ಮಿಂಚು …
ನೋಡಿಯೂ ನೋಡದ ಹಾಗೆ
ಆಡು ಹೋಗುವ ಕೊಮಿಂಚು …
ಬೀಸಬೇಕಿದೆ ಪ್ರೀತಿ ಬಾಳೆಯ ಸಂಚು …
ಆಗಾಗ ಕೊಡಿಸುತ್ತ ಅವಳಿಗೆ ಕ್ರಾಂಚು, ಮಂಚು …!!!


                  ಸಂಚು
ನನ್ನವಳಿಗೆ ಆಗ ಕೊಡಿಸಿದರೆ ಮಂಚು …
ಅವಳ ಮೊಗದಲ್ಲಿ ನಗುವಿನ ಕೊಮಿಂಚು …
ಸಿಟ್ಟು ಬಂದಾಗ ಮಾತ್ರ ಕಾದ ಹೆಂಚು …
ಬೀಳದಿದ್ದರೆ ಸಾಕು ನನ್ನ ಮುಖಕ್ಕೆ ಪಂಚು …!!!


                          ಕಲ್ಲು ಬಂಡೆ
ಕಣ್ಣು ಬಿಟ್ಟಲ್ಲೆಲ್ಲಾ ಎತ್ತ ನೋಡಿದರೂ ನಿನ್ನನ್ನೇ ಕಂಡೆ …
ಪ್ರೀತಿನ ವ್ಯಕ್ತಪಡಿಸಲಾಗದ ನನ್ನದು ಕಲ್ಲು ಬಂಡೆ …
ನಿನ್ನ ಬಗ್ಗೆ ಯೋಚಿಸಿ ಬಿಸಿಯಾಗಿದೆ ಕಣೆ ಮಂಡೆ …
ಬಿಡುವು ಮಾಡಿಕೊಂಡು ಸಿಗುವೆಯಾ ಈ ಬಾರೋ ಸಂಡೆ …!!!


                ಉಪವಾಸ
ಶಿವರಾತ್ರಿ ಹಬ್ಬದ ದಿನದಂದು
ಹೊಟ್ಟೆಗೆ ಮಾತ್ರ ಉಪವಾಸ …
ದೇವಸ್ಥಾನಕ್ಕೆ ಹೋದರೆ ಕಣ್ಣೀಗಂತೂ
ಇಲ್ಲವೇ ಇಲ್ಲ ಉಪವಾಸ …!!!


               ಜಾಗರಣೆ 
ಶಿವರಾತ್ರಿ ಹಬ್ಬದ ದಿನವಾದರೂ
ಮಾಡೋಣ ಶಿವನ ನೆನೆಯುತ
ಜಾಗರಣೆ …
ಮಿಕ್ಕ ದಿನಗಳ್ಳಲ್ಲಿ ಇದ್ದೆ ಇದೆ
ಅವಳ ನೆನಪುಗಳೊಂದಿಗೆ
ಜಾಗರಣೆ …!!!


              ಜಾಗರಣೆ 
ಉಪವಾಸದ ಹೆಸರಲ್ಲಿ ದಿನಪೂರ್ತಿ
ರೆಡಿಯಾಗಿರುತ್ತದೆ ಒಗ್ಗರಣೆ …
ಶಿವರಾತ್ರಿಯ ದಿನದಂದು
ಶಿವನ ಹೆಸರಲ್ಲಿ ಹಲವಾರು
ಟೀವಿ ಮುಂದೆ ಕೂತು ಜಾಗರಣೆ …!!!


             ಕಿಟ್ಟಿ ಪಾರ್ಟಿ
ಹೆಂಗಸರಿಗೆ ಅಡಿಗೆ ಮಾಡಲು ಹೇಳಿ
ಬಾರ್ ನಲ್ಲಿ ಮಾಡುತ್ತಾರೆ ಗಂಡಸರು
ಗುಂಡು ಪಾರ್ಟಿ …
ಗಂಡಸರಿಗೆ ಆಫೀಸ್ ಗೆ ಕಳಿಸಿ
ಮನೆಯಲ್ಲೇ ಮಾಡುತ್ತಾರೆ ಹೆಂಗಸರು
ಕಿಟ್ಟಿ ಪಾರ್ಟಿ …!!!


                ಮಲಗು
ಚಳಿಗಾಲದಲ್ಲಿ ಹೆಂಡತಿಯನ್ನು
ತಬ್ಬಿ ಮಲಗಬೇಕೆನಿಸುತದೆ …
ಶೆಕೆಗಾಲದಲ್ಲಿ ಹೆಂಡತಿಯನ್ನು
ದಬ್ಬಿ ಮಲಗಬೇಕೆನಿಸುತದೆ …!!!  


           ಸಕ್ಕರೆ
ಚೆಲುವೆ ನೀನು ನಕ್ಕರೆ
ಹಾಲು ಸಕ್ಕರೆ …
ಮದುವೆಯಾದಮೇಲೆ
ದಯವಿಟ್ಟು ಆಗಬೇಡ
ಕುಕ್ಕುವ ಕೊಕ್ಕರೆ …!!!


         ಬೈತಲೆ
ಅಂದು ಹೆಂಗಸರು
ಹಣೆತುಂಬಾ ಕುಂಕುಮ
ಇಟ್ಟು ಮಲ್ಲಿಗೆ ಮುಡಿದು
ಬಾಚಿಕೊಳ್ಳುತ್ತಿದ್ದರು
ಬೈತಲೆ …
ನನ್ನ ಹೆಂಡತಿಗೆ ಹೇಳಿದರೆ
ಬಾಚಿಕೊ ಎಂದರೆ
ಬೈತಲೆ ನನಗೆ ತಿರುಗಿಸಿ
ಬೈತಳೆ …!!!


        ಬನಿಯನ್ನು
ಅಪ್ಪ ಆದವನು ಎಷ್ಟೇ
ದುಡಿದರೂ ಒಳಗೆ
ಧರಿಸುವುದು ಹರಿದೊಗಿರೋ
ಬನಿಯನ್ನು…
ತಾಯಿಯಾದವಳು ಎಷ್ಟೇ
ನೋವಿದ್ದರೂ ಮಕ್ಕಳಿಗೋಸ್ಕರ
ತಡೆದು ಕೊಂಡಿರುತ್ತಾಳೆ ಕಂ
ಬನಿಯನ್ನು …!!!


        ಟಂಕ
ಬಿಡು ನೀ ಬಿಂಕ
ಕೊಡುವೆ ನಿಂಗೆ ಸುಂಕ
ಪ್ರೀತಿಯಲ್ಲಿ ನೀ
ಕೊಟ್ಟದ್ದು ಸೊನ್ನೆ ಅಂಕ
ನಿನಗಾಗಿ ಈ ಟಂಕ…!!!


      ಬಂಧಿಸು
ಬಂಧಿಸಿಬಿಡುವೆ
ನಿನ್ನ ಬಿಂಬವನ್ನು
ಕಣ್ಣ ರೆಪ್ಪೆಯ
ಸರಳುಗಳೊಳಗೆ...
ಹಾಗೆ ಇಳಿದುಬಿಡು
ಕಣ್ಣ ಕೊಳದೊಳಗಿನಿಂದ
ಮನದೊಳಗೆ…!!!


                           ಪತಾಂಜಲಿ
ಶುರುವಾಯಿತ ಅಂಗಡಿ ಮಗಳೊಂದಿಗೆ ಪ್ರೇಮಾಂಜಲಿ...
ಕೊಡುತ ಆಗಾಗ ಅವಳಿಗೆ ಪುಷ್ಪಾಂಜಲಿ...
ಲಗ್ನಪತ್ರಿಕೆಯಲ್ಲಿ ಹಾಕಿಸಿದ ತಕ್ಷಣ ಅವಳ ಹೆಸರು ಗೀತಾಂಜಲಿ...
ಮನೆತುಂಬಾ ಪುಕ್ಕಟೆ ಸಾಮಗ್ರಿಗಳು ಪತಾಂಜಲಿ…!!!


               ಫೋಟೋಗಳು
ಗ್ಯಾಲರಿ ತುಂಬಾ ಅವಳದ್ದೇ ಪಟಗಳು...
ಕಪಾಟಿನ ತುಂಬಾ ಅವಳದ್ದೇ ಪ್ರೇಮಪತ್ರಗಳು...
ಕವಿತೆ ತುಂಬಾ ಅವಳದ್ದೇ ಸಾಲುಗಳು...
ರೂಮಿನ ತುಂಬಾ ಅವಳದ್ದೇ ಹೆಸರಲ್ಲಿ ಖಾಲಿ ಬಾಟಲಿಗಳು…!!!


      ತಬ್ಬುವಳು
ದಿನಾ ಮನಗೆ ಬೇಗ
ಹೋದರೆ ಹೆಂಡತಿ
ಬಾಚಿ ತಬ್ಬುವಳು...
ಮನೆಗೆ ಲೇಟಾಗಿ ಹೋದರೆ
ಆಚೆ ದಬ್ಬುವಳು…!!!


                                   ಬೋರು
ದಿನವಿಡೀ ಮನೆಯಲ್ಲಿರುವ ನನ್ನ ಹೆಂಡತಿಗೆ ಬಲು ಬೋರು...
ನಾ ಮನೆಗೆ ಹೋದೊಡನೆ ಆಗುತ್ತಾಳೆ ಜೋರು...
ಸಿಟ್ಟಿನಿಂದ ಮಾಡುತ್ತಾಳೆ ಉಪ್ಪು, ಉಳಿ, ಖಾರ ಇಲ್ಲದ ಸಾರು ...
ಮಂಚದಿಂದ ಮಾಡುತ್ತಾಳೆ ಗಡಿಪಾರು…!!!


              ಸ್ಕಾರ್ಫು 
ಸುಡುಬಿಸಿಲ ಬೇಗೆಯಲು
ಹುಡುಗೀಯರು ಹಾಕಿಕೊಳ್ಳುತ್ತಾರೆ ಸ್ಕಾರ್ಫು ...
ಸುರಿಯುತಿರೋ ಬೆವರು ಒರೆಸಿಕೊಳ್ಳಲು
ಹುಡುಗರ ಜೇಬಲ್ಲಿ ಇಲ್ಲದಿರುವಾಗ ಕರ್ಚೀಫು …!!!


              ಸೆಟಲ್
ನಾವು ಲೈನ್ ಹೊಡೆದಿರೋ
ಹುಡುಗಿಯರೆಲ್ಲರೂ
ಫಾರಿನ್ ನಲ್ಲಿ ಸೆಟಲ್...
ನಮ್ಮದು ಯಾಕೋ ಇಲ್ಲೇ
ಫಿಕ್ಸ್ ಮಿನಿ ಮೀಲ್ಸ್ ಇನ್
ಶಾಂತಿ ಸಾಗರ್ ಹೋಟೆಲ್…!!!


                            ಜಾಮ್
ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್...
ಯಾವಾಗ ಹೋಗಿ ಸೇರ್ತಿವೋ ಗೊತ್ತಿಲ್ಲ ಹೋಮ್...
ಆಫೀಸ್ ನಲ್ಲಂತೂ ಸಿಕ್ಕಾಪಟ್ಟೆ ಕಾಮ್...
ಹೆಂಡತಿ ಮಾತಿಗಿಳಿದರೆ ಬೇಕೇಬೇಕು ಜಂಡುಬಾಮ್ …!!!  


      ಜಲ್ ಜಲ್
ಅವಳು ಎದುರುಗಡೆ
ಬಂದಾಗಲೆಲ್ಲ ನನ್ನೆದೆ
ಜಲ್ ಜಲ್ ಅನ್ನತ್ತೆ
ಅವಳನ್ನು ಹೋಟೆಲಿಗೆ
ಕರೆದುಕೊಂಡು
ಹೋದಾಗಲೆಲ್ಲ ನನ್ನದೇ
ಬಿಲ್ ಬಿಲ್ ಅನ್ನತ್ತೆ ..!!!


          ನಗುವಿತ್ತು
ಅಂದು ಅವಳೊಂದಿಗಿನ
ಒಡನಾಟದಲ್ಲಿ ಅವಳ
ಮುಖದಲ್ಲಿ ಸದಾ
ನಗುವಿತ್ತು…
ಇಂದು ನೋಡಿದಾಗ
ಅವಳ ಸೊಂಟದ
ಮೇಲೊಂದು
ಮಗುವಿತ್ತು…!!!


               ದಾನ
ಜೀವನದಲ್ಲಿ ಏನೆಲ್ಲಾ ಮಾಡಬಹುದು
ಅನ್ನದಾನ
ನೇತ್ರದಾನ
ವಿದ್ಯಾದಾನ
ಮತದಾನ
ಮಾಡಲಾಗದು ಒಂದೇ ಒಂದು
ಹೆಂಡತಿಗೆ ಸಮಾಧಾನ …!!!


             ನಕ್ಕಳು
ಅಂದು ಅವಳು ನನ್ನ ನೋಡಿ ನಕ್ಕಳು...
ನನ್ನ ಮನದೊಳಗೆ ಹೊಕ್ಕಳು...
ಮತ್ತೊಂದು ದಿನ ರೋಡ್ ನಲ್ಲಿ ಸಿಕ್ಕಳು...
ಅವಳಿಗಾಗಲೇ ಎರಡು ಮಕ್ಕಳು…!!!


               ಸ್ವರ
ಇಂಪಾಗಿತ್ತು ಅವಳ ಗಾಯನದ ಕಂಠಸ್ವರ...
ಅಂದೇ ತಟ್ಟಿದಳು ನನ್ನೆದೆಯ ದ್ವಾರ...
ಗೊತ್ತಿಲ್ಲದೆ ಶುರುವಾಯಿತು ಅವಳೊಂದಿಗೆ ಪ್ರೇಮ ಜ್ವರ...
ಅವರಪ್ಪನಿಗೆ ಗೊತ್ತಾದರೆ ಬಿಡಿಸುವನು ಚಳಿ ಜ್ವರ..!!!


             ಕುಣಿತ
ಯಾವಾಗಲೂ ತಪ್ಪುತ್ತಿದ್ದೆ
ಹೇಳಲು ಕಾಗುಣಿತ...
ವರುಷ ಪೂರ್ತಿ ವೇದಿಕೆ ಮೇಲೆ
ನನ್ನದೇ ಕುಣಿತ...
ಫಲಿತಾಂಶ ಬಂದಮೇಲೆ
ಎಲ್ಲರೂ ನನ್ನ ನೋಡಿ ಕುಣಿತ...
ಫೇಲಾದಾಗ ಗಣಿತ…!!!


           ಡ್ಯೂಟಿ
ಅವಳ ನೀಳ ಕೇಶ ರಾಶಿ
ತೊಂದರೆ ಕೊಡುತ್ತಿತ್ತು
ಮಾಡಲು ಡ್ಯೂಟಿ...
ಅವಳು ಹಿಂತಿರುಗಿದಾಗ
ಹೃದಯ ಚೂರಾಯಿತು
ಅವಳು ಬ್ಲ್ಯಾಕ್ ಬ್ಯೂಟಿ…!!!


           ಮೀಟಿಂಗು
ಅವರಿವರ ಜೊತೆ ದಿನವಿಡಿ ಮಾಡುತ್ತಾಳೆ ಮೀಟಿಂಗು...
ಮೊಬೈಲ್ ಹಿಡಿದು ಯಾವಾಗಲೂ ಚಾಟಿಂಗು...
ಆಫೀಸ್ ಕೆಲಸದಲ್ಲಿ ಸಿಕ್ಕರೂ ಸಹ ಒಳ್ಳೆ ರೇಟಿಂಗು...
ಕರೆದರೆ ಒಂದ್ ಸಲನೂ ಬರಲಿಲ್ಲ ಡೇಟಿಂಗು…!!!


              ಅಂಕಿಎಣಿಸುತ್ತಿದ್ದೆವು ಪ್ರೀತಿ ದಿನಗಳ ಅಂಕಿ...
ಇತ್ತೀಚೆಗೆ ಅವಳಿಗೆ ನನ್ನ ಕಂಡರೆ ಬೆಂಕಿ...
ಹೇಳಿದ ಕಡೆಯಲ್ಲಾ ಸುತ್ತಾಡಿಸಿ...
ಬೇಕಾಗಿರುವುದನ್ನೆಲ್ಲ ಕೊಡಿಸಿದೆ...
ಸರಿಯಾಗಿ ಮಾಡಿದಳು ನನ್ನ ಮಂಕಿ…!!!


              ತಂಗಾಳಿ
ಸುಡೋ ಬಿಸಿಲ ತಾಪಮಾನದಲ್ಲೂ
ಅವಳು ಮನಸಿಗೆ ಸೂಸುವ
ತಂಪು ತಂಗಾಳಿ...
ಅವಳನ್ನ ಮಾತನಾಡಿಸಿದರೆ
ಅಯ್ಯೋ ಅವಳು ಬಂಗಾಳಿ…!!!


    ಕೋರಿಕೆ
ತಿಂಡಿಗೆ ಕರೆದೆ
ಬರಲ್ಲ ಹೋಗು ಅಂದ್ಲು
ಊಟಕ್ಕೆ ಕರೆದೆ
ಇಲ್ಲ ಹಸಿವಿಲ್ಲ ಅಂದ್ಲು
ಕಾಫಿಗೆ ಕರೆದೆ
ಮನೆಗೆ ಹೋಗ್ಬೇಕು ಅಂದ್ಲು
ಸರಿ ಮೊದ್ಲು ಹೋಗು ಅಂದೆ…!!!


           ಸಮರ
ಸಿಗಲಿ ಎಂದು ಒಳ್ಳೆಯ ವರ...
ಸುತ್ತಿದಳು ಹಲವು ಮರ...
ಕೆಲ ವರ್ಷಗಳ ಬಳಿಕ
ಶುರುಮಾಡಿದಳು ವಾಕ್ ಸಮರ...
ವಾಕ್ ಮಾಡುವಾಗಲು ಸಮರ…!!!


         Nice
ಹೆಂಡತಿಗೆ ಆಗಾಗ
ಹೊಗಳುತ್ತಿರಬೇಕು
ಯು ಆರ್ ಲುಕಿಂಗ್
ಸೋ nice...
ಒಂದಲ್ಲಾ ಒಂದಿನ
ಅವಳೇ ಹಾಕಬಹುದು
ವಿಸ್ಕಿ ಗ್ಲಾಸಿಗೆ ice...!!!


         ರೈಸ್
ಒಂದಿನನೂ ಬೆಳೆಗ್ಗೆ
ಬೇಗ ಎದ್ದು ನೋಡಲಿಲ್ಲ
ಸನ್ ರೈಸ್...
ಇನ್ನ ಮುಗಿದಿಲ್ಲ
ಖಾನವಳಿಯಲ್ಲಿ
ತಿನ್ನೋದೂ
ಎರಡು ಚಪಾತಿ
ಆಫ್ ರೈಸ್…!!!


          ಹೆಣ್ಣಿದೆ
ಆ ಮನೆಯಲ್ಲೊಂದು ಹೆಣ್ಣಿದೆ...
ಹೆಣ್ಣಿನ ಮೇಲೊಂದು ಕಣ್ಣಿದೆ...
ಅವಳ ಸೊಂಟ ಸ್ವಲ್ಪ ಸಣ್ಣಿದೆ...
ಆದರೆ ಮುಖದ ತುಂಬ ಹುಣ್ಣಿದೆ…!!!


         ಕಂಠ
ಹೇಳಿದ್ದಷ್ಟೇ ಅವಳಿಗೆ
ಚನಾಗಿದೆ ನಿನ್ನ ಕಂಠ...
ಅವರಪ್ಪನಿಗೆ ಹೇಳಿ
ಮುರಿಸಿದಳು ನನ್ನ ಸೊಂಟ…!!!


        ರೂಪ
ಅವಳ ಹೆಸರು ರೂಪ...
ಮೂಗಿನ ತುದಿಲೇ ಅವಳಿಗೆ ಕೋಪ…
ಅವಳ ಹಿಂದೇನೆ ಸುತ್ತುತ್ತಾನೆ ಭೂಪ...
ಅವನ ನೋಡಿದ್ರೆ ಅನ್ಸತ್ತೆ ಅಯ್ಯೋ ಪಾಪ…!!!


             ಹಸಿರು
ಸುತ್ತಮುತ್ತಲೂ ಎಲ್ಲೆಲ್ಲೂ ಹಸಿರು...
ಹಸಿರೊಳಗೆ ನಮ್ಮ ಉಸಿರು...
ಉಸಿರಿರುವವರೆಗೆ ಮಾಡೋಣ ಹೆಸರು...
ಉಸಿರೋದಮೇಲು ಆಗಲಿ ಹೆಸರು ಪಸರು..!!!



            ಸರಕಾರ
ಈ ಸಲ ಯಾವ ಸರಕಾರ
ಬಂದು ಯಾರಾದರೇನು
ಪ್ರೈಮ್ ಮಿನಿಸ್ಟರ್…
ನಮ್ಮ ಮನೆಯಲ್ಲಿ ಖಾಯಂ
ಸರಕಾರ ನಡೆಸೋದು
ಹೋಂ ಮಿನಿಸ್ಟರ್ …!!!


           ಸರಕಾರ
ಯಾವ ಸರಕಾರ ಬಂದರೂ
ಏನು ಬದಲಾಗೋದಿಲ್ಲ ...
ಭಾನುವಾರ ಮಾರ್ಕೆಟ್ ಗೆ
ಹೋಗಿ ತರಕಾರಿ ತರೋದು
ಮಾತ್ರ ತಪ್ಪೋದಿಲ್ಲ …!!!


        ಕೈಕಟ್ಟಿ
ಪ್ರೀತಿ ಮಾಡುವಾಗ
ಸುಮ್ಮನೆ ತಲೆಯಲ್ಲಾಡಿಸಿದಳು
ಎಲ್ಲದಕ್ಕೂ
ಕೈ ಕಟ್ಟಿ ...
ಮದುವೆ ಸಮಯ ಬಂದಾಗ
ಓಡಿಹೋದಳು
ಕೈಕೊಟ್ಟಿ …!!!


         ಕ್ರಶ್ಹು
ಪ್ರಿಯೆ
ನೀನು ಸಿಕ್ಕಿದಾಗಿಂದನು
ಆಡುವುದು ಬಿಟ್ಟೆ
ಕ್ಯಾಂಡಿ ಕ್ರಶ್ಹು...
ಅದಕ್ಕೆ ನೀನು
ಯಾವಾಗಲೂ
ನೆನಪಾಗುವುದು
ಬೆಳೆಗ್ಗೆ ಉಜ್ಜುವಾಗಲೂ

ಬ್ರಷ್ಹು ..!!!


          ಹಸ್ ಬೆಂಡು
ಆಗಲಿಲ್ಲ ಮದುವೆ ಗ್ರಾಂಡು
ಹೊಸತನದಲ್ಲಿ ಮುದ್ದಿನ ಹಸ್ ಬೆಂಡು...
ಸುತ್ತಾಡಿಸಿದೆ ಕೇಳಿದಕಡೆ ಎಲ್ಲ ರೌಂಡು...
ಹೆಚ್ಚು ಕಮ್ಮಿ ನಕರ ಆಡಿದ್ರೆ

ಅಯ್ಯೋ ಮಾಡ್ತಾಳ್ ನಮ್ನ 'ಹಸ' ಬೆಂಡು..!!! 




             ಲೇಸು

ಎಷ್ಟು ಕಟ್ಟುತ್ತೀಯೋ ಕಟ್ಟು
ಅವಳ ಶೂ ಲೇಸು
ಮದುವೆಯಾದ ಮೇಲೆ
ಕೊಡಿಸುವುದು ಇದ್ದೇ ಇದೆ
ನೆಕ್ ಲೇಸು…
ಮಕ್ಕಳಿಗೆ ಲೇಸು...!!! 






            ಶಾಲೆ
ಒಡನಾಟದ ದಿನಗಳಲ್ಲಿ
ಗಂಡು ಹೆಣ್ಣಿನದ್ದು
ಪ್ರೀತಿ ಪ್ರೇಮದ ಪಾಠಶಾಲೆ...
ಮದುವೆಯಾದ ಮೇಲೆ
ಅಡುಗೆಮನೆಯಲ್ಲಿ
ಗಂಡನಿಗೆ ಆಗೊಮ್ಮೆ
ಈಗೊಮ್ಮೆ ಪಾಕಶಾಲೆ…!!!



             ಸಾರಿ
ಮಡದಿ ಮುನಿಸಿಕೊಂಡಾಗ
ನಾ ಕೇಳೋದೇ ಇಲ್ಲ ಸಾರಿ...
ಅಪ್ಪಿ ತಪ್ಪಿ ಕೇಳಿದರೆ
ತಕ್ಷಣ ಕೇಳುತ್ತಾಳೆ
ಕೊಡಿಸೊಂದು ಸ್ಯಾರಿ…!!!


            ಬರಹ
ಮಡದಿಯ ಮೆಚ್ಚಿ ಬರೆಯಲಿಲ್ಲ
ನನ್ನ ಬರಹದಲ್ಲಿ...
ಸಿಟ್ಟಿಗೆ ಒಂದು ಹಿಡಿ ಉಪ್ಪು
ಹಾಕಿದ್ದಾಳೆ ಮಾಡಿದ
ಅಡುಗೆಯಲ್ಲಿ…!!!


            ಆತಿಥ್ಯ
ಭಾರಿ ಆತಿಥ್ಯ ಮಾಡುವಳು
ನನ್ನಾಕೆ ಮನೆಯಲ್ಲಿ ಯಾರೇ
ಮನೆಗೆ ಬಂದರೂ
ಹೊಸಬರಿಗೆ...
ನನ್ನದು ಎಂದಿನಂತೆ ಮನೆ
ಗುಡಿಸಬೇಕು ಹಿಡಿದು
ಕಸಬರಿಗೆ…!!!



            ಬರಹ
ಮಡದಿಯ ಬಗ್ಗೆ ಇಲ್ಲವೇ
ಇಲ್ಲ ನನ್ನ
ಬರಹದಲ್ಲಿ...
ಬೇರೆ ಹಕ್ಕಿಗಳ ಕವಿತೆಗಳ
ಕಂಡು ಮುನಿಸಿಕೊಂಡು
ತವರಿಗೆ ಹೋಗಿದ್ದಾಳೆ
ವಿರಹದಲ್ಲಿ…!!!



           ಕವನ
ನನ್ನ ಯಾವ ಕವನಗಳು
ನನ್ನ ಹೆಂಡತಿ ಓದುವುದೇ ಇಲ್ಲ...
ಯಾಕೆಂದರೆ ಅವಳ ಬಗ್ಗೆ
ನಾನು ಬರೆಯುವುದೇ ಇಲ್ಲ…!!!



            ಮೊಬೈಲು
ಆಫೀಸಿನಲ್ಲಿ ಕೆಲಸ ಬಿಟ್ಟು ಜಾಸ್ತಿ 
ನೋಡೋದು ಮೊಬೈಲು
ಮನೆಗೆ ಲೇಟಾಗಿ ಹೋದ್ರೆ ಹೆಂಡತಿ 
ನಿಂತಿರುತ್ತಾಳೆ ಬೈಯಲು
ಹಿಂಗಾದ್ರೆ ಕಷ್ಟ ಸ್ವಾಮಿ ನಮಗೆ 
ನೆಮ್ಮದಿ ಸಿಗಲು..!!! 


              ಸುಮ್ಮನೆ
ಮನೆಗೆ ಹೋದರೆ ರೋದನೆ...
ಹೆಂಡತಿ ಶುರುಮಾಡುತ್ತಾಳೆ ಬೋದನೆ...
ಏನು ಹೇಳಣ ಇದು ದಿನನಿತ್ಯದ ಪರಿಸ್ಥಿತಿ ನಮ್ಮನೆ...
ಅವಳು ಹೇಳಿದ್ದಕ್ಕೆಲ್ಲ ನಾ ಕೂರಬೇಕು ಸುಮ್ಮನೆ...!!!



                ಪ್ರೀತಿ
ಹೆಂಡತಿಯನ್ನು ಪ್ರೀತಿಸುವವನು
ಹೆಂಡತಿಯನ್ನು ತಲೆ ಮೇಲೆ
ಹೊತ್ತು ತಿರುಗುತ್ತಾನೆ...
ಪ್ರೇಯಸಿಯನ್ನು ಪ್ರೀತಿಸುವವನು
ಪೆಟ್ರೋಲ್ ಇಲ್ಲದ ಗಾಡಿ ಮೇಲೆ
ಕೂರಿಸಿ ತಿರುಗುತ್ತಾನೆ…!!!



              ತವರು ಮನೆ
ಹೆಂಡತಿಯನ್ನು ತವರು ಮನೆಗೆ
ಕಳುಹಿಸಿದರೆ ನಮಗೆ ನಷ್ಟ...
ಮಾಡಿಕೊಳ್ಳಬೇಕಾಗತ್ತೆ
ನಾವೇ ನಾಷ್ಟ…!!!



                ಯೋಗ
ಯೋಗದ ದಿನದಂದು ಮಾಡಿದನು
ಭಾರಿ ಭಂಗಿಯ ಆಸನಗಳು...
ಇಂದು ಹಾಸಿಗೆಯಲ್ಲೇ ಅವನ
ಎಲ್ಲಾ ತಿಂಡಿ ತೀರ್ಥದ ಶಾಸನಗಳು…!!!

               ಹೊಳಪು
ಕಪ್ಪು ಆಗಸದ ತುಂಬಾ
ಬಿಳಿ ಚಂದ್ರಮನ ಹೊಳಪು...
ನನ್ನವಳ ಕಪ್ಪು ಮುಖದಲ್ಲೂ
ಬಿಳಿ ಹಲ್ಲುಗಳ ಹೊಳಪು…!!!

              ಹಸಿರು-ಉಸಿರು
ಪ್ರೀತಿ ದಿನಗಳಲ್ಲಿ ಹೇಳುತ್ತಿದ್ದಳು
ನೀನೇ ನನ್ನ ಹಸಿರು...
ನೀನೇ ನನ್ನ ಉಸಿರು...
ಮದುವೆಯಾದ ಮೇಲೆ ಹೇಳುತ್ತಾಳೆ
ಬೆಳೆಗ್ಗೆ ಬೇಗ ಎದ್ದು ತಗೊಂಡು ಬನ್ನಿ
ಹಾಲು ಮೊಸರು…!!!

           ಬೋಲ್ಡು
ನಿನ್ನ ಸೌಂದರ್ಯಕ್ಕೆ
ಸೋತು ನಾನಾದೆ
ಕ್ಲೀನ್ ಬೋಲ್ಡು...
ಮದುವೆಯಾದ ಮೇಲೆ
ಗೊತ್ತಾಗಿದ್ದು ನೀನು
ತುಂಬಾ ಬೋಲ್ಡು…!!!

    ಮಿನುಗುತಾರೆ
ಮದುವೆ ಮುಂಚೆ
ಹೇಳುತ್ತಿದ್ದರು
ಪ್ರಿಯೆ
ನೀನೆ ನನ್ನ
ದೃವತಾರೆ...
ಮಿನುಗುತಾರೆ...
ಈಗ ಹೇಳುತ್ತಾರೆ
ಎಷ್ಟೊತಂಕ ರೆಡಿ
ಆಗ್ತಿಯ ಬೇಗ ಬಾರೆ…!!!

      ಪ್ರೇಯಸಿ
ಪ್ರಿಯೆ,
ನಾವಿಬ್ಬರು ಮುಂದೆ
ಕೂಡಿ ಓದೋಣ
ಬಿಎಸ್ಸಿ, ಎಂಎಸ್ಸಿ
ಓ ನನ್ನ ಪ್ರೇಯಸಿ...
ದಯವಿಟ್ಟು
ಪಾಸು ಮಾಡು
ನೀ ಪಿಯುಸಿ…!!!

                  ಟೈ
ಮದುವೆಯ ಹೊಸತರಲ್ಲಿ
ಹಾಕುವರು ಗಂಡನಿಗೆ
ಪ್ರೀತಿಯಿಂದ ಟೈ…
ವರುಷ ಕಳೆದಮೇಲೆ
ಆಡಿಸುವರು ಅವನನ್ನು ತಕತೈ..!!!

                 ಬೀರು
ಹೆಣ್ಣಿನ ಬಗ್ಗೆ ನಮಗೆ ಗೌರವ ಜಾಸ್ತಿ ಚೂರು
ಮಾಡುವುದಿಲ್ಲ ಅವರಿಗೆ ಯಾವಾಗಲು ಬೇಜಾರು
ಅವರಿಗೂ ಸಹ ಆಗುತ್ತೆ ಒಮ್ಮೊಮೆ ಬೋರು
ಹೊಡೆಯಲಿ ಬಿಡಿ ಒಂದೆರಡು ಬೀರು..!!!

                 ಪ್ರೀತಿ
ನಾ ಮಾಡುವೆ ನನ್ನಾಕೆಗೆ ತುಂಬಾ ಪ್ರೀತಿ
ಎಷ್ಟೆಆದರು  ಅವಳು ನನ್ನ ಮುದ್ದಿನ ಸತಿ
ಹೇಳಿಕೊಳ್ಳಲು ನಾನು ಅವಳ ಪತಿ
ಆಗಾಗ ಉದ್ದಿಸುತ್ತಾಳೆ ನನ್ನ ಕೈಯಲ್ಲಿ ಚಪಾತಿ..!!!

                  ಕಡ್ಡಿ
ನೀನಿರುವೆ ಕಣೆ ತುಂಬಾ ಕಡ್ಡಿ
ಹಾಕಲು ಬಿಟ್ಟಿರುವರು ನಿನಗೆ ಚಡ್ಡಿ
ನಿನ್ನ ಚಡ್ಡಿಗೆ ನನ್ನದಿಲ್ಲ ಅಡ್ಡಿ
ಮೊದಲು ಕಟ್ಟಲು ಹೇಳು ನಿಮ್ಮಪನಿಗೆ ಬ್ಯಾಂಕಿನ ಬಡ್ಡಿ..!!!

                 ಆರತಿ
ನಮ್ಮಾಕೆಯ ಹೆಸರು ಆರತಿ
ಕೋಪಗೊಳ್ಳುವಳು ಕರೆದರೆ ರತಿ
ಮೌನಿಯಾಗುವಳು ಕಲ್ಲು ಬಂಡೆಯ ಮೂರುತಿ
ಆಮೇಲೆ ಮಾಡುವಳು ನನಗೆ ಮಂಗಳಾರತಿ..!!!

                  ಹಾರ್ಟ್
ನೀನು ನೋಡುವುದಕ್ಕೆ ತುಂಬಾನೇ ಸ್ಮಾರ್ಟ್
ಹೃದಯದಲ್ಲಿ ಸಿಗಬಹುದೇ ಒಂದು ಪಾರ್ಟ್
ನಿನ್ನ ಪ್ರೀತಿಸಲು ಮಾಡಿದ್ದೆ ಸ್ಟಾರ್ಟ್
ಅಷ್ಟರಲ್ಲಿ ಸೇಲಾಗಿ ಹೋಯಿತು ನಿನ್ನ ಹಾರ್ಟ್..!!!
 

                ರೋಸು
ಕೈನಲ್ಲಿ ಹಿಡಿದ್ದೀನಿ ಕಣೆ ರೋಸು
ನನ್ನ ಪ್ರೀತಿ ಒಪ್ಪಿಕೊ ಪ್ಲೀಸು
ನಿನ್ನ ನೋಡಿದಾಗಿನಿಂದ ಆಗಿದಿನಿ ಲೂಸು
ಸುಮ್ಮನೆ ಇಸ್ಕೊ ಕೊಡಬ್ಯಾಡ ಜಾಸ್ತಿ ಪೋಸು..!!!
 

           ಗೆಜ್ಜೆ
ಎಷ್ಟು ಪ್ರೀತಿ ತೋರಿಸಿ
ಕಟ್ಟುತ್ತೀಯೋ ಕಟ್ಟು
ಕಾಲಿಗೆ ಗೆಜ್ಜೆ…
ಮದುವೆಯಾದ ಮೇಲೆ
ಅವಳ ಅನುಮತಿ ಇಲ್ಲದೆ
ಹೊರ ಇಡುವಂತಿಲ್ಲ
ನೀ ಹೆಜ್ಜೆ..!!!


                   ನೆರಿಗೆ
ನಾನೇ ಸರಿ ಮಾಡಬೇಕು ನೋಡು ನಿಂಗೆ ನೆರಿಗೆ
ಸೀರೆ ಉಡ್ಕೊಳೋಕ್ಕೆ ಬರೋದಿಲ್ಲ ನಿಂಗೆ ಸರಿಗೆ
ಉಪ್ಪು ಮಾತ್ರ ಜಾಸ್ತಿ ಹಾಕೋದು ಗೊತ್ತಾಗತ್ತೆ ಸಾರಿಗೆ
ಹಿಂಗೆ ಆಡ್ತಿದ್ರೆ ಕಳುಸ್ತೀನಿ ನೋಡು ನಿಂಗೆ ತವರಿಗೆ..!!!

          ಕವಡೆ
ಸಂಸರಿಯಾದ ಮೇಲೆ
ಹೆಣ್ಣಿನ ಜೊತೆ…
ಆಡಬೇಡಿ ಕವಡೆ
ಮಡದಿಗೆ ಗೊತ್ತಾದರೆ
ಮುರಿದುಬಿಟ್ಟಾಳು ದವಡೆ…!!!


      ರಿಮೋಟ್
ಅಡಿಗೆಮನೆಯಲ್ಲಿ

ನಮ್ಮಾಕೆಗೆ ಸಹಾಯ
ಮಾಡದೆ ಕೂತಿದ್ದೆ
ಟೀವಿ ಮುಂದೆ
ರಿಮೋಟ್ ಒತ್ಕೊಂಡು
ದೋಸೆ ತಿಂದಮೇಲೆ
ರುಬ್ಬುತ್ತಾಳೆ ನೋಡಿ
ನನ್ನ ಹಿಡ್ಕೊಂಡು..!!!


                  ಜಾತ್ರೆ
ಅಂದು ಶುರುವಾಗಿತ್ತು ಪ್ರೀತಿ ದಿನಗಳ ಜಾತ್ರೆ

ಕನಸಿನನೊಂದಿಗೆ ದಿನವೂ ಯಾತ್ರೆ
ಮಾದುವೆಯಾದ ಮೇಲೆ ಶುರುವಾಗಿದೆ
ತೊಳಿಯುವುದು ಅಡಿಗೆ ಮನೆಯ ಪಾತ್ರೆ..!!!

               ಗಲ್ಲ
ಮದುವೆಯ ಹೊಸತರಲ್ಲಿ

ನನ್ನವಳ ಗಲ್ಲ…
ಆಹಾ...ರಸಗುಲ್ಲ
ಈಗ ಅವಳ ಗಲ್ಲ
ಇರುವೆ ಮುತ್ತಿದ ಬೆಲ್ಲ..!!!

               ಮೂನು
ನಮ್ಮ ಮನೆಯಲ್ಲಿ ನನ್ನಾಕೆದೆ ಕಾನೂನು
ಸಮಾಧಾನ ಮಾಡಲು ತಿನ್ನಿಸುತ್ತಿದ್ದೆ ಜಾಮೂನು
ರಾತ್ರಿ ತೋರಿಸಿ ಆಗಸದಲ್ಲಿನ ಮೂನು

ನೆನಪಿಸುತ್ತಿದ್ದೆ ಅವಳಿಗೆ ಹನಿಮೂನು..!!!

               ಬ್ಯೂಟಿ
ಕಣ್ಣೋಟದಲ್ಲೇ ಮೊದಲ ಭೇಟಿ

ಭೇಟಿಯಿಂದ ಶುರುವಾಯಿತು ಒಲವಿನ ಡ್ಯೂಟಿ
ಕೊಡಿಸಿದೆ ಆವಳಿಗೊಂದು ಸ್ಕೂಟಿ
ಸ್ಕೂಟಿ ಹತ್ತಿ ಹೋದಳು ಕೈ ಕೊಟ್ಟಿ ಬ್ಯೂಟಿ..!!!

            ಮುಟ್ಟಿದರೆ ಮುನಿ
ನನ್ನವಳು ಮೊದಲೇ ಮುಟ್ಟಿದರೆ ಮುನಿ

ಅವಳದ್ದು ಬಹಳ ಸಣ್ಣ ದನಿ
ಬೇಕಂತಲೇ ಹಾಕ್ತಾಳೆ ಕಣ್ಣೀರ ಹನಿ
ನಾ ಕೊಡಲಿಲ್ಲವೆಂದರೆ ಪಾಕೆಟ್ ಮನಿ..!!!

          ಕೊಡೆ
ನನ್ನ ನೋಟ ನಿನ್ನ ಕಡೆ
ನೀ ಹಾಗೆ ಸುಮ್ಮನೆ ನಡೆ
ಹಿಡಿಯುವೆ ನಿನಗೆ ಕೊಡೆ
ಮಳೆ ನಿಂತ ಮೇಲೆ ಪಪ್ಪಿ ಕೊಡೆ …!!!

      ಪ್ರೇಮ ಪತ್ರ
ಹೇಳುತ್ತಿರುವೆ ನೋಡು ನಿನ್ನತ್ರ
ಇದು ನನ್ನ ಮೊದಲ ಪ್ರೇಮ ಪತ್ರ
ಒಲವಿನ ಕೋರಿಕೆಗೆ ಕಾಯುತಿರುವೆ ಉತ್ರ
ತಗೊಂಡೋಗಿ ಕೊಡು ನಿನ್ನ ತಂಗಿಗೆ ಮಾತ್ರ..!!


     ಅಡಿಗೆ
ನನ್ನವಳು ಮಾಡಿಸುತ್ತಾಳೆ 
ಒಮ್ಮೊಮ್ಮೆ ನನ್ನ ಕೈಯಲ್ಲೇ
ಅಡಿಗೆ
ಉಪ್ಪು ಖಾರ ಸರಿ ಹಾಕದಿದ್ದರೆ 
ಹಿಂದೆ ಹಿಡಿದು ನಿಂತಿರುತ್ತಾಳೆ 
ಕೈಯಲ್ಲಿ ಬಡಿಗೆ..!! 


               ಮದುವೆ ಹಾರ
ನಗುನಗುತ್ತಾ ಹಾಕುತ್ತೀಯ ಕೊರಳಿಗೆ ಹಾರ
ಹೊಸತನದಲ್ಲಿ ಮಾಡಿಕೊಡುತ್ತೀಯ ರುಚಿ ರುಚಿ ಆಹಾರ
ವರುಷದ ಬಳಿಕ ಎಲ್ಲವೂ ನಿನ್ನದೇ ನಿರ್ಧಾರ
ಕಿತ್ತುಕೊಳ್ಳುವೆ ಕಣೆ ನೀ ನನ್ನೆಲ್ಲಾ ಅಧಿಕಾರ..!! 


                   ಶಾಪಿಂಗ್
ಶಾಪಿಂಗ್ ಮಾಡಲು ಹುಡುಕುತ್ತಿರುತ್ತಾಳೆ ಎಲ್ಲಿದೆ ಡಿಸ್ಕೌಂಟು
ಎಲ್ಲೇ ಹೋದರೂ ಮಾಡಲೇಬೇಕು ನಾನೇ ಪೇಮೆಂಟು
ಯಾವಾಗಲೂ ಕಮ್ಮಿಯಾಗುತ್ತಲೇ ಬರುವುದು ಖಾತೆಯ ಅಮೌಂಟು
ಇವಳಿಗೆ ಕಟ್ಟಿದಾಗಿನಿಂದ ಮೂರು ಗಂಟು..!!


                  ಗಡಿಪಾರು
ನನ್ನಾಕೆ ಮಾಡಿದ್ದಾಳೆ ಒಂದು ವಾರದಿಂದ ಮಂಚದಿಂದ ಗಡಿಪಾರು
ಬೇಕಂತಲೇ ಮಾಡುತ್ತಾಳೆ ದಿನಾಲೂ ನುಗ್ಗೆಕಾಯಿ ಸಾರು
ಕನವರಿಕೆಯ ನೆಪದಲ್ಲಿ ಕೂಗುವೆ ಅವಳ ಹೆಸರೇ ಜೋರು
ಮುಖಕ್ಕೆ ಎರಚುವಳು ಒಂದು ತಂಬಿಗೆ ನೀರು..!!  

       ಅಪರಂಜಿ
ಪ್ರೀತಿ ಪ್ರೇಮದ ದಿನಗಳಲ್ಲಿ
ನನ್ನವಳೇ ನನಗೆ
ಬಲು ಮುದ್ದಿನ ಅಪರಂಜಿ
ಈಗ ರಜೆ ಇದ್ದರೂ ಸಹ
ಹೊರಗೆ ಹೋಗದೆ 
ಮನೆಯಲ್ಲೇ ಕುಳಿತಿರುವೆ
ಅವಳಿಗೆ ಅಂಜಿ..!! 


                  ಯೋಗ

ನನ್ನವಳು ದಿನಾಲು ಎಬ್ಬಿಸುವಳು ಬೇಗ
ಮಾಡಲು ಒಂದು ತಾಸಾದರು ಯೋಗ
ಮಾಡಿದರೆ ಯೋಗ ನನಗೆ ಉಪಯೋಗ
ಇಲ್ಲವಾದರೆ ಅಡಿಗೆಮನೆಯಲ್ಲಿ
ತರಕಾರಿ ಹೆಚ್ಚಲು ಬಿಡುವಳು ನನಗೆ ಜಾಗ..!! 

            ಅವಳು
ಅವಳನ್ನು ನೋಡ ನೋಡುತ
ಡಿಕ್ಕಿ ಹೊಡೆದ ಇವಳಿಗೆ
ಅವಳನ್ನು ಕಡೆಗಣಿಸಿದೆ
ಇವಳನ್ನು ಪರಿಗಣಿಸಿದೆ..!!

             ಚೋರಿ
ಅವಳಿಗೆ ಕೊಡಿಸುತ್ತಿದ್ದೆ ಆಗಾಗ ಕಚೋರಿ
ಸದ್ದಿಲ್ಲದೆ ಹೃದಯ ಕದ್ದಳು ಚೋರಿ
ತಿನ್ನುತ್ತಿದ್ದೆವು ಗೋಬಿ ಮಂಚೂರಿ
ಹಾಕಿಹೋದಳು ನನ್ನೆದೆಗೆ ಚೂರಿ..!!

1 comment:

  1. PokerStars.com Launches In Australia With Casino Games
    PokerStars.com, the 제주 출장샵 online gaming 여주 출장샵 company founded in 2008, 충주 출장안마 has launched in 대전광역 출장샵 Australia with 문경 출장마사지 a strong focus on the high quality poker game.

    ReplyDelete